ನವದೆಹಲಿ: ದೆಹಲಿ ಮೂಲದ ಮಹಿಳೆಯೊಬ್ಬಳು ಡಿಆರ್ಡಿಒ ವಿಜ್ಞಾನಿ ಎಂದು ನಟಿಸಿ ತನ್ನನ್ನು ಮದುವೆಯಾಗಿದ ವ್ಯಕ್ತಿ ವಿರುದ್ಧ ದೂರು ದಾಖಲಿಸಿದ್ದಾರೆ.
ಆ ವ್ಯಕ್ತಿ ನಿರುದ್ಯೋಗಿ ಮಾತ್ರವಲ್ಲ, ಈ ಹಿಂದೆಯೂ ಮದುವೆಯಾಗಿದ್ದಾನೆ ಎಂದು ಅವರು ತಿಳಿಸಿದ್ದಾರೆ. ತನ್ನ ಉದ್ಯೋಗ ಮತ್ತು ವೈವಾಹಿಕ ಸ್ಥಿತಿಯ ಬಗ್ಗೆ ವ್ಯಕ್ತಿಯು ಸುಳ್ಳು ಹೇಳಿಕೆ ನೀಡಿದ್ದಾನೆ, ತಮ್ಮನ್ನು ಮದುವೆಯಾಗಲು ನಕಲಿ ಗುರುತಿನ ಚೀಟಿಗಳನ್ನು ಸಿದ್ದಪಡಿಸಿರುವುದಾಗಿ ಮಹಿಳೆ ದೂರು ನೀಡಿದ್ದಾಳೆ.
ಈಗ ದೂರು ನೀಡಿರುವ ಮಹಿಳೆ ಪಿಎಚ್ಡಿ ವಿದ್ಯಾರ್ಥಿನಿಯಾಗಿದ್ದು, ಅವರು ಜಿತೇಂದರ್ ಸಿಂಗ್ ಅವರನ್ನು ವಿವಾಹವಾಗಿದ್ದರು, ಅವರು ಡಿಆರ್ಡಿಒದಲ್ಲಿ ವಿಜ್ಞಾನಿ ಎಂದು ತಮ್ಮನ್ನು ಪರಿಚಯಿಸಿಕೊಂಡರು ಎಂದು ತಿಳಿಸಿದ್ದಾರೆ. ಆದರೆ ಮದುವೆಯಾದ ಕೂಡಲೇ, ಆ ವ್ಯಕ್ತಿ ನಿರುದ್ಯೋಗಿ ಮತ್ತು ಆಗಲೇ ಮದುವೆಯಾಗಿರುವ ವಿಚಾರ ತಿಳಿದು ಬಂದಿದೆ. ಇದಾದ ನಂತರ ಅವರು ಪೋಲೀಸರಿಗೆ ದೂರು ನೀಡಿದ್ದಾರೆ.
'ಮಹಿಳೆಯ ದೂರಿನ ಮೇರೆಗೆ ಹೆಸರನ್ನು ತಡೆಹಿಡಿಯಲಾಗಿದೆ, ದ್ವಾರಕಾ ಉತ್ತರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿದ್ದು, ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.