ದೇಶವನ್ನು ರಕ್ಷಿಸಬೇಕಾದವರೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ- ಜಯಾ ಬಚ್ಚನ್

ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ದೇಶದವನ್ನು ರಕ್ಷಿಸಬೇಕಾದವರೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.  

Last Updated : May 1, 2019, 12:39 PM IST
ದೇಶವನ್ನು ರಕ್ಷಿಸಬೇಕಾದವರೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ- ಜಯಾ ಬಚ್ಚನ್  title=
photo:ANI

ನವದೆಹಲಿ: ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ದೇಶದವನ್ನು ರಕ್ಷಿಸಬೇಕಾದವರೇ ಅರಾಜಕತೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.  

ಲಕ್ನೋ ಸಮಾಜವಾದಿ ಅಭ್ಯರ್ಥಿ ಪೂನಂ ಸಿನ್ಹಾ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಯಾ ಬಚ್ಚನ್,  ಪ್ರಧಾನಿ ಹೆಸರನ್ನು ಉಲ್ಲೇಖಿಸದೆ ಟೀಕಾ ಪ್ರಹಾರ ನಡೆಸಿದರು. ಈ ಸಂದರ್ಭದಲ್ಲಿ ದೇಶವನ್ನು ರಕ್ಷಿಸಬೇಕಾದ ವ್ಯಕಿಯೂ ದೇಶದಲ್ಲಿ ಅರಾಜಕತೆ ಹಾಗೂ ಅವ್ಯವಸ್ಥೆಯನ್ನು ಸೃಷ್ಟಿಸುತ್ತಿದ್ದಾನೆ ಎಂದರು. 

ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾಗಿರುವ ಪೂನಂ ಸಿನ್ಹಾ ರನ್ನು ಸ್ವಾಗತಿಸಿದ ಜಯಾ ಬಚ್ಚನ್ " ಸಮಾವಾಜದಿಗಳ ಸಂಪ್ರದಾಯ ನೂತನ ಅಭ್ಯರ್ಥಿಗಳನ್ನು ಮನಃಪೂರ್ವಕವಾಗಿ ಸ್ವಾಗತಿಸುವುದು ಮತ್ತು ಅವರ ಗೆಲುವನ್ನು ಖಚಿತಪಡಿಸಿಕೊಳ್ಳುವುದು.ಎಲ್ಲ ಅಭ್ಯರ್ಥಿಗಳು ಎಲ್ಲಿಂದಲೂ ಬಂದಿದ್ದರೂ ಕೂಡ ಈಗ ನೀವು ಎಸ್ಪಿಯ ಭಾಗವಾಗಿದ್ದಿರಿ ಮತ್ತು ನಾವು ನಿಮ್ಮನ್ನು ರಕ್ಷಿಸುತ್ತೇವೆ ನಮ್ಮ ಅಭ್ಯರ್ಥಿಗಳ ಗೆಲುವನ್ನು ಖಚಿತಪಡಿಸುತ್ತೇವೆ" ಎಂದು ಅವರು ಹೇಳಿದರು. 

ನೀವು ಪೂನಂರನ್ನು ಗೆಲ್ಲಿಸುತ್ತಿರಿ ಎನ್ನುವ ಭರವಸೆಯನ್ನು ನೀವು ನೀಡಬೇಕು.ಇಲ್ಲದಿದ್ದರೆ ಅವರು ನನ್ನನ್ನು ಮುಂಬೈಗೆ ಎಂಟ್ರಿ ಕೂದಲು ಬಿಡುವುದಿಲ್ಲ.ನನ್ನ ಗೆಳತಿಯಾಗಿರುವ ಅವರು ಸುಮಾರು 40 ವರ್ಷಗಳಿಂದ ಉತ್ತಮ ಸಂಬಂಧವನ್ನು ಹೊಂದಿದ್ದಾರೆ ಎಂದು ಹೇಳಿದರು. 

Trending News