ನವದೆಹಲಿ: ಗಾಂಧಿ ಹಂತಕ ನಾಥುರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ಈಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಕಮಲ್ ಹಾಸನ್ ಅವರ ಹೇಳಿಕೆ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಾಧ್ವಿ ಪ್ರಗ್ಯಾ ಸಿಂಗ್ ಉತ್ತರಿಸುತ್ತಾ " ನಾಥುರಾಮ್ ಗೋಡ್ಸೆ ನಿಜವಾದ ದೇಶ ಭಕ್ತರಾಗಿದ್ದಾರೆ, ಅವರು ದೇಶಭಕ್ತರಾಗಿಯೇ ಉಳಿಯುತ್ತಾರೆ. ಅವರನ್ನು ಉಗ್ರ ಎಂದು ಕರೆಯುವವರು ಪರಾಮರ್ಶೆಗೆ ಒಳಪಡಿಸಬೇಕು ಅಂತವರಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ" ಎಂದು ಹೇಳಿದ್ದರು.
BJP's Pragya Thakur says, "Apne sangathan BJP mein nishtha rakhti hun, uski karyakarta hun aur party ki line meri line hai." Earlier in the day, she had said "Nathuram Godse was, is and will remain a 'deshbhakt'." BJP has condemned her statement & asked her to apologise publicly pic.twitter.com/0bPJSsgPaL
— ANI (@ANI) May 16, 2019
ಆದರೆ ಈ ಹೇಳಿಕೆ ನೀಡಿದ ಬೆನ್ನಲ್ಲೇ ದೇಶಾದ್ಯಂತ ಸಾಧ್ವಿ ಹೇಳಿಕೆ ತೀವ್ರ ಖಂಡನೆ ವ್ಯಕ್ತವಾಗಿತ್ತು.ಪ್ರತಿಪಕ್ಷಗಳ ನಾಯಕರು ಕೂಡ ಪ್ರಗ್ಯಾ ಕ್ಷಮೆಯಾಚಿಸಬೇಕೆಂದು ಪಟ್ಟು ಹಿಡಿದಿದ್ದರು.ಇನ್ನೊಂದೆಡೆಗೆ ಸ್ವತಃ ಬಿಜೆಪಿಗೆ ಪ್ರಗ್ಯಾ ಹೇಳಿಕೆಯಿಂದ ಮುಜುಗುರಕ್ಕೆ ಒಳಪಡುವಂತಾಗಿತ್ತು. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್ ಈ ಕುರಿತಾಗಿ ಪ್ರತಿಕ್ರಿಯಿಸಿ "ಬಿಜೆಪಿ ಈ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ, ಇದನ್ನು ನಾವು ಖಂಡಿಸುತ್ತೇವೆ. ಪಕ್ಷ ಅವರಿಗೆ ಈ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ಕೋರುತ್ತದೆ. ಸಾರ್ವಜನಿಕವಾಗಿ ಈ ಹೇಳಿಕೆ ನೀಡಿರುವುದಕ್ಕೆ ಅವರು ಕ್ಷಮೆ ಕೋರಬೇಕು" ಎಂದು ಹೇಳಿದ್ದರು.
ಇತ್ತೀಚಿಗೆ ಕಮಲ್ ಹಾಸನ್ ಅವರು "ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಇದು ಐತಿಹಾಸಿಕ ಸತ್ಯವೆಂದು ಹೇಳಿದ್ದರು.ಈ ಹಿನ್ನಲೆಯಲ್ಲಿ ಸಾಧ್ವಿ ಪ್ರತಿಕ್ರಿಯಿಸಿ ಅವರನ್ನು ದೇಶದ ನಿಜವಾದ ಭಕ್ತ ಎಂದು ಹೇಳಿದ್ದರು.