ಭುವನೇಶ್ವರ್: ಪೆಟ್ರೋಲಿಯಂ ಮತ್ತು ನೈಸರ್ಗಿಕ ಇಂಧನ ಸಚಿವ ಧರ್ಮೇಂದ್ರ ಪ್ರಧಾನ ಒಡಿಶಾದಲ್ಲಿ 100 ಉಜ್ವಲ ಸ್ಯಾನಿಟರಿ ನ್ಯಾಪ್ಕಿನ್ ಘಟಕವನ್ನು ಪ್ರಾರಂಭಿಸುವುದಾಗಿ ಭಾನುವಾರ ಹೇಳಿದರು. ಇದರಿಂದಾಗಿ ಒರಿಸ್ಸಾದಲ್ಲಿ 2.25 ಕೋಟಿ ಮಹಿಳೆಯರು ಸಶಕ್ತ ಮತ್ತು ಸ್ವಾವಲಂಬಿಯನ್ನಾಗಿ ಮಾಡಬಹುದು ಎಂದು ಅವರು ತಿಳಿಸಿದರು.
ಈ ಉಪಕ್ರಮದಲ್ಲಿ ಒಡಿಶಾದ 30 ಜಿಲ್ಲೆಗಳಲ್ಲಿ 93 ಘಟಕಗಳನ್ನು ತೆರೆಯಲಾಗುತ್ತದೆ. ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಗಳು) ಸಾಮಾನ್ಯ ಉತ್ಪಾದನಾ ಕೇಂದ್ರಗಳಲ್ಲಿ (CSCs) 100 ಉತ್ಪಾದನಾ ಘಟಕಗಳನ್ನು ರೂ. 2.94 ಕೋಟಿ ವೆಚ್ಚದಲ್ಲಿ ಸ್ಥಾಪಿಸುತ್ತವೆ ಎಂದು ಪ್ರಧಾನ್ ಮಾಹಿತಿ ನೀಡಿದರು.
ಶುಚಿತ್ವ ಮತ್ತು ನೈರ್ಮಲ್ಯದ ಮೇಲೆ ಮಹಿಳೆಯರಿಗೆ ಶಿಕ್ಷಣ ನೀಡುವುದು, ಕಡಿಮೆ ವೆಚ್ಚದ ಪರಿಸರ-ಸ್ನೇಹಿ ಪ್ಯಾಡ್ಗಳಿಗೆ ಪ್ರಾತಿನಿಧ್ಯತೆ ಹೆಚ್ಚಿಸುವುದು ಮತ್ತು ಗ್ರಾಮೀಣ ಉದ್ಯೋಗ ಮತ್ತು ಆರ್ಥಿಕತೆಯನ್ನು ಉತ್ತೇಜಿಸುವುದು ಈ ಯೋಜನೆಯ ಗುರಿಯಾಗಿದೆ. ಪ್ರತಿ ಕೇಂದ್ರದಲ್ಲಿ ಕನಿಷ್ಟ 10 ಮಹಿಳೆಯರು ಉದ್ಯೋಗ ಪಡೆಯಲಿದ್ದಾರೆ. ಐದು ಮಹಿಳೆಯರಲ್ಲಿ ನಾಲ್ವರು ನಾಪ್ಕಿನ್ಗಳನ್ನು ತಯಾರಿಸುತ್ತಾರೆ ಮತ್ತು ಇತರರು ಅವುಗಳನ್ನು ಮಾರಾಟ ಮಾಡುವ ಕೆಲಸ ಮಾಡುತ್ತಾರೆ ಎಂದು ಪ್ರಧಾನ್ ಹೇಳಿದರು.
ಮಹಿಳೆಯರಿಗೆ ಉದ್ಯೋಗಾವಕಾಶವನ್ನು ನೀಡುವ ವಿಶ್ವಾಸವನ್ನು ವ್ಯಕ್ತಪಡಿಸುವ ಕೇಂದ್ರ ಸರಕಾರವು ಒಡಿಶಾದಲ್ಲಿ 2.25 ಕೋಟಿ ಮಹಿಳೆಯರಿಗೆ ಹಣಕಾಸಿನ ನೆರವು ಮತ್ತು ಸ್ವಾವಲಂಬನೆ ಬದುಕನ್ನು ನೀಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
ಸ್ಯಾನಿಟರಿ ನ್ಯಾಪ್ಕಿನ್ ಬಗ್ಗೆ ಸಾರ್ವಜನಿಕ ಚಳುವಳಿಯ ಅಗತ್ಯತೆಗಳನ್ನೂ ಒತ್ತಿ ಹೇಳಿದ ಅವರು, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎಫ್ಎಫ್ಹೆಚ್ಎಸ್) ಪ್ರಕಾರ ಒಡಿಶಾದಲ್ಲಿ 33.5 ರಷ್ಟು ಮಹಿಳೆಯರು ಮಾತ್ರ ಸ್ಯಾನಿಟರಿ ನ್ಯಾಪ್ಕಿನ್ ಬಳಸುತ್ತಾರೆ ಎಂದು ತಿಳಿಸಿದರು.