ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ, ಜನರಲ್ಲಿ ವಾಟ್ಸಾಪ್ನ(WhatsApp) ವ್ಯಾಮೋಹ ಬಹಳಷ್ಟು ವೇಗವಾಗಿ ಹೆಚ್ಚಾಗುತ್ತಿದೆ. ವಾಟ್ಸಾಪ್ ನಂತರ, ಜನರು ಸರಳ ಸಂದೇಶಗಳನ್ನು ಮಾಡಲು ಮರೆತಿದ್ದಾರೆ. ಚಾಟ್ ಮಾಡುವುದರಿಂದ ಹಿಡಿದು ಫೋಟೋಗಳು, ವೀಡಿಯೊಗಳು, ಕರೆ ಮಾಡುವುದು ಎಲ್ಲವನ್ನೂ ವಾಟ್ಸಾಪ್ ಮೂಲಕ ಮಾಡಬಹುದಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಆಗಾಗ್ಗೆ ವಾಟ್ಸಾಪ್ ಚಾಟ್‌ನಲ್ಲಿ ಅನೇಕ ಪ್ರಮುಖ ಮಾಹಿತಿ ಅಥವಾ ಕಚೇರಿ ಕೆಲಸದ ಬಗ್ಗೆ ಮಾತನಾಡುತ್ತೀರಿ. ಇದಲ್ಲದೆ, ಅನೇಕ ಬಾರಿ ನಿಮ್ಮ ಕೆಲವು ವೈಯಕ್ತಿಕ ಚಾಟ್‌ಗಳನ್ನು ಇತರರಿಂದ ಮರೆಮಾಚಲು ನೀವು ಬಯಸುತ್ತೀರಿ.
ನಮ್ಮ ವೈಯಕ್ತಿಕ ಚಾಟ್ ಅನ್ನು ಯಾರಾದರೂ ಓದುತ್ತಿದ್ದಾರೆಯೇ ಎಂಬ ಭಯ ನಮಗೆ ಕಾಡುತ್ತದೆ. ಆದರೆ ಇದೀಗ ನೀವು ಭಯಪಡುವ ಅಗತ್ಯವಿಲ್ಲ. ನಿಮ್ಮ ರಹಸ್ಯ ಸಂದೇಶಗಳನ್ನು ನೀವು ಬಹಳ ಸುಲಭವಾಗಿ ಮರೆಮಾಚಬಹುದು. ನಮ್ಮ ವಾಟ್ಸಾಪ್‌ನಲ್ಲಿಯೇ ಇಂತಹ ಒಂದು ವೈಶಿಷ್ಟ್ಯವಿದೆ. ಈ ವೈಶಿಷ್ಟ್ಯವನ್ನು ಬಳಸಿದ ನಂತರ ನಮ್ಮ ಚಾಟ್ ಅನ್ನು ಬೇರೆ ಯಾವ ವ್ಯಕ್ತಿಯೂ ಓದಲು ಸಾಧ್ಯವಿಲ್ಲ. ವಾಸ್ತವವಾಗಿ, ವಾಟ್ಸಾಪ್ನ ನಲ್ಲಿ ಇಂತಹ ಅನೇಕ ವೈಶಿಷ್ಟ್ಯಗಳಿವೆ, ಅದರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಕಂಪನಿಯಿಂದ ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಇಂತಹ ಅನೇಕ ವೈಶಿಷ್ಟ್ಯಗಳನ್ನು ಕಾಲಕಾಲಕ್ಕೆ ಸೇರಿಸಲಾಗುತ್ತದೆ, ಇದರಿಂದ ನಿಮ್ಮ ಡೇಟಾವನ್ನು ರಕ್ಷಿಸಲಾಗುತ್ತದೆ. ಆ ವಿಶೇಷ ವೈಶಿಷ್ಟ್ಯ ಯಾವುದು ಮತ್ತು ಅದನ್ನು ನಿಮ್ಮ ಫೋನ್‌ನಲ್ಲಿ ಹೇಗೆ ಸಕ್ರಿಯಗೊಳಿಸಬಹುದು ಎಂಬುದನ್ನುತಿಳಿದುಕೊಳ್ಳೋಣ.
ಐಫೋನ್ ನಲ್ಲಿ ಚಾಟ್ ಹೇಗೆ ಮರೆಮಾಚುವುದು?
