ನವದೆಹಲಿ: ನಾನೂ ಚೌಕಿದಾರ್ ಎನ್ನುವ (#MainBhiChowkidar ) ಹ್ಯಾಶ್ ಟ್ಯಾಗ್ ಟ್ವೀಟರ್ ಅಭಿಯಾನ ಈಗ ಒಂದು ಹೆಜ್ಜೆ ಮುಂದೆ ಹೋಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ತಮ್ಮ ಖಾತೆಯ ಹೆಸರನ್ನು ಬದಲಿಸಿಕೊಳ್ಳುವ ಮೂಲಕ ಇದಕ್ಕೆ ಚಾಲನೆ ನೀಡಿದ್ದಾರೆ
ನೀವೇನಾದರೂ ಟ್ವಿಟರ್ ನಲ್ಲಿ ನರೇಂದ್ರ ಮೋದಿ ಎಂದು ಸರ್ಚ್ ಮಾಡಿದರೆ ನಿಮಗೆ ಅಲ್ಲಿ ಸಿಗುವುದು ಚೌಕಿದಾರ್ ನರೇಂದ್ರ ಮೋದಿ ಎನ್ನುವ ಅಧಿಕೃತ ಟ್ವಿಟ್ಟರ್ ಖಾತೆ. ವಿಶೇಷವೆಂದರೆ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸೇರಿದಂತೆ ಹಲವರು ಕೇಂದ್ರ ಸಚಿವರು ತಮ್ಮ ಹೆಸರಿನ ಮುಂದೆ ಚೌಕಿದಾರ್ ಮೋದಿ ಎಂದು ಹಾಕಿಕೊಳ್ಳುವ ಮೂಲಕ ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.
ಪ್ರಧಾನಿ ಮೋದಿ ಶನಿವಾರದಂದು ಭ್ರಷ್ಟಾಚಾರದ ವಿರುದ್ಧದ ಸಂಕಲ್ಪಕ್ಕಾಗಿ ಮೈ ಬಿ ಚೌಕಿದಾರ್(ನಾನು ಕಾವಲುಗಾರ) ಎನ್ನುವ ಅಭಿಯಾನಕ್ಕೆ ಚಾಲನೆ ನೀಡಿದ್ದರು.ಈ ಹಿಂದೆ ರಾಹುಲ್ ಗಾಂಧಿ ಚೌಕಿದಾರ್ ಚೋರ್ ಹೈ (ಕಾವಲುಗಾರನೇ ಕಳ್ಳ ) ಎಂದು ಮೋದಿ ವಿರುದ್ಧ ತಮ್ಮ ಭಾಷಣಗಳಲ್ಲಿ ವಾಗ್ದಾಳಿ ನಡೆಸಿದ್ದರು.ಈ ಹಿನ್ನಲೆಯಲ್ಲಿ ಈಗ ಇದಕ್ಕೆ ತಿರುಗೇಟು ನೀಡುವ ಕಾರಣದಿಂದಾಗಿ ಈ ಚಳುವಳಿಯನ್ನು ಮೋದಿ ಹುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ಕೇಂದ್ರ ಸಚಿವರಲ್ಲಿ ಪಿಯುಶ್ ಗೋಯಲ್ ,ಜಗತ್ ಪ್ರಕಾಶ್ ನಡ್ದಾ ತಮ್ಮ ಹೆಸರಿಂದ ಮುಂದೆ ಚೌಕಿದಾರ್ ಎಂದು ಹಾಕಿಕೊಂಡಿದ್ದಾರೆ.