West Bengal And Assam Phase 2 Voting: ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗೆ ಇಂದು ಎರಡನೇ ಹಂತದಲ್ಲಿ ಮತ ಚಲಾಯಿಸಲಾಗುವುದು. ಪಶ್ಚಿಮ ಬಂಗಾಳದಲ್ಲಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಪಶ್ಚಿಮ ಬಂಗಾಳದಲ್ಲಿ 75 ಲಕ್ಷ ಮತದಾರರು 171 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಚುನಾವಣಾ ಆಯೋಗವು ಎಲ್ಲಾ 10,620 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳಾಗಿ ಘೋಷಿಸಿರುವುದರಿಂದ ಕೇಂದ್ರ ಪಡೆಗಳ ಸುಮಾರು 651 ಕಂಪನಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಸ್ಸಾಂನ 39 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲಾಗುವುದು. ಅಸ್ಸಾಂನ 39 ಸ್ಥಾನಗಳಿಗೆ 345 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಈ ಹಂತದಲ್ಲಿ ನಂದಿಗ್ರಾಮ್ನಲ್ಲೂ ಮತದಾನ ನಡೆಯಲಿದೆ. ಹಾಗಾಗಿ ಎಲ್ಲರ ಕಣ್ಣುಗಳು ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದತ್ತ ನೆಟ್ಟಿವೆ, ಅಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಹಾಗೂ ಅವರ ಮಾಜಿ ಮಿತ್ರ ಮತ್ತು ಬಿಜೆಪಿ ಅಭ್ಯರ್ಥಿ ಶುಭೇಂಡು ಅಧಿಕಾರಿ ವಿರುದ್ಧ ಕಣದಲ್ಲಿದ್ದಾರೆ. ರಾಜ್ಯದ ಪೂರ್ವ ಮಿಡ್ನಾಪೋರ್ ಜಿಲ್ಲೆಯಲ್ಲಿ ಬೀಳುವ ಈ ಪ್ರದೇಶವನ್ನು ಶುಭೇಂಡು ಅಧಿಕಾರಿ ಮತ್ತು ಅವರ ಕುಟುಂಬದ ಭದ್ರಕೋಟೆ ಎಂದು ಕರೆಯಲಾಗುತ್ತದೆ. ಚುನಾವಣಾ ಪ್ರಚಾರದ ವೇಳೆ ಮಮತಾ ಮತ್ತು ಶುಭೇಂಡು ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆದಿದೆ. ಇಂದು ಈ ಇಬ್ಬರೂ ನಾಯಕರಲ್ಲಿ ಮತದಾರರು ಯಾರ ಕೈ ಹಿಡಿಯಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ವಾಸ್ತವವಾಗಿ, ಪೂರ್ವ ಮತ್ತು ಪಶ್ಚಿಮ ಮಿಡ್ನಾಪೋರ್ ಸೇರಿದಂತೆ ಮೊದಲ ಮತ್ತು ಎರಡನೇ ಹಂತದಲ್ಲಿ ಶುಭೇಂಡು ಅಧಿಕಾರಿ ಮತ್ತು ಅವರ ಕುಟುಂಬ 40-45 ಸ್ಥಾನಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ - West Bengal Assembly Election 2021: ECI ಕಟ್ಟುನಿಟ್ಟಿನ ಕ್ರಮ , RO ಸೇರಿದಂತೆ ಮೂವರು ಅಧಿಕಾರಿಗಳ ವರ್ಗಾವಣೆ
ಬಂಕುರಾ, ಪುರುಲಿಯಾ, ಜಾರ್ಗ್ರಾಮ್ ಮತ್ತು ಬಿರ್ಭಮ್ ಹೊರತುಪಡಿಸಿ, ಅಲ್ಪಸಂಖ್ಯಾತ ಪ್ರಾಬಲ್ಯದ ಮುರ್ಷಿದಾಬಾದ್ನಲ್ಲಿ ಕುಟುಂಬವು ಅಪಾರ ಪ್ರಭಾವವನ್ನು ಹೊಂದಿದೆ. ಈ ಹಿಂದೆ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಅಧಿಕಾರಿ ಕುಟುಂಬದ ಪ್ರಭಾವದ ಲಾಭವನ್ನು ಪಡೆಯುತ್ತಿತ್ತು. ಆದರೆ ಈ ಚುನಾವಣೆಯಲ್ಲಿ ಶುಭೇಂಡು ಅಧಿಕಾರಿ ಮಮತಾ ಅವರ ವಿರುದ್ಧ ಬಿಜೆಪಿಯಿಂದ ಕಣದಲ್ಲಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ತನ್ನ ಸ್ವಕ್ಷೇತ್ರವನ್ನು ಬಿಟ್ಟು ನಂದಿಗ್ರಾಮ್ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಮುಂದಾಗಿದ್ದು ಈ ಕ್ಷೇತ್ರವು ಟಿಎಂಸಿ-ಬಿಜೆಪಿ ಎರಡೂ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.