ಮೊದಲಿಗೆ ನೀವು ಮರೆಮಾಚಲು ಬಯಸುವ ವಾಟ್ಸ್ ಆಪ್ ಚಾಟ್ ಗೆ ಹೋಗಿ. ಈಗ ನೀವು ಮರೆಮಾಚಲು ಬಯಸುವ ಚಾಟ್ ಅನ್ನು ಬಲಭಾಗಕ್ಕೆ ಸ್ವೈಪ್ ಮಾಡಿ. ಇದಾದ ಬಳಿಕ ಒಂದು ಆರ್ಕೈವ್ ಆಪ್ಶನ್ ಕಾಣಿಸಿಕೊಳ್ಳಲಿದೆ. ಈ ಐಕಾನ್ ಮೇಲೆ ಕ್ಲಿಕ್ಕಿಸಿದರೆ ನಿಮ್ಮ ಚಾಟ್ ಮರೆಯಾಗಲಿದೆ.
ಅಂಡ್ರಾಯಿಡ್ ನಲ್ಲಿ ಚ್ಯಾಟ್ ಅನ್ನು ಹೇಗೆ ಮರೆಮಾಚಬೇಕು?
ಒಂದು ವೇಳೆ ನೀವು ಅಂಡ್ರಾಯಿಡ್ ಬಳಕೆದಾರರಾಗಿದ್ದರೆ ಮತ್ತು ನಿಮ್ಮ ವಾಟ್ಸ್ ಆಪ್ ಚಾಟ್ ಅನ್ನು ಮರೆಮಾಚಲು ಬಯಸುತ್ತಿದ್ದರೆ. ಮೊದಲು ನೀವು ನಿಮ್ಮ ವಾಟ್ಸ್ ಆಪ್ ಚಾಟ್ ಗೆ ಭೇಟಿ ನೀಡಿ. ಈಗ ಮರೆಮಾಚಲು ಬಯಸುವ ಚಾಟ್ ಅನ್ನು ಕೆಲ ಸೆಕೆಂಡ್ ಗಳ ಕಾಲ ಅದುಮಿರಿ. ಆಗ ನಿಮಗೆ ನಿಮ್ಮ ಸ್ಕ್ರೀನ್ ಮೇಲೆ ಹಲವು ಆಪ್ಶನ್ ಗಳು ಕಾಣಸಿಗಲಿವೆ. ಇದರಲ್ಲಿ ನಿಮಗೆ ಆರ್ಕೈವ್ ಆಪ್ಶನ್ ಕೂಡ ಕಾಣಿಸಲಿದೆ. ಇದರ ಮೇಲೆ ಕ್ಲಿಕ್ಕಿಸಿ ನೀವು ನಿಮ್ಮ ಚಾಟ್ ಅನ್ನು ಮರೆಮಾಚಬಹುದು.
ಆರ್ಕೈವ್ ಮಾಡಲಾಗಿರುವ ಚಾಟ್ ಅನ್ನು ಅನ್ ಆರ್ಕೈವ್ ಮಾಡುವುದು ಹೇಗೆ?
ಒಂದು ವೇಳೆ ಈಗಾಗಲೇ ನೀವು ಯಾವುದಾದರೊಂದು ಚಾಟ್ ಅನ್ನು ಆರ್ಕೈವ್ ಮಾಡಿದ್ದರೆ, ಆ ಚಾಟ್ ಅನ್ನು ನೀವು ನಾರ್ಮಲ್ ಚಾಟ್ ಆಗಿ ಪರಿವರ್ತಿಸಬಹುದು. ಆರ್ಕೈವ್ ಮಾಡಿದ ಬಳಿಕ ನೀವು ಮರೆಮಾಚಿದ ಚಾಟ್ ಒಂದು ಫೋಲ್ಡರ್ ಗೆ ಸೇರಿ, ಎಲ್ಲ ಚಾಟ್ ಗಳಿಗಿಂತ ಕೆಳಭಾಗಕ್ಕೆ ಜಾರುತ್ತದೆ. ಕಾಂಟ್ಯಾಕ್ಟ್ ನೇಮ್ ಅನ್ನು ಸರ್ಚ್ ಮಾಡುವ ಮೂಲಕ ಇದನ್ನು ನೀವು ಓಪನ್ ಮಾಡಬಹುದು. ಒಂದು ವೇಳೆ ಪುನಃ ಇದನ್ನು ನಾರ್ಮಲ್ ಚಾಟ್ ಬಾಕ್ಸ್ ಗೆ ತರಲು ಬಯಸಿದರೆ. ಚಾಟ್ ಮೇಲೆ ಕ್ಲಿಕ್ಕಿಸಿ ಅದನ್ನು ನೀವು ಅನ್ ಆರ್ಕೈವ್ ಮಾಡಬಹುದು.