ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೆ.ಪಿ ರಸ್ತೆಯಲ್ಲಿ ಬುಧುವಾರ ಸಂಜೆ ಉಗ್ರರ ದಾಳಿಯಲ್ಲಿ ಮೂವರು ಸಿಆರ್ಪಿಎಫ್ ಸೈನಿಕರು ಮೃತಪಟ್ಟಿದ್ದಾರೆ .ಜಮ್ಮು ಮತ್ತು ಕಾಶ್ಮೀರ ಸ್ಟೇಶನ್ ಹೌಸ್ ಆಫೀಸರ್ (ಎಸ್ಒಒ), ಸಿಆರ್ಪಿಎಫ್ ಜವಾನ್ ಮತ್ತು ಸ್ಥಳೀಯ ಮಹಿಳೆ ಸೇರಿದಂತೆ ಮೂವರು ಮಂದಿ ಗಾಯಗೊಂಡಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
Jammu & Kashmir: Injured CRPF personnel are receiving medical treatment at the government hospital in #Anantnag. pic.twitter.com/VymXc7MkVI
— ANI (@ANI) June 12, 2019
ಸದ್ಯ ಇಲ್ಲಿ ಉಗ್ರರು ಹಾಗೂ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎನ್ನಲಾಗಿದೆ. ಅನಂತ್ ನಾಗ್ ನ ಜನರಲ್ ಬಸ್ ನಿಲ್ದಾಣದ ಬಳಿ ಇರುವ ಚೀಗಲಿಯ ಆಕ್ಸ್ಫರ್ಡ್ ಶಾಲೆ ಹತ್ತಿರ ಈ ದಾಳಿ ನಡೆದಿದೆ. LO ವಾಹನ ಕರ್ತವ್ಯಗಳಿಗಾಗಿ ನಿಯೋಜಿತವಾದ B / 116 ದಳದ ಎರಡು ವಾಹನಗಳ ಮೇಲೆ ಉಗ್ರರು ಮುಸುಕು ದಾರಿಗಳಾಗಿ ಗುಂಡಿನದಾಳಿ ನಡೆಸಿದ್ದಾರೆ ಎನ್ನಲಾಗಿದೆ.
Jammu and Kashmir: Terrorists attack police party at KP road in Anantnag; heavy firing underway. (Visuals deferred by unspecified time) pic.twitter.com/Flm1X42FdR
— ANI (@ANI) June 12, 2019
ದಾಳಿ ವೇಳೆ ಸ್ಟೇಶನ್ ಹೌಸ್ ಆಫೀಸರ್ ಅವರು ಗಂಭಿರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ ಈಗ ಅವರನ್ನು ಶ್ರೀನಗರದಲ್ಲಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಉಳಿದವರನ್ನು ಅನಂತ್ ನಾಗ್ ನಲ್ಲಿರುವ ಜಂಗಲಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ.