ನವದೆಹಲಿ: ಭಾರತದಲ್ಲಿ ಕೆಲಸ ಮಾಡುವ ಅದೆಷ್ಟೋ ಜನರಿಗೆ ಸಂಬಳ ಯಾವ ಹೆಚ್ಚಾಗುತ್ತದೆ ಎಂಬ ಚಿಂತೆ ಕಾಡುತ್ತಲೇ ಇರುತ್ತದೆ. "365 ದಿನಗಳು ಕೆಲಸ ಮಾಡಿದರೂ ಸಹ ವರ್ಷಕ್ಕೆ ಒಂದೇ ಸಾರಿ ಯಾಕಪ್ಪಾ ಸಂಬಳ ಕಾಸ್ತಿ ಮಾಡ್ತಾರೆ, ಮಾಡೋದೇನೋ ಮಾಡ್ತಾರೆ, 15% ಆದ್ರೂ ಮಾಡ್ಬಾರ್ದಾ...." ಅಂತಾ ಯೋಚನೆ ಮಾಡುತ್ತಿರುವವರಿಗೆ ಈ ಸುದ್ದಿ ನಿಜಕ್ಕೂ ಉಪಯುಕ್ತ!
ಭಾರತದ ಈ ನಗರದ ಉದ್ಯೋಗಿಗಳಿಗೆ ಬಹಳ ವೇಗವಾಗಿ ವೇತನದಲ್ಲಿ ಹೆಚ್ಚಾಳವಾಗುತ್ತದೆ. ಅದೇ. ಭಾರತದ ವಾಣಿಜ್ಯ ರಾಜಧಾನಿ ಮುಂಬೈ ನಗರ. 2014-18ರಲ್ಲಿ ಮುಂಬೈನ ದೇಶೀಯ ಆದಾಯದ ಬೆಳವಣಿಗೆಯು ವಿಶ್ವದ 32 ನಗರಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಮಾಹಿತಿಯನ್ನು ನೈಟ್ ಫ್ರಾಂಕ್ ನ ಗ್ಲೋಬಲ್ ರಿಜಿಸ್ಟರ್ ಆಫ್ ಅರ್ಬನ್ ಫ್ಯೂಚರ್ಸ್ ವರದಿ ಬಹಿರಂಗಪಡಿಸಿದೆ.
ರಿಯಲ್ ಎಸ್ಟೇಟ್ ನಲ್ಲಿ ಅತ್ಯಂತ ದುಬಾರಿ ನಗರ
ಕಳೆದ ಐದು ವರ್ಷಗಳಲ್ಲಿ ಮನೆಗಳ ಬೆಲೆಯಲ್ಲಿ ಆದ ಹೆಚ್ಚಳವು ಆದಾಯದ ಕ್ಷಿಪ್ರ ಬೆಳವಣಿಗೆಗೆ ಸಹಾಯವಾಗಿದೆ ಎಂದು ವರದಿ ಹೇಳಿದೆ. ಮನೆಗಳ ಬೆಲೆಗಳಲ್ಲಿ ಸ್ವಲ್ಪ ಏರಿಕೆಯಾದ ಕಾರಣ, ಮುಂಬಯಿ ವಿಶ್ವದ ಇತರ ನಗರಗಳಿಗಿಂತ ಕಡಿಮೆ ವೆಚ್ಚದಾಯಕ ನಗರ ಎನಿಸಿಕೊಂಡಿದ್ದರೂ, ಭಾರತದ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ದುಬಾರಿ ನಗರವಾಗಿ ಉಳಿದಿದೆ.
ಮನೆಗಳ ದರದಲ್ಲಿ ತುಲನಾತ್ಮಕ ರೀತಿಯಲ್ಲಿ ಬದಲಾವಣೆಯಾಗಿದ್ದು, ಶೇ.8ರಷ್ಟು ಏರಿಕೆಯಾಗಿದೆ. ಹಾಗಾಗಿ ಐದು ವರ್ಷಗಳ ಅವಧಿಯಲ್ಲಿ 2018ರಲ್ಲಿ ಮನೆಗಳ ಬೆಲೆ ಶೇ.20.4ರಷ್ಟು ಅಧಿಕವಾಗಿದೆ ಎಂದು ನೈಟ್ ಫ್ರಾಂಕ್ ನೀಡಿರುವ ವರದಿಯಲ್ಲಿ ಹೇಳಿದೆ. ಈ ಸಮೀಕ್ಷೆಯಲ್ಲಿ ಮನೆಗಳ ಬೆಲೆ ಮತ್ತು ಆದಾಯದ ನಡುವಿನ ವ್ಯತ್ಯಾಸವನ್ನು ಅರಿಯಲು ನಡೆಸಿದ ಮೌಲ್ಯಮಾಪನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಆದಾಯ ಬೆಳವಣಿಗೆ ದರ ಶೇ.25, ಎಂಸ್ಟ್ರ್ ಡಂನ ಆದಾಯ ಪ್ರಮಾಣದ ಶೇ.63.6 ರಷ್ಟು ದಾಖಲಾಗಿದೆ.