ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು: ಬಿಎಸ್​ಪಿ ಮುಖಂಡರ ಆರೋಪಕ್ಕೆ ಎಸ್​ಪಿ ಕೊಟ್ಟ ಉತ್ತರ!

ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಮಾತನಾಡುವ ಮೂಲಕ ಎಸ್​ಪಿ-ಬಿಎಸ್​ಪಿ ಮೈತ್ರಿ ಬಗ್ಗೆ ಪ್ರಶ್ನೆ ಉದ್ಬವಿಸುವಂತೆ ಮಾಡಿದ್ದಾರೆ.

Last Updated : Jun 4, 2019, 08:07 AM IST
ಎಸ್​ಪಿ-ಬಿಎಸ್​ಪಿ ಮೈತ್ರಿಯಲ್ಲಿ ಬಿರುಕು: ಬಿಎಸ್​ಪಿ ಮುಖಂಡರ ಆರೋಪಕ್ಕೆ ಎಸ್​ಪಿ ಕೊಟ್ಟ ಉತ್ತರ! title=
File Image

ಲಕ್ನೋ: ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಅಧಿಕೃತವಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ.  ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಲೋಕಸಭಾ ಕ್ಷೇತ್ರ ಅಜಂಗಢ್ ಪ್ರವಾಸದಲ್ಲಿದ್ದಾರೆ.

ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಬಗ್ಗೆ ಬಿಎಸ್​ಪಿಯನ್ನು ಪ್ರಶ್ನಿಸಿದಾಗ, ಬಿಎಸ್​ಪಿ  ಮುಖ್ಯ ವಕ್ತಾರ ರಾಜೇಂದ್ರ ಚೌಧರಿ, "ಇನ್ನೂ ಯಾವುದೇ ಅಧಿಕೃತ ಹೇಳಿಕೆ ಇಲ್ಲ" ಎಂದು ಹೇಳಿದರು. ಏನಾಯಿತು ಮತ್ತು ಇದರಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ಸ್ವತಃ ಅಖಿಲೇಶ್ ಯಾದವ್ ಅವರೇ ಪರಿಶೀಲಿಸಲಿದ್ದಾರೆ. ಇದಾವುದು ಅಧಿಕೃತ ವರ್ತನೆಯಲ್ಲ, ಇಲ್ಲಿ ಅಲ್ಲಿ ಕೇಳಿದ್ದಷ್ಟೇ. ಕಿವಿಗೆ ಬಿದ್ದ ವಿಷಯವೆಲ್ಲಾ ಸತ್ಯವಲ್ಲ. ಸತ್ಯವೇನೆಂಬುದನ್ನು ಅರ್ಥಮಾಡಿಕೊಳ್ಳಬೇಕು. "ಅಖಿಲೇಶ್ ಯಾದವ್ ಅಜಂಘಡ್ನಲ್ಲಿದ್ದಾರೆ. ಅಲ್ಲಿಂದ ವಾಪಸ್ಸಾದ ಬಳಿಕ ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು. ಎಸ್​ಪಿ-ಬಿಎಸ್​ಪಿ ಮೈತ್ರಿ ಮುರಿಯುವ ಬಗ್ಗೆ "ಯಾರೂ ಅವರ (ಬಿಎಸ್​ಪಿ) ಮುಖಂಡರು ಅಧಿಕೃತ ಹೇಳಿಕೆಯನ್ನು ನೀಡಿಲ್ಲ, ಹಾಗಾಗಿ ನಾವು ಕಾಯಬೇಕಾಗಿದೆ" ಎಂದು ಅವರು ಹೇಳಿದರು.

ಎಸ್​ಪಿ-ಬಿಎಸ್​ಪಿ ಮೈತ್ರಿ ಪ್ರಶ್ನೆ:
ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಯಾವುದೇ ಮೈತ್ರಿ ಇಲ್ಲದೆ ಬಿಎಸ್​ಪಿ ಸ್ಪರ್ಧಿಸುವ ಬಗ್ಗೆ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಇಂಗಿತ ವ್ಯಕ್ತಪಡಿಸಿದ್ದಾರೆ. ಇದರಿಂದ ಎಸ್​ಪಿ-ಬಿಎಸ್​ಪಿ ಮೈತ್ರಿ ಭವಿಷ್ಯದ ಬಗ್ಗೆ ಸಹಜವಾಗಿಯೇ ಪ್ರಶ್ನೆ ಉದ್ಬವಿಸಿದೆ.

Trending News