ತಮಿಳುನಾಡು: ಇಲ್ಲಿನ ಮೆಟ್ಟುಪಾಳ್ಯಂ ಸಮೀಪದ ಜಿ.ಕೆ.ನಗರ ಪ್ರದೇಶದ ಸಮೀಪದಲ್ಲಿ ರಾತ್ರೋರಾತ್ರಿ ನುಗ್ಗಿದ ಆನೆಗಳ ಹಿಂಡೊಂದು ಭಾರೀ ದಾಂಧಲೆ ನಡೆಸಿದೆ.
ರಾತ್ರೋ ರಾತ್ರಿ ಏರಿಯಾಗೆ ನುಗ್ಗಿದ 7 ಆನೆಗಳ ಹಿಂಡು ಗಲ್ಲಿಗಲ್ಲಿಗಳೆಲ್ಲಾ ಸುತ್ತಾಡಿವೆ. ಅಲ್ಲದೆ, ಪ್ರತಿಯೊಂದು ಮನೆಯ ಬಾಗಿಲ ಬಳಿ ಓಡಾಡಿ, ಘೀಳಿಟ್ಟಿವೆ. ಇದರಿಂದ ನಿವಾಸಿಗಳು ರಾತ್ರಿಯೆಲ್ಲಾ ಭಯಗೊಂಡು ನಿದ್ದೆಗೆಟ್ಟಿದ್ದಾರೆ. ತೋಟದಲ್ಲಿ ಬೆಳೆದಿದ್ದ ಬಾಳೆಗಳನ್ನೆಲ್ಲಾ ತಿಂದು ನಾಶಪಡಿಸಿವೆ. ಇದರಿಂದ ಜನರು ಬೆಳೆದಿದ್ದ ಬಾಳೆ ಬೆಲೆ ಸಂಪೂರ್ಣ ನಾಶವಾಗಿದೆ.
ಈ ಬಗ್ಗೆ ಸಾರ್ವಜನಿಕರು ಆನೆಗಳ ಹಾವಳಿ ತಪ್ಪಿಸಬೇಕು ಎಂದು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.