ಎನ್ಕೌಂಟರ್ ಬಳಿಕ ಒಂದು ಲಕ್ಷ ರೂ. ಸಾಗಿಸುತ್ತಿದ್ದ ಕ್ರಿಮಿನಲ್ ಅರೆಸ್ಟ್

ನೋಯ್ಡಾದಲ್ಲಿ 65 ಲಕ್ಷ ರೂ.ಗಳ ದರೋಡೆ ಪ್ರಕರಣ ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಕ್ಬಾಲ್ ಎಂಬ ಆರೋಪಿಯಾಗಿದ್ದ ಎನ್ನಲಾಗಿದೆ.

Last Updated : Oct 18, 2019, 07:46 AM IST
ಎನ್ಕೌಂಟರ್ ಬಳಿಕ ಒಂದು ಲಕ್ಷ ರೂ. ಸಾಗಿಸುತ್ತಿದ್ದ ಕ್ರಿಮಿನಲ್ ಅರೆಸ್ಟ್ title=

ನವದೆಹಲಿ: ಒಂದು ಲಕ್ಷ ರೂ.ಗಳನ್ನೂ ಸಾಗಿಸುತ್ತಿದ್ದ ಮೋಸ್ಟ್ ವಾಂಟೆಡ್ ಆರೋಪಿಯನ್ನು ಎನ್ಕೌಂಟರ್ ಬಳಿಕ ದೆಹಲಿ ಪೊಲೀಸರು ಶುಕ್ರವಾರ ಮುಂಜಾನೆ ಬಂಧಿಸಿದ್ದಾರೆ.

ನೋಯ್ಡಾದಲ್ಲಿ 65 ಲಕ್ಷ ರೂ.ಗಳ ದರೋಡೆ ಪ್ರಕರಣ ಸೇರಿದಂತೆ 25 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಇಕ್ಬಾಲ್ ಎಂಬ ಆರೋಪಿಯಾಗಿದ್ದು, ಆತ ಮೆಹಮೂದ್ ಪಾಂಡೆ ಮಹ್ರೂನ್ ಮುಲ್ಲಾ ಗ್ಯಾಂಗ್ ಎಂಬ ಕ್ರಿಮಿನಲ್ ಗುಂಪಿನ ಶಾರ್ಪ್‌ಶೂಟರ್ ಎನ್ನಲಾಗಿದೆ.

ಎನ್‌ಕೌಂಟರ್ ಅಪರಾಧ ವಿಭಾಗದ ಸ್ಪೆಷಲ್ ಸೆಲ್ ಮತ್ತು ಎಸ್‌ಟಿಎಫ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಕ್ಬಾಲ್ ಗೆ ಗುಂಡು ಹಾರಿಸಿದಾಗ ಗಾಯಗೊಂಡ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಕಾರು ಮತ್ತು ಆತನ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನೂ ಸಹ ವಶಪಡಿಸಿಕೊಳ್ಳಲಾಗಿದೆ.
 

Trending News