ನವದೆಹಲಿ : ಜಪಾನ್ ಆಟೋಮೊಬೈಲ್ ಕಂಪನಿ ನಿಸ್ಸಾನ್ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಕಾನೂನು ನೋಟೀಸ್ ನೀಡಿದೆ.
ರಾಯಿಟರ್ಸ್ ಅವಲೋಕಿಸಿದ ವಿಷಯ ಮತ್ತು ದಾಖಲೆಗಳನ್ನು ತಿಳಿದಿರುವ ವ್ಯಕ್ತಿಯ ಪ್ರಕಾರ, ಜಪಾನ್ ತಯಾರಕ ನಿಸ್ಸಾನ್ ಮೋಟರ್ ಸಂಸ್ಥೆ ಭಾರತದ ವಿರುದ್ಧ ಇಂಟರ್ನ್ಯಾಷನಲ್ ಆರ್ಬಿಟರಿ ಆಶ್ರಯದಲ್ಲಿ, ರಾಜ್ಯ ಪ್ರೋತ್ಸಾಹಧನದ ವಿವಾದದಲ್ಲಿ 750 ಮಿಲಿಯನ್ ಡಾಲರ್ಗಿಂತಲೂ ಹೆಚ್ಚಿನ ಹಣವನ್ನು ಪಾವತಿಸದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ ಎಂದಿದ್ದಾರೆ.
ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಲಾದ ಕಾನೂನು ನೋಟಿಸ್ನಲ್ಲಿ, ದಕ್ಷಿಣದ ರಾಜ್ಯದಲ್ಲಿ ಕಾರ್ ಉತ್ಪಾದನಾ ಘಟಕವನ್ನು ಸ್ಥಾಪಿಸಲು 2008ರಲ್ಲಿ ಒಪ್ಪಂದದ ಭಾಗವಾಗಿ ತಮಿಳುನಾಡು ಸರ್ಕಾರದಿಂದ ಬಾಕಿ ಇರುವ ಪ್ರೋತ್ಸಾಹ ಧನ ಪಾವತಿಸುವಂತೆ ಕೋರಿತ್ತು.
2015 ರಲ್ಲಿ ಬಾಕಿ ಪಾವತಿಗಾಗಿ ರಾಜ್ಯ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಲಾಗಿತ್ತು. ಅಲ್ಲದೆ ಕಂಪನಿಯ ಚೇರ್ಮನ್ ಕಾರ್ಲೋಸ್ ಘೋಸ್ನ್ ಅವರು ಫೆಡರಲ್ ನೆರವು ಕೋರಿ ಕಳೆದ ವರ್ಷ ಮಾರ್ಚ್ನಲ್ಲಿ ಮೋದಿಗೆ ಅವರಿಗೆ ಬಾಕಿ ಹಣ ಪಾವತಿ ಕುರಿತಾಗಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರೂ ಯಾವುದೇ ಫಲಿತಾಂಶ ದೊರೆತಿಲ್ಲ ಎಂದು ನಿಸ್ಸಾನ್ ನೀಡಿರುವ ನೋಟಿಸ್ನಲ್ಲಿ ಹೇಳಿದೆ.