ನವದೆಹಲಿ: ಇನ್ಮುಂದೆ ನೀವು ದೇಶದ ಯಾವುದೇ ATM ನಿಂದ ನಿಮ್ಮ ಖಾತೆಗೆ ಹಣ ಠೇವಣಿ ಮಾಡಬಹುದು ಎಂದು ಯಾರಾದರು ನಿಮಗೆ ಹೇಳಿದರೆ ನೀವು ನಂಬುವಿರಾ? ಹೌದು, ಇದು ನಿಜ ಕೇಂದ್ರ ಸರ್ಕಾರ ದೇಶದ ಎಲ್ಲಾ ಪ್ರಮುಖ ಬ್ಯಾಂಕ್ ಗಳ ATMಗಳನ್ನು ಒಂದು ಮಾಡುವ ಯೋಜನೆಯ ಮೇಲೆ ಕೆಲಸ ಆರಂಭಿಸಿದೆ. ಒಂದು ವೇಳೆ ಈ ಯೋಜನೆ ಅನುಷ್ಠಾನಕ್ಕೆ ಬಂದರೆ ನೀವು ದೇಶದ ಯಾವುದೇ ಭಾಗದಿಂದ ಯಾವುದೇ ಬ್ಯಾಂಕಿನ ATM ಶಾಖೆಯ ಮೂಲಕ ನಿಮ್ಮ ಖಾತೆಗೆ ಹಣ ಠೇವಣಿ ಮಾಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಖಾತೆ ಹೊಂದಿದ ಬ್ಯಾಂಕ್ ನ ATMಗೆ ಭೇಟಿ ನೀಡುವ ಅಗತ್ಯವಿಲ್ಲ.
UPI ಆಧಾರವಾಗಿಟ್ಟುಕೊಂಡು ಈ ಯೋಜನೆ ಜಾರಿಗೆ ಬರಲಿದೆ
ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI) ದೇಶದ ಎಲ್ಲ ಪ್ರಮುಖ ಬ್ಯಾಂಕ್ ಗಳನ್ನು ಈ ಹಣ ಠೇವಣಿ ಮಾಡುವ ಯೋಜನೆಗೆ ಜೋಡಿಸುವ ಕಾರ್ಯ ಆರಂಭಿಸಿದೆ. ಯೋಜನೆಗೆ ಸಂಬಂಧಿಸಿದ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ ಒಂದು ವೇಳೆ ಈ ಯೋಜನೆ ಜಾರಿಗೆ ಬಂದರೆ ಗ್ರಾಹಕರು ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಯಾವುದೇ ಬ್ಯಾಂಕಿನಿಂದ ಹಣವನ್ನು ನಿಮ್ಮ ಖಾತೆಗೆ ಸೇರಿಸಬಹುದಾಗಿದ್ದು, UPI ತಂತ್ರಜ್ಞಾನದ ಮೇಲೆಯೇ ಈ ಯೋಜನೆ ಆಧಾರಿತವಾಗಿದೆ ಎಂದಿದ್ದಾರೆ. ಈಗಾಗಲೇ NPCI ಕೂಡ ಎಲ್ಲ ಬ್ಯಾಂಕ್ ಗಳಿಗೆ ಈ ಕುರಿತು ಪತ್ರ ಬರೆದಿದ್ದು ಯೋಜನೆಯ ಅನುಷ್ಠಾನಕ್ಕೆ ಸಕಲ ಸಿದ್ಧತೆ ಮಾಡುವಂತೆ ಸೂಚಿಸಿದೆ ಎಂದು ಅವರು ಹೇಳಿದ್ದು, ಶೀಘ್ರದಲ್ಲಿಯೇ ಈ ಯೋಜನೆ ಜಾರಿಗೆ ಬರಲಿದೆ ಎಂದಿದ್ದಾರೆ.
ಗ್ರಾಹಕರ ಜೊತೆಗೆ ಬ್ಯಾಂಕ್ ಗಳಿಗೂ ಕೂಡ ಇದರ ಲಾಭ
ಈ ಯೋಜನೆಗೆ ಸಂಬಂಧಿಸಿದ ಮತ್ತೋರ್ವ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಯಾವುದೇ ಯಾವುದೇ ಬ್ಯಾಂಕಿನಿಂದ ಅಥವಾ ಯಾವುದೇ ಬ್ಯಾಂಕ್ ನ ATMನಿಂದ ಖಾತೆಗೆ ಹಣ ವರ್ಗಾಗಿಸುವ ಈ ಯೋಜನೆ ಸಾಮಾನ್ಯ ಗ್ರಾಹಕರ ಸಮಯ ಉಳಿತಾಯ ಮಾಡಲಿದೆ ಎಂದಿದ್ದಾರೆ. ಅಲ್ಲದೆ, ಹಣವನ್ನು ಸುರಕ್ಷಿತವಾಗಿ ಬ್ಯಾಂಕಿಗೆ ಕೊಂಡೊಯ್ಯುವ ತೊಂದರೆಯಿಂದಲೂ ಪರಿಹಾರ ಸಿಗಲಿದೆ. ಇನ್ನೊಂದೆಡೆ ಈ ಯೋಜನೆಯಿಂದ ಬ್ಯಾಂಕ್ ಗಳಿಗೂ ಕೂಡ ಲಾಭವಿದೆ ಎಂದು ಅವರು ಹೇಳಿದ್ದಾರೆ. ಉದಾಹರಣೆಗೆ ಪ್ರತಿ ATM ಹಣ ಹಾಕುವುದು ಇದರಿಂದ ತಪ್ಪಲಿದ್ದು, ಸದ್ಯದ ATMಗಳನ್ನು ಕೇವಲ ಹಣ ಡ್ರಾ ಮಾಡಲು ಮಾತ್ರ ಬಳಸಲಾಗುತ್ತಿದ್ದು, ATM ಗಳಲ್ಲಿ ಹಣ ಠೇವಣಿ ಮಾಡುವ ಈ ಯೋಜನೆಯಿಂದ ಹಣದ ನಿರ್ವಹಣೆಗೆ ಆಗುವ ವೆಚ್ಚವನ್ನು ಬ್ಯಾಂಕ್ ಗಳು ತಪ್ಪಿಸಬಹುದಾಗಿದೆ. ಆದರೆ, ಇದುವರೆಗೂ ಯಾವುದೇ ಬ್ಯಾಂಕ್ ಗಳು ಈ ಯೋಜನೆ ಜಾರಿಗೆ ತರುವ ದಿನಾಂಕದ ಮೇಲೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದ್ದು, ಈ ಯೋಜನೆ ಇದೆ ಆರ್ಥಿಕ ವರ್ಷದಲ್ಲಿ ಜಾರಿಗೆ ಬರುವ ಸಾಧ್ಯತೆಯನ್ನು ವರ್ತಿಸಲಾಗಿದೆ.