ರಾಹುಲ್ ಗಾಂಧಿಯವರ ನೈತಿಕ ಹೊಣೆಗಾರಿಕೆ ಇಂದಿನ ರಾಜಕೀಯದಲ್ಲಿ ಅಪರೂಪ - ಅಧೀರ್ ರಂಜನ್ ಚೌಧರಿ

ಪಕ್ಷದ ಸೋಲಿನ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊರನಡೆದಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಆದಿರ್ ಚೌಧರಿ 'ನೈತಿಕ ಜವಾಬ್ದಾರಿಯನ್ನು ಹೊತ್ತು ಪದವಿಯಿಂದ ಕೆಳಗಿಳಿಯುವ ರಾಹುಲ್ ಗಾಂಧಿಯಂತಹ ರಾಜಕಾರಣಿಗಳು ಇಂದಿನ ರಾಜಕೀಯದಲ್ಲಿ ಅಪರೂಪ' ಎಂದು ಹೇಳಿದ್ದಾರೆ.

Last Updated : Oct 9, 2019, 07:52 PM IST
ರಾಹುಲ್ ಗಾಂಧಿಯವರ ನೈತಿಕ ಹೊಣೆಗಾರಿಕೆ ಇಂದಿನ ರಾಜಕೀಯದಲ್ಲಿ ಅಪರೂಪ - ಅಧೀರ್ ರಂಜನ್ ಚೌಧರಿ  title=
file photo

ನವದೆಹಲಿ: ಪಕ್ಷದ ಸೋಲಿನ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೊರನಡೆದಿದ್ದಾರೆ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಆದಿರ್ ಚೌಧರಿ 'ನೈತಿಕ ಜವಾಬ್ದಾರಿಯನ್ನು ಹೊತ್ತು ಪದವಿಯಿಂದ ಕೆಳಗಿಳಿಯುವ ರಾಹುಲ್ ಗಾಂಧಿಯಂತಹ ರಾಜಕಾರಣಿಗಳು ಇಂದಿನ ರಾಜಕೀಯದಲ್ಲಿ ಅಪರೂಪ' ಎಂದು ಹೇಳಿದ್ದಾರೆ.

2019 ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ರಾಹುಲ್ ಗಾಂಧಿಯನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ಹೊರನಡೆದಿದ್ದಾರೆ ಎಂದು ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಹಲವಾರು ಕಾಂಗ್ರೆಸ್ ಮುಖಂಡರು ಟೀಕಿಸಿದ ಹಿನ್ನಲೆಯಲ್ಲಿ ಅವರ ಹೇಳಿಕೆ ಬಂದಿದೆ.

"ಹೌದು ನಾನು ಕೆಲವು ನಾಯಕರ ಹೇಳಿಕೆಗಳ ಬಗ್ಗೆ ಕೇಳಿದ್ದೇನೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಿ ಉಳಿದಿದ್ದರೆ ಒಳ್ಳೆಯದು ಎಂದು ನಾನು ಹೇಳುತ್ತೇನೆ. ಆದರೆ ಅದೇ ಸಮಯದಲ್ಲಿ, ಅವರ ನೈತಿಕ ಹೊಣೆಗಾರಿಕೆಯನ್ನು ನಾವು ಪ್ರಶಂಸಿಸಬೇಕು, ಅವರು ನೈತಿಕ ಹೊಣೆಗಾರಿಕೆಯನ್ನು ತೆಗೆದುಕೊಂಡು ಕೆಳಗಿಳಿಯುವ ಮೂಲಕ ಭಾರತೀಯ ರಾಜಕಾರಣದಲ್ಲಿ ಅಪರೂಪದ ತಳಿ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಆದರಿಂದ ನಾವೆಲ್ಲರೂ ಅವರಿಂದ ಪಾಠವನ್ನು ಕಲಿಯಬೇಕು ಎಂದು ಚೌಧರಿ ಪಿಟಿಐಗೆ ತಿಳಿಸಿದರು.

'ರಾಹುಲ್-ಜಿ ಅವರನ್ನು ಮರಳಿ ಪಡೆಯಲು ನಾವೆಲ್ಲರೂ ಇಷ್ಟಪಡುತ್ತೇವೆ' ಆದರೆ ಇದು ಗಾಂಧಿಯವರ ನಿರ್ಧಾರ ಮತ್ತು ಅದನ್ನು ಗೌರವಿಸಬೇಕು. 'ಪಕ್ಷದ ಸೋಲಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನಾಯಕ ಕೆಳಗಿಳಿದ ನಿದರ್ಶನವನ್ನು ಬೇರೆ ಯಾವುದೇ ಪಕ್ಷದಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಳಪೆ ಪ್ರದರ್ಶನದ ಜವಾಬ್ದಾರಿ ಹೊತ್ತುಕೊಂಡು ರಾಹುಲ್ ಗಾಂಧಿ ಪಕ್ಷದ  ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Trending News