ನವದೆಹಲಿ: ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಯ ನೇಮಕಾತಿಗಳನ್ನು ಮಾಡಲು ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ, ಹತ್ತನೇ ತರಗತಿ ಉತ್ತಿರ್ಣರಾಗಿರುವ ಅಭ್ಯರ್ಥಿಗಳಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಇದರ ಪ್ರಕಾರ, ಇಲಾಖೆಯು ಕಾರ್ ಚಾಲಕ ಸಿಬ್ಬಂದಿಯನ್ನು ನೇಮಕ ಮಾಡುತ್ತಾರೆ. ಪ್ರಸ್ತುತ ಕೊಚ್ಚಿ ಮತ್ತು ಕೇರಳದಲ್ಲಿ ಈ ಹುದ್ದೆ ಖಾಲಿ ಇದೆ.
ಅರ್ಜಿ ಸಲ್ಲಿಸುವ ಮೊದಲು ನೆನಪಿನಲ್ಲಿಡಿ:
ಅಭ್ಯರ್ಥಿಯು ಭಾರೀ ವಾಹನ ಚಾಲನೆಯ ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು. ಅದೇ ಸಮಯದಲ್ಲಿ, ಅಭ್ಯರ್ಥಿಯು ಮೋಟಾರ್ ಮೆಕ್ಯಾನಿಕ್ನ ಕೆಲಸವನ್ನು ತಿಳಿದಿರಬೇಕು. ಅಲ್ಲದೆ ಎಲ್ಲಾ ರೀತಿಯ ವಾಹನಗಳನ್ನು ಚಾಲನೆ ಮಾಡುವ ಕನಿಷ್ಠ ಮೂರು ವರ್ಷಗಳ ಅನುಭವವನ್ನು ಹೊಂದಿರಬೇಕು.
ವಯೋಮಿತಿ:
-ಅರ್ಜಿದಾರರ ವಯಸ್ಸು 18 ರಿಂದ 27 ವರ್ಷದೊಳಗಿರಬೇಕು.
ಸಾಮರ್ಥ್ಯ:
- ಮಾನ್ಯತೆ ಪಡೆದ ಯಾವುದೇ ಬೋರ್ಡ್ ಅಥವಾ ಇನ್ಸ್ಟಿಟ್ಯೂಟ್ನಿಂದ 10 ನೇ ತರಗತಿ ಉತ್ತೀರ್ಣರಾಗಿರಬೇಕು.
- ಮೋಟಾರ್ ಮೆಕ್ಯಾನಿಕ್ ಬಗ್ಗೆ ತಿಳಿದಿರಬೇಕು.
- ಲೈಟ್ ಮತ್ತು ಭಾರೀ ವಾಹನವನ್ನು ಚಾಲನೆ ಮಾಡಲು ಚಾಲಕ ಪರವಾನಗಿ ಇರಬೇಕು.
- ಚಾಲನೆಯಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಯ ವಾಹನ ಚಾಲನಾ ಸಾಮರ್ಥ್ಯವನ್ನು ನಿರ್ಣಯಿಸುವ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಲೈಟ್ ಮತ್ತು ಭಾರೀ ವಾಹನಗಳನ್ನು ಚಲಿಸುವ ಕೌಶಲ್ಯ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ನೋಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆಯ ದಿನಾಂಕ ಮತ್ತು ಸ್ಥಳವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 30, 2018 ಆಗಿದೆ.