ಸೂರತ್: ಗುಜರಾತ್ನ ಸೂರತ್ನಲ್ಲಿನ ಜವಳಿ ಮಾರುಕಟ್ಟೆಯಲ್ಲಿ ಮುಂಜಾನೆ ತೀವ್ರ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿಯ ಪ್ರಕಾರ ಮುಂಜಾನೆ 4 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಪ್ರಸ್ತುತ, ಅಗ್ನಿಶಾಮಕ ದಳದ 50 ವಾಹನಗಳು ಸ್ಥಳಕ್ಕೆ ತಲುಪಿದ್ದು, ಬೆಂಕಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ.
Gujarat: Fire breaks out in Raghuveer Market in Surat. 40 fire tenders at the spot pic.twitter.com/k0FQRpyFTM
— ANI (@ANI) January 21, 2020
ಮಾಹಿತಿಯ ಪ್ರಕಾರ, ಸೂರತ್ನ 10 ಅಂತಸ್ತಿನ ರಘುವೀರ್ ಜವಳಿ ಮಾರುಕಟ್ಟೆಯಲ್ಲಿ ಈ ಬೆಂಕಿ ದುರಂತ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಂತೆ 50 ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿವೆ. ಬೆಂಕಿ ಎಷ್ಟು ಭಯಾನಕವಾಗಿದೆ ಎಂದರೆ ಪ್ರದೇಶದ ಸುತ್ತ ಹೊಗೆ ಆವರಿಸಿದೆ. ರಘುವೀರ್ ಜವಳಿ ಸರೋಲಿ ಪ್ರದೇಶದಲ್ಲಿದೆ. ಕೆಲವು ದಿನಗಳ ಹಿಂದೆ ಈ ಮಾರುಕಟ್ಟೆಯ ಒಂಬತ್ತನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬುದು ಗಮನಾರ್ಹವಾಗಿದೆ. ಘಟನೆಯಲ್ಲಿ ಯಾವುದೇ ಸಾವುನೋವುಗಳ ಮಾಹಿತಿ ಸದ್ಯಕ್ಕೆ ಬಹಿರಂಗವಾಗಿಲ್ಲ. ಇನ್ನು ಈ ಅಗ್ನಿ ದುರಂತಕ್ಕೆ ಕಾರಣ ಏನೆಂಬುದೂ ಕೂಡ ಇನ್ನೂ ತಿಳಿದುಬಂದಿಲ್ಲ.