ನವದೆಹಲಿ: ಗುಜರಾತ್ ಮೂಲದ ಕಲಾವಿದನೊಬ್ಬ ಪ್ರಧಾನಿ ಮೋದಿ ಅವರ ಬೃಹತ್ ಕಲಾಕೃತಿಯನ್ನು ಬಿಡಿಸಿದ್ದು, ಕಲಾವಿದನಿಗೆ ಮೋದಿ ಧನ್ಯವಾದ ಹೇಳಿದ್ದಾರೆ.
ಗುಜರಾತ್ ನ ಭುಜ್ ಮೂಲದ ಕಲಾವಿದ ಮನೋಜ್ ಸೋನಿ ಅವರು ಸುಮಾರು ೮೦ ಚದುರ ಅಡಿ ವಿಸ್ತೀರ್ಣವುಳ್ಳ ಮೋದಿಯವರ ಕಲಾಕೃತಿಯನ್ನು ರಚಿಸಿದ್ದು, ಈ ಬಗ್ಗೆ ಮನೋಜ್ ಅವರೊಂದಿಗೆ ಮಾತನಾಡಿ, ಅವ್ರಿಗೆ ಥ್ಯಾಂಕ್ಸ್ ಹೇಳಿರುವುದಾಗಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದ್ದಾರೆ. ಇದು ವಿಶ್ವದ ಅತಿ ದೊಡ್ಡ ಕಲಾಕೃತಿ ಎನ್ನಲಾಗಿದೆ.
ಕಲರ್ ಪೆನ್ಸಿಲ್‌ನಿಂದ ಬಿಡಿಸಿರುವ ಕಲಾಕೃತಿ ಇದಾಗಿದ್ದು, ಇದರ 80 ಸುತ್ತಳತೆ ಅಡಿ ಇದೆ. ಈ ಕಲಾಕೃತಿ ಪೂರ್ಣಗೊಳಿಸಲು ಮನೋಜ್ 5 ತಿಂಗಳು ಸಮಯ ತೆಗೆದುಕೊಂಡಿದ್ದಾರಂತೆ.
"ಈ ಕಲಾಕೃತಿಯು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರದ್ದು. ಇದು ಕಲರ್ ಪೆನ್ಸಿಲ್ನಿಂದ ರಚಿಸಿದ ವಿಶ್ವದ ಅತಿ ದೊಡ್ಡ ಕಲಾಕೃತಿಯಾಗಿದೇ. 80 ಚದುರ ಅಡಿಯ ಈ ಕಲಾಕೃತಿ ಪೂರ್ನಗೊಲಿಸಲು 5 ತಿಂಗಳ ಸಮಯ ಬೇಕಾಯಿತು'' ಎಂದು ಮನೋಜ್ ಕಲಾಕೃತಿಯಲ್ಲಿ ನೀಡಿರುವ ಸಂದೇಶದಲ್ಲಿ ತಿಳಿಸಿದ್ದಾರೆ.
Got this sketch from Manoj, who belongs to Bhuj. Spoke to him this morning and thanked him for his gesture. pic.twitter.com/bsCv99B0TM
— Narendra Modi (@narendramodi) November 28, 2017