ನವದೆಹಲಿ: ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸುತ್ತಾ ನಾವು ಸಂತಸವನ್ನು ಹಂಚುತ್ತೇವೆ ಆದರೆ ಕಾಂಗ್ರೆಸ್ ಜನರನ್ನು ವಿಭಜನೆ ಮಾಡುತ್ತದೆ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರೊಂದಿಗೆ ನಮೋ ಅಪ್ಲಿಕೇಶನ್ ನಲ್ಲಿ ಸಂವಾದ ನಡೆಸಿ ಮಾತನಾಡಿದ ಪ್ರಧಾನಿ ಮೋದಿ "ಬಿಜೆಪಿ ಸಂತೋಷವನ್ನು ಹಂಚುತ್ತದೆ ಆದರೆ ಕಾಂಗ್ರೆಸ್ ಜನರನ್ನು ವಿಭಜಿಸುವ ಕೆಲಸ ಮಾಡುತ್ತದೆ" ಎಂದು ಟೀಕಿಸಿದರು. ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಕಾಂಗ್ರೆಸ್ ಪಕ್ಷವು ಸಣ್ಣ ಸಣ್ಣ ವಿಷಯಗಳಿಗಾಗಿ ಕಚ್ಚಾಡುವ ಹಾಗೆ ಮಾಡುತ್ತಾರೆ ಎಂದು ಅವರು ತಿಳಿಸಿದರು.
ಇದೆ ವೇಳೆ ತೆಲಂಗಾಣ ಮತ್ತು ಆಂದ್ರಪ್ರದೇಶದ ವಿಭಜನೆಯನ್ನು ಪ್ರಸ್ತಾಪಿಸಿ ಮಾತನಾಡಿದ ಮೋದಿ" ಕಾಂಗ್ರೆಸ್ ಪಕ್ಷವು ಒಂದೇ ಭಾಷೆಯ ಜನರನ್ನು ಬೇರೆ ಬೇರೆ ಮಾಡುವ ಮೂಲಕ ಒಡೆದು ಆಳುವ ತಂತ್ರವನ್ನು ಅನುಸರಿಸಿತು.ಆದರೆ ಅಟಲ್ ಬಿಹಾರಿ ವಾಜಪೇಯಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಮೂರು ರಾಜ್ಯಗಳನ್ನು ಸೃಷ್ಟಿಸಿದರು" ಎಂದರು.
ಇದೆ ಸಂದರ್ಭದಲ್ಲಿ ಮಹಾಘಟಬಂಧನ್ ವಿಚಾರವಾಗಿ ಪ್ರಸ್ತಾಪಿಸುತ್ತಾ ಇದೊಂದು ವಿಫಲ ಯತ್ನ ಪ್ರತಿಪಕ್ಷಗಳೆಲ್ಲವು ಅವಕಾಶವಾದಿ ಪಕ್ಷಗಳು ಎಂದು ಕಿಡಿಕಾರಿದರು.