ನವದೆಹಲಿ: ಕ್ರೀಸ್ ನಲ್ಲಿ ರೋಹಿತ್ ಶರ್ಮಾ ಇದ್ದರೆ ಬೌಲರ್ ಗಳನ್ನು ಮನಬಂದಂತೆ ಥಳಿಸುತ್ತಾರೆ ಹೀಗಾಗಿ ಅವರಿಗೆ ಬ್ಯಾಟಿಂಗ್ ಶೈಲಿಯ ಬಗ್ಗೆ ಅನೇಕ ವಿದೇಶಿ ಆಟಗಾರರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಂತವರ ಸಾಲಿಗೆ ಈಗ ಮತ್ತೊಬ್ಬ ಆಟಗಾರ ರೋಹಿತ್ ಬ್ಯಾಟಿಂಗ್ ಶೈಲಿಗೆ ಉಘೇ ಅಂತಾ ಹೇಳಿದ್ದಾರೆ.
With India now in Australia for their lengthy tour, @Gmaxi_32 analyses one of their superstar batsmen - @ImRo45@BKTtires | #AUSvIND pic.twitter.com/YlYdStkLuN
— Direct Hit (@directhitau) November 17, 2018
ಆಷ್ಟ್ರೆಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಈಗ directhit.com.au ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ" ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಶೈಲಿಯು ಪ್ರಯತ್ನ ರಹಿತವೆನ್ನುವಂತೆ ಇದೆ,ಮತ್ತು ಅವರು ಏಕದಿನ ಕ್ರಿಕೆಟ್ ನಲ್ಲಿ 264 ರನ್ ಗಳಿಸಿದ್ದಾರೆ ಆದ್ದರಿಂದ ಅವರನ್ನು ನೀವು ಸ್ಟಾಪ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಏಕದಿನ ಕ್ರಿಕೆಟ್ ನಲ್ಲಿ ರೋಹಿತ್ ಅವರು ಅವರು ಟೈಮಿಂಗ್ ತೆಗೆದುಕೊಂಡು ಬೌಲನ್ನು ಎದುರಿಸುವ ರೀತಿ ಮತ್ತು ಅವರು ವೇಗದ ಮತ್ತು ಸ್ಪಿನ್ ಬೌಲಿಂಗ್ ಆಗಲಿ ಎರಡಕ್ಕೂ ತಮಗೆ ಇಚ್ಚೆಗನುಗುಣವಾಗಿ ಬಾರಿಸುತ್ತಾರೆ ಎಂದು ಗ್ಲೆನ್ ಮ್ಯಾಕ್ಸ್ವೆಲ್ ತಿಳಿಸಿದ್ದಾರೆ.