ನಾಲ್ಕು ಜಿಲ್ಲೆಗಳ 30 ವಿಧಾನಸಭಾ ಸ್ಥಾನಗಳಲ್ಲಿ ಇಂದು ಚುನಾವಣಾ ಹೋರಾಟ:
ಪಶ್ಚಿಮ ಬಂಗಾಳದಲ್ಲಿ ನಾಲ್ಕು ಜಿಲ್ಲೆಗಳಲ್ಲಿ ಒಟ್ಟು 30 ವಿಧಾನಸಭಾ ಸ್ಥಾನಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ಪೈಕಿ ಒಂಬತ್ತು ಸ್ಥಾನಗಳು ಪೂರ್ವ ಮದೀನಾಪುರ ಜಿಲ್ಲೆಯಲ್ಲಿದ್ದರೆ, 8 ಸ್ಥಾನಗಳು ಬಂಕುರಾದಲ್ಲಿ, ಪಶ್ಚಿಮದಲ್ಲಿ 9 ಸ್ಥಾನಗಳು ಮತ್ತು 24 ದಕ್ಷಿಣ ಪರಗಣಗಳಲ್ಲಿ 4 ಸ್ಥಾನಗಳನ್ನು ಪಡೆದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ತೃಣಮೂಲ ಕಾಂಗ್ರೆಸ್ ಬಹುಮತ ಪಡೆದಿತ್ತು. ಆದರೆ ಈ ಬಾರಿಯ ಚುನಾವಣೆಯಲ್ಲಿ ಟಿಎಂಸಿ-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಇದನ್ನೂ ಓದಿ - J&K: ಕೊರೊನಾ ಲಸಿಕೆ ಹಾಕಿಸಿಕೊಂಡ 28 ದಿನಗಳ ಬಳಿಕ ಸೋಂಕಿಗೆ ಗುರಿಯಾದ Farooq Abdullah
ಅಸ್ಸಾಂನಲ್ಲಿ 2016 ರ ಯಶಸ್ಸನ್ನು ಪುನರಾವರ್ತಿಸಲು ಬಿಜೆಪಿಯ ತಂತ್ರ:
ಅದೇ ಸಮಯದಲ್ಲಿ, ಎರಡನೇ ಹಂತದಲ್ಲಿ ಅಸ್ಸಾಂನ (Assam) 39 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾಯಿಸಲಾಗುವುದು. ಇವುಗಳಲ್ಲಿ ಹೆಚ್ಚಿನ ಸ್ಥಾನಗಳು ಮಧ್ಯ ಅಸ್ಸಾಂನ ಬರಾಕ್ ಕಣಿವೆ ಮತ್ತು ಕೆಲವು ಸ್ಥಾನಗಳು ಕೆಳ ಅಸ್ಸಾಂನಲ್ಲಿವೆ. ಮೊದಲ ಹಂತದಲ್ಲಿ, ಅಪ್ಪರ್ ಅಸ್ಸಾಂನ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಮತದಾನ ಮಾಡಲಾಗಿದೆ. ಮೊದಲ ಹಂತದಲ್ಲಿ 47 ಸ್ಥಾನಗಳಲ್ಲಿ ಮತದಾನ ನಡೆಯಿತು. ಇಂದು 39 ಸ್ಥಾನಗಳಲ್ಲಿ ಮತದಾನ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ 39 ಸ್ಥಾನಗಳಲ್ಲಿ ಬಿಜೆಪಿಗೆ 22, ಕಾಂಗ್ರೆಸ್ 6, ಎಐಯುಡಿಎಫ್ 5, ಅಸ್ಸಾಂ ಗಣ ಪರಿಷತ್ 2 ಮತ್ತು ಬಿಪಿಎಫ್ 4 ಸ್ಥಾನಗಳನ್ನು ಪಡೆದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.