ಛತ್ತೀಸ್ಗಢ: ದೇಶಾದ್ಯಂತ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಇಂದು ಬೆಳಿಗ್ಗೆಯಿಂದ ಆರಂಭವಾಗಿದ್ದು, ಈ ವೇಳೆ ಛತ್ತೀಸ್ಗಢದ ಮತಗಟ್ಟೆಯೊಂದರಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ನಿಯೋಜನೆಗೊಂಡಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಛತ್ತೀಸ್ಗಢದ ಕಂಕರ್ ಮತಗಟ್ಟೆ ಸಂಖ್ಯೆ 186 ರಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
#Chhattisgarh: A polling official deputed at polling booth number 186 in Kanker dies of heart attack during election duty. #LokSabhaElections2019
— ANI (@ANI) April 18, 2019
11 ರಾಜ್ಯಗಳ ಮತ್ತು 1 ಕೇಂದ್ರಾಡಳಿತ ಪ್ರದೇಶ ಸೇರಿದಂತೆ 95 ಸಂಸತ್ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಛತ್ತೀಸ್ಗಢದ ಮೂರು ಲೋಕಸಭಾ ಕ್ಷೇತ್ರಗಳಲ್ಲೂ(ರಾಜ್ ನಾಂದ್ಗಾಂವ್, ಮಹಾಸಮುಂದ್, ಕಾಂಕರ್) ಇಂದು ಮತದಾನ ನಡೆಯುತ್ತಿದೆ.