ಪಾಟ್ನಾ:ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆಗೆ ಬಿಹಾರದ ರಾಜಕೀಯ ಅಖಾಡದಲ್ಲಿ ಕಾವೇರತೊಡಗಿದೆ. ಬಿಹಾರದ ಬಹುತೇಕ ಬಿಜೆಪಿ ನಾಯಕರು ರಾಹುಲ್ ಅವರ ಹೇಳಿಕೆಗೆ ಆಕ್ರೋಶವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಮೋದಿ ರಾಹುಲ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಹೇಳಿಕೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಾಗ್ದಾಳಿ ನಡೆಸಿರುವ ಸುಶೀಲ್ ಮೋದಿ " ತಮ್ಮ ತಾತ ಫೀರೋಜ್ ಖಾನ್ ಅವರ ವಾಸ್ತವಿಕ ಅವಮಾನವನ್ನು ಮರೆತು "ಗಾಂಧಿ' ಸರ್ನೇಮ್ ಬಳಸಿ, ಜನರನ್ನು ಭಾವನಾತ್ಮಕವಾಗಿ ಬ್ಲಾಕ್ ಮೆಲ್ ಮಾಡಿದ ಕುಟುಂಬ ಇಡೀ ದೇಶವನ್ನೇ ಆಳಿದೆ. ಈ ಕುಟುಂಬದ ಯಾವುದೇ ಸದಸ್ಯ ಬೇರೆಯವರ ಕೃಪೆಯಿಂದ ದೊರೆತ ಹೆಸರಿನ ಮೇಲೆ ಗರ್ವಪಡಬಾರದು. ಒಂದು ವೇಳೆ ರಾಹುಲ್ ಅವರಿಗೆ ತಮ್ಮ ಮೇಲೆ ಭರವಸೆ ಇದ್ದರೆ, ಅವರು ತಮ್ಮ ವಾಸ್ತವಿಕ ಹೆಸರನ್ನಿಟ್ಟುಕೊಂಡು ಚುನಾವಣೆಗೆ ಇಳಿಯಲಿ ನೋಡೋಣ" ಎಂದು ಚಾಲೆಂಜ್ ಮಾಡಿದ್ದಾರೆ. ಒಂದು ವೇಳೆ ಅವರ ಹೆಸರು ರಾಹುಲ್ ಸಾವರ್ಕರ್ ಆಗಿದ್ದರೆ ಅವರು ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ಹಾಗೂ ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ ಎಂದು ಮೋದಿ ಹೇಳಿದ್ದಾರೆ.
जिस परिवार ने अपने पितामह फिरोज खान के वास्तविक उपनाम को मिटाकर "गांधी" सरनेम का इस्तेमाल किया और जनता की इमोशनल ब्लैकमेलिंग करते हुए देश पर राज किया, उसके किसी शख्स को किसी की कृपा से मिले नाम पर इतराना नहीं चाहिए।
राहुल खान गांधी को खुद पर यदि भरोसा है, तो वे अपने वास्तविक.. pic.twitter.com/ysvsxEWMYF
— Sushil Kumar Modi (@SushilModi) December 14, 2019
ಇನ್ನೊಂದೆಡೆ ರಾಹುಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ RJD ಶಾಸಕ ರಾಹುಲ್ ತಿವಾರಿ, ರಾಹುಲ್ ಹೇಳಿಕೆ 'ರಾಜಕೀಯ ದಾರಿದ್ರ್ಯ' ಎಂದಿದ್ದು, ಸುಶೀಲ್ ಮೋದಿ, ಗಿರಿರಾಜ್ ಸಿಂಗ್ ಗುಡಿಸಲುಗಳಲ್ಲಿ ವಾಸಿರುವವರ ಭಾಷೆ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ಇನ್ನೊಂದೆಡೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ನಿಖಿ ಆನಂದ್, ರಾಜಕೀಯ ಲಾಭಕ್ಕಾಗಿ ಫಿರೋಜ್ ಗಾಂಧಿ ಪರಂಪರೆಯನ್ನು ಮರೆತ ಕುಟುಂಬ ನೆಹರು ಪರಂಪರೆಯನ್ನು ಬೆಳೆಸಿದೆ. ರಾಹುಲ್ ಗಾಂಧಿ ಅವರಿಗೆ ತಮ್ಮ ತಾತನ ಪುಣ್ಯತಿಥಿ ಕೂಡ ನೆನಪಿಲ್ಲ. ಗಾಂಧಿ ಕುಟುಂಬ ಇದುವರೆಗೆ ಫಿರೋಜ್ ಗಾಂಧಿ ಅವರಿಗೆ ಶೃದ್ಧಾಂಜಲಿ ಕೂಡ ಸಮರ್ಪಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಹುಲ್ ಕುರಿತು ಟಿಪ್ಪಣಿ ಮಾಡಿರುವ ಸುಶೀಲ್ ಮೋದಿ ಹಾಗೂ ಗಿರಿರಾಜ್ ಸಿಂಗ್ ಬಗ್ಗೆ ಮಾತನಾಡಿರುವ JDU ಮುಖಂಡ ಗುಲಾಂ ಗೌಸ್, ಹೇಳಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸುಶೀಲ್ ಮೋದಿ ಅವರಿಂದ ತಮಗೆ ಈ ಅಪೇಕ್ಷೆ ಇರಲಿಲ್ಲ ಎಂದ ಗೌಸ್, ಖಾನ್ ಸರ್ನೇಮ್ ಬಳಸುವವರು ಚುನಾವಣೆಗಳಲ್ಲಿ ಸೋಲುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ. ಗಿರಿರಾಜ್ ಅವರ ಹೇಳಿಕೆಗೆ ತಾನು ಕ್ಷಮಿಸುವೆ ಆದರೆ, ಸುಶೀಲ್ ಮೋದಿ ಮಾತ್ರ ಇಂತಹ ಹೇಳಿಕೆಗಳನ್ನು ನೀಡಬಾರದು ಎಂದಿದ್ದಾರೆ.
ಇನ್ನೊಂದೆಡೆ ಸುಶೀಲ್ ಮೋದಿ ಹಾಗೂ ಗಿರಿರಾಜ್ ಸಿಂಗ್ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮುಖಂಡ ಪ್ರೇಮಚಂದ್ರ ಮಿಶ್ರಾ, ಸುಶೀಲ್ ಮೋದಿ ಹಾಗೂ ಗಿರಿರಾಜ್ ಸಿಂಗ್ ಗಳಂತಹ ನಾಯಕರು ರಾಜಕೀಯಕ್ಕೆ ಅಂಟಿದ ಅಪೆಂಡಿಕ್ಸ್ ಎಂದಿದ್ದಾರೆ. ರಾಜಕೀಯದಲ್ಲಿ ಅವರ ಅವಶ್ಯಕತೆಯೇ ಇಲ್ಲ ಎಂದ ಮ್ರಿಶ್ರಾ, ರಾಹುಲ್ ಗಾಂಧಿ ಹುಟ್ಟು ಗಾಂಧಿಯಾಗಿದ್ದು, ಹೆಸರು ಮತ್ತು ಸರ್ನೇಮ್ ಗಳನ್ನು ಬಿಜೆಪಿ ನಾಯಕರು ಬದಲಾಯಿಸುತ್ತಾರೆ ಎಂದು ಆರೋಪಿಸಿದ್ದಾರೆ.