ಬೆಂಗಳೂರು : ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಪ್ರಾರಂಭವಾಗಿ 10 ವರ್ಷಗಳು ಪೂರ್ಣಗೊಂಡಿವೆ.ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'ಎಕ್ಸ್' ನಲ್ಲಿ 'ಮೋದಿ ಆರ್ಕೈವ್'ಖಾತೆಯು ಪ್ರಧಾನಿ ನರೇಂದ್ರ ಮೋದಿಯವರ ಹಳೆಯ ವೀಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದೆ.ಇದರಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಶಾಲಾ ದಿನಗಳ ಘಟನೆಯನ್ನು ವಿವರಿಸಿದ್ದಾರೆ. 'ಪ್ರಧಾನಮಂತ್ರಿ ಜನ್ ಧನ್ ಯೋಜನೆ'ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ತಮ್ಮ ಬಾಲ್ಯದ ದಿನಗಳ ಘಟನೆಯನ್ನು ಹೇಳುತ್ತಿರುವ ಈ ವಿಡಿಯೋ 2014 ರದ್ದಾಗಿದೆ.
'ನಾನು ನನ್ನ ಹಳ್ಳಿಯ ಶಾಲೆಯಲ್ಲಿ ಓದುತ್ತಿದ್ದೆ. ಆ ಸಮಯದಲ್ಲಿ 'ದೇನಾ ಬ್ಯಾಂಕ್'ನವರು ನಮ್ಮ ಶಾಲೆಗೆ ಬಂದಿದ್ದರು. ಎಲ್ಲರಿಗೂ ಹಣ ಸಂಗ್ರಹ ಮಾಡುವ ಹುಂಡಿಗಳನ್ನು ನೀಡಿ ಹಣ ಉಳಿಸುವುದು ಹೇಗೆ ಎಂದು ವಿವರಿಸುತ್ತಿದ್ದರು.ಇನ್ನು ಹಣ ಉಳಿಸುವ ಸಲುವಾಗಿಯೇ ಎಲ್ಲರ ಬ್ಯಾಂಕ್ ಖಾತೆಯನ್ನೂ ತೆರೆಯಲಾಗಿತ್ತು ಎಂದು ಮೋಯಿ ವಿವರಿಸಿದ್ದಾರೆ. ಆದರೆ ಮೋದಿಯವರ ಹುಂಡಿ ಮಾತ್ರ ಯಾವತ್ತೂ ತುಂಬಲೇ ಇಲ್ಲವಂತೆ. ಏಕೆಂದರೆ ಆ ಹುಂಡಿಗೆ ಒಂದು ರೂಪಾಯಿ ಕೂಡ ಹಾಕಿರಲಿಲ್ಲ ಎಂದಿದ್ದಾರೆ ಪ್ರಧಾನಿ ಮೋದಿ.
ನರೇಂದ್ರ ಮೋದಿಯವರು ಬಾಲ್ಯದಲ್ಲಿ ಆರ್ಥಿಕವಾಗಿ ಸ್ಥಿತಿವಂತರಾಗಿರಲಿಲ್ಲ. ಹಾಗಾಗಿ ಹುಂಡಿಯಲ್ಲಿ ಹಾಕಿ ಸಂಗ್ರಹ ಮಾಡುವಷ್ಟು ಹಣ ಅವರ ಬಳಿ ಇರಲೂ ಇಲ್ಲ.
ನರೇಂದ್ರ ಮೊದಿಯವರಿಗಾಗಿ ಬ್ಯಾಂಕ್ ನವರ ಹುಡುಕಾಟ :
ಇನ್ನು ನಾನು ಶಾಲೆ ತೊರೆದ ಬಳಿಕ ಸುಮಾರು 20 ವರ್ಷಗಳವರೆಗೆ ಬ್ಯಾಂಕಿನವರು ಮೋದಿಯವರನ್ನು ಹುಡುಕುತ್ತಿದ್ದರು. ಬ್ಯಾಂಕಿನವರು ಮೋದಿಯವರ ಹೆಸರಿನಲ್ಲಿ ತೆರೆದಿದ್ದ ಖಾತೆಯನ್ನು ಮುಚ್ಚುವ ಸಲುವಾಗಿ ೨೦ ವರ್ಷ ಅವರಿಗಾಗಿ ಹುಡುಕಾಟ ಮಾಡಿದ್ದರಂತೆ. ದಶಕಗಳಿಂದ ಬಳಕೆಯಾಗದೆ ಬಿದ್ದಿರುವ ಖಾತೆಯನ್ನು ಹೊರೆಯಾಗಿ ಕಂಡ ವ್ಯವಸ್ಥೆ ಆ ಖಾತೆಯನ್ನೇ ಮುಚ್ಚುವ ನಿರ್ಧಾರ ಮಾಡಿತ್ತಂತೆ. ಬ್ಯಾಂಕಿನವರು ತನ್ನ ಖಾತೆ ಮುಚ್ಚುಅ ಸಲುವಾಗಿ ಹುಡುಕುತ್ತಿದ್ದಾರೆ ಎಂದು ತಿಳಿದ ಮೇಲೆ ಮೋದಿಯವರೇ ತೆರಳಿ ತನ್ನ ಹೆಸರಿನ ಖಾತೆಯನ್ನು ಕ್ಲೋಸ್ ಮಾಡಿಸಿದ್ದರಂತೆ.
More than five decades ago, a young school student opened a bank account having been taught the value of savings. At that time he was unaware that it would go on to teach him a very important lesson - a lesson on 'financial exclusion'.
The financial situation of the family was… pic.twitter.com/4qegklzgPS
— Modi Archive (@modiarchive) August 28, 2024
ಇದನ್ನೂ ಓದಿ : ಬಾದಾಮಿಯಂತೆ ಸಿಪ್ಪೆಗಳು ಸಹ ಪೌಷ್ಟಿಕವಾಗಿದೆ, ಅವುಗಳನ್ನು ನಿಮ್ಮ ದೈನಂದಿನ ಜೀವನದಲ್ಲಿ ಸೇರಿಸಿ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.