ಅಹ್ಮದಾಬಾದ್: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಹುಟ್ಟಿಕೊಂಡಿದ್ದ 'ವಾಯು' ಚಂಡಮಾರುತ ಇಂದು ಮಧ್ಯಾಹ್ನ ಗುಜರಾತ್ ಕರಾವಳಿಗೆ ಅಪ್ಪಳಿಸಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ ಗುಜರಾತ್ಗೆ ಅಪ್ಪಳಿಸುವುದಿಲ್ಲ. ಆದರೆ, ವೆರಾವಲ್, ಪೋರಬಂದರ್ ಹಾಗೂ ದ್ವಾರಕಾ ಕರಾವಳಿ ತೀರದಲ್ಲಿ ಹಾದುಹೋಗಲಿದೆ. ಇದರಿಂದಾಗಿ ಈ ಭಾಗಗಳಲ್ಲಿ ಭಾರೀ ಗಾಳಿ-ಮಳೆ ಉಂಟಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಾಯು ಚಂಡಮಾರುತ ತನ್ನ ಪಥ ಬದಲಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಕರ್ನಾಟಕದ ಸಮುದ್ರ ತೀರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
Maharashtra:Beaches closed for public in Konkan region in view of cyclonic formation Vayu in Arbian Sea;#Visuals from Mahim beach in Mumbai. As per IMD's latest update,#CycloneVayu won't hit Gujarat;its effect will be seen on coastal regions in forms of heavy wind speed&high rain pic.twitter.com/pw5TL14fpr
— ANI (@ANI) June 13, 2019
ಇನ್ನು ಸೌರಾಷ್ಟ್ರ, ಅಮ್ರೇಲಿ, ಗಿರ್ ಸೋಮನಾಥ್, ದಿಯು, ಜುನಾಘಡ್, ಪೋರಬಂದರ್, ರಾಜ್ ಕೋಟ್, ದ್ವಾರಕಾ, ದೇವ್ ಭೂಮಿ, ಕಚ್ ಮತ್ತು ಮಹುವಾದಲ್ಲಿ ಭಾರೀ ಬಿರುಗಾಳಿ ಸಹಿತ ಮಲೆಯಾಗುತಿದೆ. ಇಲ್ಲಿ ಚಂಡಮಾರುತದ ವೇಗ 135-160 ಕಿ.ಮೀ ಇರಲಿದೆ. ಅಲ್ಲದೆ ಈ ಮಾರುತ 180 ಕಿ.ಮೀ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಈ ಪ್ರದೇಶಗಳಲ್ಲಿ 3 ಲಕ್ಷಕ್ಕೂ ಅಧಿಕ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ಈ ಭಾಗದಲ್ಲಿ ನಿಯೋಜನೆ ಮಾಡಲಾಗಿದೆ.