Mamata Banerjee On 2000 Rupees Note: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 2,000 ರೂಪಾಯಿ ನೋಟುಗಳ ಚಲಾವಣೆ ಸ್ಥಗಿತಗೊಳಿಸಿದ್ದಕ್ಕೆ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ವಿರೋಧ ಪಕ್ಷದ ನಾಯಕರು ಮೋದಿ ಸರ್ಕಾರದ ಮೇಲೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಿರ್ಧಾರವನ್ನು ಒಂದು ತಲೆಹಾಳು ಮತ್ತು ತುಘಲಕ ಡ್ರಾಮಾ ಎಂದು ಬಣ್ಣಿಸಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಮಮತಾ, “2000 ರೂಪಾಯಿ ನೋಟುಗಳಿಗೆ ಸಂಬಂಧಿಸಿದ ಮತ್ತೊಂದು ತಲೆಹಾಳು ಮತ್ತು ತುಘಲಕ ನೋಟು ಅಮಾನ್ಯೀಕರಣದ ನಾಟಕವು ಮತ್ತೊಮ್ಮೆ ಸಾರ್ವಜನಿಕರನ್ನು ಭಾರೀ ಕಿರುಕುಳಕ್ಕೆ ಬಲಿಯಾಗುವಂತೆ ಮಾಡಲಿದೆ. ಈ ನಿರಂಕುಶ ಕ್ರಮಗಳು ಈ ಆಡಳಿತದ ಮೂಲಭೂತವಾಗಿ ಜನವಿರೋಧಿ ಮತ್ತು ಕ್ರೋನಿ ಬಂಡವಾಳಶಾಹಿ ಸ್ವಭಾವವನ್ನು ಮರೆಮಾಚುವ ಉದ್ದೇಶ ಹೊಂದಿದೆ. ನಿರಂಕುಶತ್ವದ ಇಂತಹ ದಿಟ್ಟತನವನ್ನು ಜನರು ಮರೆಯುವುದಿಲ್ಲ" ಎಂದಿದ್ದಾರೆ.
ಕಪಿಲ್ ಸಿಬಲ್ ಕೂಡ ಗರಂ
ಆರ್ಬಿಐ ಕೈಗೊಂಡಿರುವ ಈ ನಿರ್ಧಾರದ ಕುರಿತು ರಾಜ್ಯಸಭಾ ಸಂಸದ ಕಪಿಲ್ ಸಿಬಲ್ ಕೂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದಾರೆ. 2000 ನೋಟು ಸ್ಥಗಿತಗೊಂಡಿವೆ. 8 ನವೆಂಬರ್ 2016 ರಂದು, ಚಲಾವಣೆಯಲ್ಲಿರುವ ನಗದು ಮೊತ್ತವು ಭ್ರಷ್ಟಾಚಾರದ ಜೊತೆಗೆ ನೇರವಾಗಿ ಸಂಬಂಧ ಹೊಂದಿದೆ ಎಂದು ಪ್ರಧಾನಿ ರಾಷ್ಟ್ರಕ್ಕೆ ತಿಳಿಸಿದ್ದರು. 2016ರಲ್ಲಿ ಒಟ್ಟು 17.7 ಲಕ್ಷ ಕೋಟಿ ನಗದು ಚಲಾವಣೆಯಲ್ಲಿತ್ತು, 2022ರಲ್ಲಿ ಅದು 30.18 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಹೇಳಿರುವ ಸಿಬ್ಬಲ್. ಇದರಿಂದ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆಯೇ ಎಂದು ಮೋದಿ ಸರಕಾರವನ್ನು ಅವರು ಪ್ರಶ್ನಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಈಗ ಏನು ಹೇಳುತ್ತಾರೆ? ಆದಾಗ್ಯೂ, ಈ ನೋಟುಗಳು ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತವೆ ಎಂದು ಆರ್ಬಿಐ ಹೇಳಿದೆ.
ಇದನ್ನೂ ಓದಿ-Adani Hindenburg Case: SEBI ಗೆ ಹೆಚ್ಚಿನ ಅಧಿಕಾರ ನೀಡುವ ಅವಶ್ಯಕತೆ ಇಲ್ಲ ಎಂದು ಸಲಹೆ ನೀಡಿದ ಸುಪ್ರೀಂ
RBI ನಿರ್ಧಾರವೇನು?
2000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆರ್ಬಿಐ ನಿರ್ಧರಿಸಿದೆ. ಆರ್ಬಿಐ ಸೂಚನೆಗಳ ಪ್ರಕಾರ, ಈ ನೋಟುಗಳು ಸೆಪ್ಟೆಂಬರ್ 30 ರವರೆಗೆ ಮಾನ್ಯತೆಯನ್ನು ಹೊಂದಿರಲಿವೆ. ಆದರೆ, 2000ರ ನೋಟಿನ ಕುರಿತು ಆರ್ ಬಿಐ ನೀಡಿರುವ ಸ್ಪಷ್ಟನೆಯಿಂದ ನೋಟು ಜಮಾ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದೆನಿಸುತ್ತದೆ, ಅಂದರೆ ಎಷ್ಟು ಬೇಕಾದರೂ ಜಮಾ ಮಾಡಬಹುದು ಆದರೆ ಒಂದೇ ಬಾರಿಗೆ 20 ಸಾವಿರದ ನೋಟುಗಳನ್ನು ಮಾತ್ರ ಬದಲಾಯಿಸಿಕೊಳ್ಳಬಹುದು ಎಂಬ ನಿರ್ಬಂಧನೆ ವಿಧಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