ಕೆಲವು ಮಹಿಳೆಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು ಎಂಬ ಕಾರಣಕ್ಕೆ ಪ್ರೇರಕ ಗುರು(motivational guru) ಭಾಷಣ ಮಾಡದೆ ಈವೆಂಟ್‌ನಿಂದ ಹೊರನಡೆದ ವಿಲಕ್ಷಣ ಘಟನೆಯೊಂದು ನದೆದಿದೆ. ದಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಮತ್ತು ಆಲ್ ರಾಜಸ್ಥಾನ್ ಇನ್ ಸರ್ವಿಸ್ ಡಾಕ್ಟರ್ಸ್ ಅಸೋಸಿಯೇಶನ್ (ARISDA) ಆಯೋಜಿಸಿದ್ದ ರಾಜ್ ಮೆಡಿಕಾನ್ 2019 ರ ಕೊನೆಯ ದಿನವಾದ ಭಾನುವಾರ ಈ ಘಟನೆ ಸಂಭವಿಸಿದೆ.
ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಗೆ ಕುಳಿತುಕೊಳ್ಳಲು ಅವಕಾಶ ನೀಡದಂತೆ ಸ್ವಾಮಿ ಜ್ಞಾನವತ್ಸಲ್ಯ ಸಂಘಟಕರನ್ನು ಕೇಳಿಕೊಂಡಿದ್ದಾರೆ ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ. ಗುರುಗಳ ಈ ಷರತ್ತಿನ ಬಗ್ಗೆ ಮಹಿಳಾ ವೈದ್ಯರಿಗೆ ತಿಳಿಸಿದರಾದರೂ, ಅವರು ಅದನ್ನು ವಿರೋಧಿಸಲು ಪ್ರಾರಂಭಿಸಿದರು. ಇನ್ನೂ ಕೆಲವು ವೈದ್ಯರು ಸೇರಿಕೊಂಡು ಸ್ವಾಮಿ ಜ್ಞಾನವತ್ಸಲ್ಯ ಅವರ ಭಾಷಣವನ್ನು ಬಹಿಷ್ಕರಿಸಲು ನಿರ್ಧರಿಸಿದರು. ವೈದ್ಯರು ಮತ್ತು ಸಂಘಟಕರ ನಡುವೆ ನಡೆದ ವಾಗ್ವಾದದ ಬಳಿಕ ಈ ಸಮಸ್ಯೆಯನ್ನು ಪರಿಹರಿಸಿ, ಮೊದಲ ಎರಡು ಸಾಲುಗಳನ್ನು ಖಾಲಿ ಬಿಡುವಂತೆ ನಿರ್ಧರಿಸಲಾಯಿತು ಎನ್ನಲಾಗಿದೆ.
ಜೈಪುರದ ಬಿರ್ಲಾ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆದರೆ ಸ್ವಾಮಿ ಜ್ಞಾನವತ್ಸಲ್ ತಮ್ಮ ಭಾಷಣ ಮಾಡದೆ ಸ್ಥಳದಿಂದ ಹೊರ ನಡೆದರು. ಪ್ರೇರಕ ಗುರು ತೆರೆಮರೆಗೆ ಬಂದರು ಮತ್ತು ನಂತರ ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳುವುದಿಲ್ಲ ಎಂದು ಘೋಷಿಸಲು ಸಂಘಟಕರನ್ನು ಕೇಳಿಕೊಂಡರು ಎಂದು ಮೂಲಗಳು ಜೀ ಮೀಡಿಯಾಕ್ಕೆ ತಿಳಿಸಿವೆ. ಗುರುಗಳ ಈ ವರ್ತನೆ ಬಗ್ಗೆ ಜೀ ಮೀಡಿಯಾ ಜೊತೆ ಮಾತನಾಡಿದ ಮಹಿಳಾ ವೈದ್ಯೆ ಡಾ.ರುತು ಚೌಧರಿ, ಕೆಲವು ಮಹಿಳಾ ವೈದ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಮೊದಲ ಮೂರು ಸಾಲುಗಳಲ್ಲಿ ಅನೇಕ ಮಹಿಳೆಯರು ಕುಳಿತು, ಸ್ವಾಮಿ ಜ್ಞಾನವತ್ಸಲ್ ಅವರ ಭಾಷಣ ಆಲಿಸಲು ಎಲ್ಲರೂ ಕಾಯುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊದಲ ಏಳು ಸಾಲುಗಳಲ್ಲಿ ಯಾವುದೇ ಹೆಣ್ಣು ಕುಳಿತುಕೊಳ್ಳಬಾರದು ಎಂದು ಘೋಷಿಸಲಾಯಿತು.
ಕೆಲವು ಸೆಕೆಂಡುಗಳ ನಂತರ, ಮೊದಲ ಮೂರು ಸಾಲುಗಳಲ್ಲಿ ಯಾವುದೇ ಮಹಿಳೆಯರು ಕುಳಿತುಕೊಳ್ಳಬಾರದು ಎಂದು ಘೋಷಿಸಲಾಯಿತು. ಮಹಿಳಾ ವೈದ್ಯರು ಈ ಆಜ್ಞೆಯ ಹಿಂದಿನ ಕಾರಣವನ್ನು ಕೇಳಿದಾಗ, ಇದು ಸ್ವಾಮಿ ಜ್ಞಾನವತ್ಸಲ್ ಅವರ ಪ್ರೋಟೋಕಾಲ್ ಎಂದು ಅವರಿಗೆ ತಿಳಿಸಲಾಗಿದೆ. ಇದನ್ನು ತಿಳಿದ ಮಹಿಳಾ ವೈದ್ಯರು ದಿಗ್ಭ್ರಮೆಗೊಂಡಿದ್ದಾರೆ ಆದರೆ ಸ್ವಾಮೀಜಿಯವರ ಮಾತು ಯಾವಾಗಲೂ ಉತ್ತಮವಾಗಿರುವುದರಿಂದ ಅವರು ಪ್ರೋಟೋಕಾಲ್ ಸ್ವಾಮಿ ಜ್ಞಾನವತ್ಸಲ್ ಅವರ ಬೇಡಿಕೆಗೆ ಒಪ್ಪಿದರು ಎಂದು ಮಹಿಳಾ ವೈದ್ಯರು ಒಪ್ಪಿದರೂ, ಅವರು ಭಾಷಣ ಮಾಡದೆ ಸ್ಥಳದಿಂದ ಹೊರನಡೆಯಲು ನಿರ್ಧರಿಸಿದ್ದಾರೆ ಎಂದು ಡಾ.ರಿತು ತಿಳಿಸಿದರು. ಏತನ್ಮಧ್ಯೆ, ಮುಂಭಾಗದ ಸಾಲುಗಳಲ್ಲಿ ಮಹಿಳೆಯರು ಇರುವುದರಿಂದ ಸ್ವಾಮಿ ಜ್ಞಾನವತ್ಸಲ್ ಹೊರಟುಹೋದರು ಎಂದು ಆರಿಸ್ಡಾ(ARISDA)ದ ಹಿರಿಯ ಅಧಿಕಾರಿ ಡಾ.ಅಜಯ್ ಚೌಧರಿ ಹೇಳಿದ್ದಾರೆ.