ನವದೆಹಲಿ: ಸುಮಾರು 70 ಸಾವಿರಕ್ಕೂ ಅಧಿಕ ರೈತರು ಉತ್ತರ ಪ್ರದೇಶ, ಉತ್ತರಖಂಡ್,ಪಂಜಾಬ್, ಮತ್ತು ಹರ್ಯಾಣದ ರೈತರು ಕಿಸಾನ್ ಕ್ರಾಂತಿ ಪಾದಯಾತ್ರೆ ಮೂಲಕ ಸಾಲ ಮನ್ನಾ, ಸಬ್ಸಿಡಿದರ ದಲ್ಲಿ ವಿದ್ಯುತ್ ಮತ್ತು ಇಂಧನ ಪೂರೈಕೆ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ಆಗ್ರಹಿಸಿ ದೆಹಲಿಗೆ ಪ್ರವೇಶಿಸುತ್ತಿದ್ದಂತೆ ಪೊಲೀಸರು ರೈತರ ಮೇಲೆ,ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ರೈತರ ಮೇಲೆ ದಾಳಿ ಮಾಡಿದ್ದಾರೆ.
#WATCH Visuals from UP-Delhi border where farmers have been stopped during 'Kisan Kranti Padyatra'. Police use water cannons to disperse protesters after protesters broke the barricades pic.twitter.com/9KUwKgvrwW
— ANI (@ANI) October 2, 2018
ಮೋದಿ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಹಮ್ಮಿಕೊಂಡಿದ್ದ ಈ ಪಾದಯಾತ್ರೆ ಇಂದು ರಾಜಘಾಟ್ ನಲ್ಲಿ ಅಂತಿಮಗೋಳ್ಳುವುದಿತ್ತು ಆದರೆ ಪೊಲೀಸರು ದೆಹಲಿ-ಉತ್ತರ ಪ್ರದೇಶದ ಗಡಿ ಭಾಗದಲ್ಲಿ ತೀವ್ರ ಭದ್ರತೆಯನ್ನು ಒದಗಿಸಿದ್ದಲ್ಲದೆ, ರೈತರನ್ನು ನಿಯಂತ್ರಣಕ್ಕೆ ತರಲು ಅಶ್ರುವಾಯು ಮತ್ತು ಜಲ ಫಿರಂಗಿಗಳನ್ನು ಬಳಸಿ ರೈತರ ಮೇಲೆ ಹಲ್ಲೆ ಮಾಡಿದ್ದಾರೆ.ಇದರಲ್ಲಿ ಹಲವು ರೈತರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಪೊಲೀಸರು ದೆಹಲಿಯ ಪೂರ್ವ ವಿಹಾರ್, ಜಗತ್ಪುರಿ, ಶಖರ್ಪುರ್, ಮಧು ವಿಹಾರ್, ಘಾಜಿಪುರ್, ಮಯೂರ್ ವಿಹಾರ್, ಮಂದಾವ್ಲಿ, ಪಾಂಡವ ನಗರ, ಕಲ್ಯಾಣ ಪುರಿ ಮತ್ತು ಹೊಸ ಅಶೋಕ್ ನಗರ ಪ್ರದೇಶಗಳಿಗೆ ಅನ್ವಯವಾಗುವ ರೀತಿಯಲ್ಲಿ ಒಂದು ವಾರದ ಅವಧಿಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿದ್ದಾರೆ.