ಲೋಕಜನ ಶಕ್ತಿ ಪಕ್ಷದ ಮುಖ್ಯಸ್ಥ ಹುದ್ದೆಯಿಂದ ಚಿರಾಗ್ ಪಾಸ್ವಾನ್ ವಜಾ

ಲೋಕಜನ ಶಕ್ತಿ ಪಕ್ಷದ ಐವರು ಬಂಡಾಯ ಸಂಸದರು ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರನ್ನು ತಮ್ಮ ಹೊಸ ನಾಯಕರಾಗಿ ಆಯ್ಕೆ ಮಾಡಿದ ಒಂದು ದಿನದ ನಂತರ, ಚಿರಾಗ್ ಪಾಸ್ವಾನ್ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ. 

Last Updated : Jun 15, 2021, 06:39 PM IST
  • ಎಲ್ಜೆಪಿ (Lok Janshakti Party) ಸಂಸ್ಥಾಪಕ ಮತ್ತು ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಚಿರಾಗ್ ಪಾಸ್ವಾನ್ ಅವರು ಪಕ್ಷದ ಆಡಳಿತವನ್ನು ವಹಿಸಿಕೊಂಡ ಎಂಟು ತಿಂಗಳ ನಂತರ ಎಲ್ಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ.
  • ಎಲ್‌ಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಒಂದು ಭಾಗವಾಗಿ ಮುಂದುವರಿಯಲಿದೆ
ಲೋಕಜನ ಶಕ್ತಿ ಪಕ್ಷದ ಮುಖ್ಯಸ್ಥ ಹುದ್ದೆಯಿಂದ ಚಿರಾಗ್ ಪಾಸ್ವಾನ್ ವಜಾ  title=

ನವದೆಹಲಿ: ಲೋಕಜನ ಶಕ್ತಿ ಪಕ್ಷದ ಐವರು ಬಂಡಾಯ ಸಂಸದರು ತಮ್ಮ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರನ್ನು ತಮ್ಮ ಹೊಸ ನಾಯಕರಾಗಿ ಆಯ್ಕೆ ಮಾಡಿದ ಒಂದು ದಿನದ ನಂತರ, ಚಿರಾಗ್ ಪಾಸ್ವಾನ್ ಅವರನ್ನು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ. 

ಏತನ್ಮಧ್ಯೆ, ಸೂರಜ್‌ಭನ್ ಸಿಂಗ್ ಅವರನ್ನು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷದ ನಾಯಕತ್ವವು ಹೊಸ ಎಲ್ಜೆಪಿ  ರಾಷ್ಟ್ರೀಯ ಅಧ್ಯಕ್ಷರ ನೇಮಕಕ್ಕಾಗಿ ಚುನಾವಣೆ ನಡೆಸುವ ಜವಾಬ್ದಾರಿಯನ್ನು ಅವರಿಗೆ ನೀಡಿದೆ.

ಇದನ್ನೂ ಓದಿ:ಪ್ರಧಾನಿ ಮೋದಿ ಬಗೆಗಿನ ನಂಬಿಕೆ ನನ್ನ ಕೊನೆಯ ಉಸಿರು ಇರುವವರೆಗೂ ಉಳಿಯಲಿದೆ- ಚಿರಾಗ್ ಪಾಸ್ವಾನ್

ತಮ್ಮ ತಂದೆ ರಾಮ್ ವಿಲಾಸ್ ಪಾಸ್ವಾನ್ ಮತ್ತು ಅವರ ಕುಟುಂಬ ಸ್ಥಾಪಿಸಿದ ಪಕ್ಷವನ್ನು ಒಟ್ಟಿಗೆ ಇರಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇನೆ ಆದರೆ ವಿಫಲವಾಗಿದೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ."ಪ್ರಜಾಪ್ರಭುತ್ವದಲ್ಲಿ ಜನರು ಸರ್ವೋಚ್ಚರು, ಪಕ್ಷದ ಮೇಲೆ ನಂಬಿಕೆ ಇಟ್ಟುಕೊಂಡವರಿಗೆ ಧನ್ಯವಾದಗಳು ಎಂದು ಹೇಳಿದರು.ಪಾಸ್ವಾನ್ (Chirag Paswan) ಅವರು ಮಾರ್ಚ್ನಲ್ಲಿ ತಮ್ಮ ತಂದೆಯ ಕಿರಿಯ ಸಹೋದರ ಪರಾಸ್ ಗೆ ಬರೆದ ಪತ್ರವೊಂದನ್ನು ಹಂಚಿಕೊಂಡು, ಅದರಲ್ಲಿ ಅವರು ಪಕ್ಷದ ಅಧ್ಯಕ್ಷರಾಗಿ ಉನ್ನತೀಕರಣ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಚಿಕ್ಕಪ್ಪನ ಅಸಮಾಧಾನವನ್ನು ಎತ್ತಿ ತೋರಿಸಿದ್ದರು.

