PM Shri schools : ಮೋದಿ ಸರ್ಕಾರ ಪ್ರಾರಂಭಿಸಲಿದೆ ಅತ್ಯಾಧುನಿಕ 'ಪಿಎಂ ಶ್ರೀ' ಶಾಲೆಗಳು!

ಗಾಂಧಿನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಶಿಕ್ಷಣ ಮಂತ್ರಿಗಳ ಸಮ್ಮೇಳನದ ಎರಡನೇ ದಿನದಂದು ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್

Written by - Channabasava A Kashinakunti | Last Updated : Jun 3, 2022, 02:57 PM IST
  • ಪಿಎಂ ಶ್ರೀ ಶಾಲೆಗಳು' ಎಂಬ ಮಾದರಿ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ತಯಾರಿ
  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
  • ಗಾಂಧಿನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಶಿಕ್ಷಣ ಮಂತ್ರಿಗಳ ಸಮ್ಮೇಳನ
PM Shri schools : ಮೋದಿ ಸರ್ಕಾರ ಪ್ರಾರಂಭಿಸಲಿದೆ ಅತ್ಯಾಧುನಿಕ 'ಪಿಎಂ ಶ್ರೀ' ಶಾಲೆಗಳು! title=

ಗುಜರಾತ್ : 'ಪಿಎಂ ಶ್ರೀ ಶಾಲೆಗಳು' ಎಂಬ ಮಾದರಿ ಶಾಲೆಗಳನ್ನು ಸ್ಥಾಪಿಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. 

ಗಾಂಧಿನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶಾಲಾ ಶಿಕ್ಷಣ ಮಂತ್ರಿಗಳ ಸಮ್ಮೇಳನದ ಎರಡನೇ ದಿನದಂದು ಮಾತನಾಡಿದ ಸಚಿವ ಧರ್ಮೇಂದ್ರ ಪ್ರಧಾನ್, ಪಿಎಂ ಶ್ರೀ ಶಾಲೆಗಳು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಪ್ರಯೋಗಾಲಯವಾಗಲಿದೆ. ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಲು ಇವು ಸಂಪೂರ್ಣವಾಗಿ ಸಜ್ಜುಗೊಳ್ಳುತ್ತವೆ" ಎಂದರು.

ಇದನ್ನೂ ಓದಿ : ನನ್ನ ಕಾಶಿ ಬಹಳಷ್ಟು ಬದಲಾಗಿದೆ, ಖಂಡಿತವಾಗಿ ಒಮ್ಮೆ ನೋಡಿ : ಪ್ರಧಾನಿ ಮೋದಿ 

ಪಿಎಂ ಶ್ರೀ ಶಾಲೆಗಳ ರೂಪದಲ್ಲಿ ಭವಿಷ್ಯದ ಮಾನದಂಡದ ಮೋಡಲ್ ರಚಿಸಲು ರಾಜ್ಯಗಳು ಮತ್ತು ಶಿಕ್ಷಣ ಪರಿಸರ ವ್ಯವಸ್ಥೆಯು ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಹೇಳಿದರು.

"ಮುಂದಿನ 25 ವರ್ಷಗಳ ಕಾಲ ಭಾರತವನ್ನು ಜಾಗತಿಕ ಕಲ್ಯಾಣಕ್ಕೆ ಬದ್ಧವಾಗಿರುವ ಜ್ಞಾನದ ಆರ್ಥಿಕತೆಯಾಗಿ ಸ್ಥಾಪಿಸಲು ನಿರ್ಣಾಯ ಕೈಗೊಳ್ಳಲಾಗಿದೆ. ನಮ್ಮದು ವಸುಧೈವ್ ಕುಟುಂಬಕಮ್ ಅನ್ನು ನಂಬುವ ನಾಗರಿಕತೆಯಾಗಿದೆ ಮತ್ತು ನಾವು ನಮ್ಮ ರಾಷ್ಟ್ರಕ್ಕೆ ಮಾತ್ರವಲ್ಲದೆ ನಮ್ಮ ವೈಯಕ್ತಿಕ ಜವಾಬ್ದಾರಿಗಳನ್ನು ಹೊಂದಿದ್ದೇವೆ ಎಂಬುದನ್ನು ನಾವು ಅರಿತುಕೊಳ್ಳಬೇಕು ಎಂದರು.

ಪ್ರಿ-ಸ್ಕೂಲ್‌ನಿಂದ ಸೆಕೆಂಡರಿವರೆಗಿನ ಎನ್‌ಇಪಿಯ 5+3+3+4 ವಿಧಾನ, ಇಸಿಸಿಇ, ಶಿಕ್ಷಕರ ತರಬೇತಿ ಮತ್ತು ವಯಸ್ಕರ ಶಿಕ್ಷಣಕ್ಕೆ ಒತ್ತು, ಶಾಲಾ ಶಿಕ್ಷಣದೊಂದಿಗೆ ಕೌಶಲ್ಯ ಅಭಿವೃದ್ಧಿಯ ಏಕೀಕರಣ ಮತ್ತು ಜಾಗತಿಕ ನಾಗರಿಕರನ್ನು ಸಿದ್ಧಪಡಿಸುವ ಹಂತಗಳಾದ ಮಾತೃಭಾಷೆಯಲ್ಲಿ ಕಲಿಕೆಗೆ ಆದ್ಯತೆ ನೀಡುವುದು ನಮ್ಮ ಗುರಿ ಎಂದು ಹೇಳಿದರು.

ಸಮಾವೇಶದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವರು, ಹಲವಾರು ರಾಜ್ಯಗಳ ಶಿಕ್ಷಣ ಸಚಿವರು, ಹೊಸ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಸ್ಟೀರಿಂಗ್ ಸಮಿತಿಯ ಅಧ್ಯಕ್ಷ ಕೆ ಕಸ್ತೂರಿರಂಗನ್ ಮತ್ತು ಹಿರಿಯರು ಉಪಸ್ಥಿತರಿದ್ದರು. ಶಿಕ್ಷಣ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ : National Herald case : ರಾಹುಲ್ ಗಾಂಧಿಗೆ ಮತ್ತೊಂದು ಸಮನ್ಸ್ ನೀಡಿದ ಇಡಿ

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News