ಭೂಪಾಲ್ : ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಪಂಚಾಯತ್ ದಿನದಂದು ಮಾತನಾಡುತ್ತಾ ಬರಗಾಲದಲ್ಲಿ ಪ್ರತಿ ನೀರಿನ ಸಂರಕ್ಷಣೆ ಅಗತ್ಯವೆಂದು ತಿಳಿಸಿದರು.
ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯ ರಾಮಪುರ್ ದಲ್ಲಿ ಮಾತನಾಡಿದ ಪ್ರಧಾನಿ ಮೋದಿ "ಗ್ರಾಮಗಳಲ್ಲಿ ನೀರಿನ ಸಂರಕ್ಷಣೆಗಾಗಿ ನೀವು ಏನು ಮಾಡಬಹುದು ಎನ್ನುವುದರ ಕುರಿತಾಗಿ ಚಿಂತಿಸಿ, ಹರಿಯುವ ನೀರನ್ನು ಸಂರಕ್ಷಿಸಬೇಕು,ಆ ಕೆಲಸ ಹಳ್ಳಿಗಳಿಂದ ಪ್ರಾರಂಭವಾಗಬೇಕು ಎಂದು ತಿಳಿಸಿದರು. ಭಾರತದ ಹಳ್ಳಿಗಳು ಯಾವಾಗ ಅಭಿವೃದ್ದಿ ಹೊಂದುತ್ತವೆಯೋ ಆಗ ದೇಶವೋ ಕೂಡ ಬದಲಾಗಲಿದೆ ತಿಳಿಸಿದರು.
ಮಧ್ಯಪ್ರದೇಶದ ಅನೇಕ ನದಿಗಳು ಬತ್ತಿಹೋಗಿವೆ ಮತ್ತು ಅವರಲ್ಲಿ ಅರ್ಧದಷ್ಟು ಜನರಿಗೆ ದಿನನಿತ್ಯದ ನೀರು ಪೂರೈಕೆಯಾಗುತ್ತಿಲ್ಲ, ಸದ್ಯ ,18 ಜಿಲ್ಲೆಗಳಲ್ಲಿ 132 ತಹಶೀಲ್ ಗಳನ್ನು ಬರಗಾಲವನ್ನು ಘೋಷಿಸಲಾಗಿದೆ.
ಈ ಹಿನ್ನಲೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ "ಗ್ರಾಮೀಣಾಭಿವೃದ್ಧಿ ವಿಷಯ ಬಂದಾಗ ಬಜೆಟ್ ಪ್ರಮುಖವಾಗುತ್ತದೆ ಕಳೆದ ಕೆಲವು ವರ್ಷಗಳಲ್ಲಿ ಯೋಜನೆಗಾಗಿ ಹಣವನ್ನು ನಿಗದಿಪಡಿಸಿದ ಹಣವು ಪಾರದರ್ಶಕವಾಗಿ ವ್ಯಯವಾದ ಬಗ್ಗೆ ಜನರು ಮಾತನಾಡುತ್ತಿದ್ದಾರೆ" ಎಂದು ಅವರು ತಿಳಿಸಿದ