ಎಲ್ಜೆಪಿ (Lok Janshakti Party) ಸಂಸ್ಥಾಪಕ ಮತ್ತು ಅವರ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಚಿರಾಗ್ ಪಾಸ್ವಾನ್ ಅವರು ಪಕ್ಷದ ಆಡಳಿತವನ್ನು ವಹಿಸಿಕೊಂಡ ಎಂಟು ತಿಂಗಳ ನಂತರ ಎಲ್ಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ.ಇದಕ್ಕೂ ಮುನ್ನ ಸೋಮವಾರ ಲೋಕಸಭೆಯಲ್ಲಿ ಪಕ್ಷದ ಹೊಸ ಸಂಸದೀಯ ನಾಯಕರಾಗಿ ಪಶುಪತಿ ಕುಮಾರ್ ಪಾರಸ್ ಅವರನ್ನು ಪಕ್ಷದ ಐವರು ಬಂಡಾಯ ಸಂಸದರು ಔಪಚಾರಿಕವಾಗಿ ಆಯ್ಕೆ ಮಾಡಿದರು.

ಇದನ್ನೂ ಓದಿ: ನಾನು ಒಬ್ಬಂಟಿಯಾಗಿದ್ದೇನೆ ಆದರೂ ನಿಮಗಾಗಿ ಕೆಲಸ ಮಾಡುತ್ತೇನೆ- ಚಿರಾಗ್ ಪಾಸ್ವಾನ್

ಚಿರಾಗ್ ಪಾಸ್ವಾನ್ ವಿರುದ್ಧ ದಂಗೆ ಎದ್ದ ಐದು ಸಂಸದರು ಪಶುಪತಿ ಪರಾಸ್ (ಹಾಜಿಪುರ), ಚಂದನ್ ಕುಮಾರ್ ಸಿಂಗ್ (ನವಾಡಾ), ಮೆಹಬೂಬ್ ಅಲಿ ಕೈಸರ್ (ಖಾಗರಿಯಾ), ವೀಣಾ ದೇವಿ (ವೈಶಾಲಿ), ಮತ್ತು ರಾಜಕುಮಾರ ರಾಜ್ (ಸಮಸ್ತಿಪುರ) ಅವರುಗಳು ಸೇರಿದ್ದಾರೆ.

"ನಮ್ಮ ಪಕ್ಷದಲ್ಲಿ ಆರು ಸಂಸದರು ಇದ್ದಾರೆ. ನಮ್ಮ ಪಕ್ಷವನ್ನು ಉಳಿಸಬೇಕೆಂಬುದು ಐದು ಸಂಸದರ ಬಯಕೆಯಾಗಿತ್ತು. ಹಾಗಾಗಿ ನಾನು ಪಕ್ಷವನ್ನು ಮುರಿಯಲಿಲ್ಲ. ನಾನು ಅದನ್ನು ಉಳಿಸಿದ್ದೇನೆ. ಚಿರಾಗ್ ಪಾಸ್ವಾನ್ ನನ್ನ ಸೋದರಳಿಯ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ.ಅವರ ವಿರುದ್ಧ ನನ್ನದು ಯಾವುದೇ ಆಕ್ಷೇಪಣೆ ಇಲ್ಲ "ಎಂದು ಪರಾಸ್ ಹೇಳಿದ್ದಾರೆ.

ಪರಾಸ್ ಪ್ರಸ್ತುತ ಬಿಹಾರದ ಹಾಜಿಪುರ ಲೋಕಸಭಾ ಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಎಲ್ಜೆಪಿ ಬಿಹಾರದ ಜನತಾದಳಕ್ಕೆ (ಯುನೈಟೆಡ್) ಸೇರ್ಪಡೆಗೊಳ್ಳಲಿದೆ ಎಂಬ ವದಂತಿಗಳಿಗೆ ಸಂಬಂಧಿಸಿದಂತೆ, ಪ್ರತಿಕ್ರಿಯಿಸಿದ ಅವರು "ಎಲ್ಜೆಪಿಯ ಅಸ್ತಿತ್ವವು ಮುಂದುವರಿಯುತ್ತದೆ, ನಾವು ಜೆಡಿಯುಗೆ ಸೇರುತ್ತಿಲ್ಲ. ದಿವಂಗತ ರಾಮ್ವಿಲಾಸ್ ಪಾಸ್ವಾನ್ ಅವರ ಮಹತ್ವಾಕಾಂಕ್ಷೆಯನ್ನು ನಾವು ಈಡೇರಿಸುತ್ತೇವೆ"ಎಂದು ಹೇಳಿದರು.

ಇದನ್ನೂ ಓದಿ: ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಹೆಸರನ್ನು ತೆಗೆದುಕೊಂಡು ಜನರ ದಾರಿ ತಪ್ಪಿಸುತ್ತಿದ್ದಾರೆ -ಪ್ರಕಾಶ್ ಜಾವಡೇಕರ್

ಆದರೆ, ಎಲ್‌ಜೆಪಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಒಂದು ಭಾಗವಾಗಿ ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News