ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ

ಮಾಜಿ ವಿದೇಶಾಂಗ ಮಂತ್ರಿ ಹಾಗೂ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿ ಲೋದಿ ಚಿತಾಗಾರದಲ್ಲಿ ನೆರವೇರಿತು.

Last Updated : Aug 7, 2019, 05:39 PM IST
ಸಕಲ ಸರ್ಕಾರಿ ಗೌರವಗಳೊಂದಿಗೆ ಸುಷ್ಮಾ ಸ್ವರಾಜ್ ಅಂತ್ಯಕ್ರಿಯೆ  title=
Photo courtsey: ANI

ನವದೆಹಲಿ: ಮಾಜಿ ವಿದೇಶಾಂಗ ಮಂತ್ರಿ ಹಾಗೂ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ದೆಹಲಿ ಲೋದಿ ಚಿತಾಗಾರದಲ್ಲಿ ನೆರವೇರಿತು.

ಮಂಗಳವಾರ ರಾತ್ರಿ ತೀವ್ರ ಹೃದಯಘಾತದಿಂದ ಸುಷ್ಮಾ ಸ್ವರಾಜ್ ಅಕಾಲಿಕ ಮರಣಹೊಂದಿದ್ದರು.ಕೇಂದ್ರದಲ್ಲಿ ವಿದೇಶಾಂಗ ಮಂತ್ರಿಯಾಗಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕಿಯಾಗಿ ತಮ್ಮ ವಾಕ್ಚಾತುರ್ಯದಿಂದ  ಗಮನ ಸೆಳೆದಿದ್ದ ಸುಷ್ಮಾ ಸ್ವರಾಜ್ ಪಕ್ಷಾತೀತವಾಗಿ ಮೆಚ್ಚುಗೆ ಮತ್ತು ಗೌರವಕ್ಕೆ ಪಾತ್ರರಾಗಿದ್ದರು.ಇವರ ನಿಧನಕ್ಕೆ ಪ್ರಧಾನಿ ಹಾಗೂ ರಾಷ್ಟ್ರಪತಿ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.

ಲೋದಿ ಚಿತಾಗಾರದಲ್ಲಿ ನಡೆದ ಅಂತ್ಯಕ್ರಿಯೆ ವೇಳೆ ಪ್ರಧಾನಿ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಅಮಿತ್  ಷಾ , ರಾಜನಾಥ್ ಸಿಂಗ್, ಎಲ್ ,ಕೆ ಅದ್ವಾನಿ ಅವರು ಉಪಸ್ಥಿತರಿದ್ದರು.ಅಂತಿಮ ಸಂಸ್ಕಾರದ ವಿಧಿವಿಧಾನಗಳನ್ನು ಪುತ್ರಿ ಭಾಂಸುರಿ ಸ್ವರಾಜ್ ನೆರವೇರಿಸಿದರು.

ಮಂಗಳವಾರದಂದು ಸ್ವರಾಜ್ ಅವರನ್ನು ಹೃದಯಾಘಾತದಿಂದಾಗಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರಿಗೆ ಚಿಕಿತ್ಸೆ ಲಭಿಸದೆ ಇದ್ದಿದ್ದರಿಂದಾಗಿ ಅವರು ಮೃತಪಟ್ಟಿದ್ದರು. ಇದಾದ ನಂತರ ಅವರ ಶವವನ್ನು ಜನಪಥ್ ನಲ್ಲಿರುವ ಧವನ್ ದೀಪ್ ಕಟ್ಟಡದಲ್ಲಿರಿಸಲಾಗಿತ್ತು, ಅಲ್ಲಿ ಬಹುತೇಕರು ಅಂತಿಮ ದರ್ಶನವನ್ನು ಪಡೆದರು. ತದನಂತರ ಬಿಜೆಪಿ ಮುಖ್ಯ ಕಚೇರಿ ತೆಗೆದುಕೊಂಡು ಅಲ್ಲಿ ಪಕ್ಷದ ಗೌರವ ಸಮರ್ಪಣೆಯನ್ನು ಸಲ್ಲಿಸಲಾಯಿತು.

ಸುಷ್ಮಾ ಸ್ವರಾಜ್ ಅವರು ತಮ್ಮ ಸಾವಿನ ಕೆಲವೇ ಘಂಟೆಗೂ ಮೊದಲು ಟ್ವೀಟ್ ಮೂಲಕ  ಕಾಶ್ಮೀರಕ್ಕೆ ನೀಡಿದ್ದ ಕಲಂ 370 ರದ್ದುಗೊಳಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಪ್ರಧಾನಿ ಮೋದಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು.'ನಾನು ನನ್ನ ಜೀವನದುದ್ದಕ್ಕೂ ಈ ದಿನಕ್ಕಾಗಿ ಕಾಯುತ್ತಿದ್ದೆ. ನರೇಂದ್ರಮೋದಿ ಜೀ ಥ್ಯಾಂಕ್ಯೂ ನನ್ನ ಜೀವನದಲ್ಲಿ ಇಂಥ ದಿನವನ್ನು ನೋಡುವುದಕ್ಕೆ ಕಾಯುತ್ತಿದ್ದೆ' ಎಂದು ಟ್ವೀಟ್‌ ಮಾಡಿದ್ದರು. 

 

Trending News