ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ನಾಗ್ಪುರದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಸಮಾರಂಭದಲ್ಲಿ ಪಾಲ್ಗೊಂಡ ನಂತರ ಬಿಜೆಪಿಯ ಮಿತ್ರ ಪಕ್ಷ ಈಗ ಶಿವಸೇನಾ ಆರ್ಎಸ್ಎಸ್ ಸಂಘಟನೆ ಮೇಲೆ ಮೇಲೆ ಹರಿಹಾಯ್ದಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ನಾಯಕ ಸಂಜಯ್ ರೌತ್ ಮಾತನಾಡುತ್ತಾ, ಮುಖರ್ಜಿ ಅವರನ್ನು ಮುಂಬರುವ 2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆರ್ಎಸ್ಎಸ್ ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಸುದ್ದಿ ಸಂಸ್ಥೆ ANI ಗೆ ಮಾತನಾಡಿದ ಶಿವಸೇನಾ ನಾಯಕ ಸಂಜಯ್ ರಾವತ್, ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಲು ಬಹುಶಃ ಆರ್ಎಸ್ಎಸ್ ಸಿದ್ಧತೆ ಮಾಡಿದೆ ಎಂದು ಹೇಳಿದರು. "ಬಿಜೆಪಿಯು ಅಗತ್ಯ ಸಂಖ್ಯೆಯನ್ನು ಪಡೆಯಲು ವಿಫಲವಾದಲ್ಲಿ ಪ್ರಣಬ್ ಮುಖರ್ಜಿ ಅವರನ್ನು ಪ್ರಧಾನಮಂತ್ರಿ ಹುದ್ದೆಗೆ ಬಿಂಬಿಸುವ ನಿಟ್ಟಿನಲ್ಲಿ ಆರ್ಎಸ್ಎಸ್ ಈ ಯೋಜನೆ ರೂಪಿಸಿದೆ " ಎಂದು ರಾವತ್ ಹೇಳಿದರು.
ಬಿಜೆಪಿಯು 2019 ಲೋಕಸಭೆ ಚುನಾವಣೆಯಲ್ಲಿ ಕನಿಷ್ಟ 110 ಸ್ಥಾನಗಳನ್ನು ಕಳೆದುಕೊಳ್ಳುವುದು ಖಚಿತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ಇತ್ತೀಚೆಗಿನ ದಿನಗಳಲ್ಲಿ ಶಿವಸೇನಾ ಮತ್ತು ಬಿಜೆಪಿ ನಡುವಿನ ಸಂಬಂಧ ಹಾವು ಮುಂಗುಸಿಯಂತಾಗಿದ್ದು ಈ ಹಿನ್ನಲೆಯಲ್ಲಿ ಇದನ್ನು ಶಮನಗೊಳಿಸಲು ಅಮಿತ್ ಶಾ ಉದ್ದವ್ ಠಾಕ್ರೆಯವರ ಮನೆಗೆ ಭೇಟಿ ನೀಡಿದ್ದರು.