ಲೋಕಸಭಾ ಚುನಾವಣೆ: ಇಂದು ಪಶ್ಚಿಮ ಬಂಗಾಳದ 2 ರ‍್ಯಾಲಿಯಲ್ಲಿ ಪ್ರಧಾನಿ ಮೋದಿ

ಹಿಜ್ಲಿ-ನಾರಾಯಣ್ಗಢ್ ನಡುವಿನ ಮೂರನೇ ರೈಲ್ವೆ ಮಾರ್ಗವನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ.

Last Updated : Feb 2, 2019, 09:38 AM IST
ಲೋಕಸಭಾ ಚುನಾವಣೆ: ಇಂದು ಪಶ್ಚಿಮ ಬಂಗಾಳದ 2 ರ‍್ಯಾಲಿಯಲ್ಲಿ ಪ್ರಧಾನಿ ಮೋದಿ title=

ನವದೆಹಲಿ: ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳದ ದುರ್ಗಾಪುರಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ. ಅಲ್ಲಿ ಅವರು  ರೈಲ್ವೆ ವಿಭಾಗದ 294 ಕಿ.ಮೀ ರೈಲ್ವೆಗೆ ವಿದ್ಯುದೀಕರಣಕ್ಕೆ ಚಾಲನೆ ನೀಡಲಿದ್ದಾರೆ. ಶುಕ್ರವಾರ ಪ್ರಧಾನಿ ಕಚೇರಿಯಿಂದ ಹೊರಡಿಸಿದ ಒಂದು ಹೇಳಿಕೆಯಲ್ಲಿ, ಹಿಜ್ಲಿ-ನರಾಯಂಗಾರ್ಡ್ ನಡುವಿನ ಮೂರನೇ ರೈಲು ಮಾರ್ಗವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಶನಿವಾರ ಪಶ್ಚಿಮ ಬಂಗಾಳದ ದುರ್ಗಾಪುರ ಪ್ರವಾಸದಲ್ಲಿ 294 ಕಿ.ಮೀ ಉದ್ದದ ಆಂಧಲ್-ಸೆಂಥಿಯಾ-ಪಕುರ್-ಮಾಲ್ಡಾ ಮತ್ತು ಖಾನಾ-ಸೆಂಥಿಯಾ ರೈಲ್ವೆ ವಿಭಾಗದಲ್ಲಿ ವಿದ್ಯುದೀಕರಣ ರೈಲ್ವೆಗೆ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಕಲ್ಲಿದ್ದಲು, ಕಲ್ಲಿನ ಚಿಪ್ಸ್ ಮತ್ತು ನಿಲುಭಾರದ ಸಾಗಣೆಗೆ ಈ ವಿಭಾಗದ ವಿದ್ಯುತ್ತಿನೀಕರಣವು ಸುಲಭವಾಗುತ್ತದೆ ಎಂದು ಹೇಳಲಾಗಿದೆ.

ಬಿಜೆಪಿಯ ಅಧ್ಯಕ್ಷ ಅಮಿತ್ ಷಾ ಅವರು ಜನವರಿ 23 ರಂದು ಮಾಲ್ಡಾದಲ್ಲಿ ಪ್ರಚಾರ ನಡೆಸಿದ್ದಾರೆ.  

ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತ್ತಾದಲ್ಲಿ ಜನವರಿ 19 ರಂದು ವಿರೋಧ ಪಕ್ಷಗಳು ಬೃಹತ್ ರ‍್ಯಾಲಿಯನ್ನು ಆಯೋಜಿಸಿತ್ತು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಅಧ್ಯಕ್ಷ ಮಮತಾ ಬ್ಯಾನರ್ಜಿ ಈ ರ‍್ಯಾಲಿಗೆ 24 ಪಕ್ಷಗಳ ನಾಯಕರನ್ನು ಆಹ್ವಾನಿಸಿದ್ದರು. 
 

Trending News