ಜುನಾಗಢ: ಗುಜರಾತಿನ ಜುನಾಗಢಕ್ಕೆ ರಾತ್ರೋರಾತ್ರಿ ಕಾಡಿನಿಂದ ಆಗಮಿಸಿದ 7 ಸಿಂಹಗಳ ಹಿಂಡೊಂದು ಹೆದ್ದಾರಿಯಲ್ಲಿ ಸಂಚರಿಸಿ ಕ್ಷಣಕಾಲ ಆತಂಕ ಸೃಷ್ಟಿ ಮಾಡಿದ ಘಟನೆ ಇತ್ತೀಚೆಗೆ ನಡೆದಿದೆ.
ಜುನಾಗಢದ ಭಾವನಾಥ್ ಪ್ರದೇಶದಲ್ಲಿ ಬುಧವಾರ ಭಾರೀ ಮಳೆಯಾದ ಬಳಿಕ ಸಿಂಹಗಳ ಹಿಂಡು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವುದನ್ನು ಕಂಡ ಭಾರ್ತಿ ಆಶ್ರಮದ ವ್ಯಕ್ತಿಯೊಬ್ಬರು ಆ ದೃಶ್ಯವನ್ನು ವೀಡಿಯೋ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಆದರೆ ಕೆಲ ಕ್ಷಣಗಳ ಬಳಿಕ ಯಾವುದೇ ತೊಂದರೆ ಮಾಡದೆ ಸಿಂಹಗಳು ಮರಳಿ ಕಾಡಿಗೆ ಹಿಂದಿರುಗಿವೆ.
#WATCH Viral video of a pride of lions seen roaming around a city road in Junagadh, which is near Girnar Wildlife Sanctuary. #Gujarat pic.twitter.com/QnpNQrb5yX
— ANI (@ANI) September 14, 2019
ಸಾಮಾನ್ಯವಾಗಿ ಮಳೆ ಸಂದರ್ಭದಲ್ಲಿ ಸಿಂಹಗಳು ಆಹಾರ ಅರಸಿ ವಸತಿ ಪ್ರದೇಶಗಳಿಗೆ ಬರುತ್ತವೆ. ಇದರಿಂದಾಗಿ ಜನರ ಜೀವಕ್ಕೂ ಅಪಾಯವಿದೆ ಎಂದು ವೀಡಿಯೋ ನೋಡಿದ ಜನರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅರಣ್ಯಾಧಿಕಾರಿಗಳು, ಸಮೀಪದಲ್ಲಿರುವ ಗಿರ್ನಾರ್ ಅರಣ್ಯ ಪ್ರದೇಶದಿಂದ ಕಾಡು ಪ್ರಾಣಿಗಳು ನಗರ ಪ್ರದೇಶಗಳಿಗೆ ಬರುವುದನ್ನು ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದ್ದಾರೆ.