ಇನ್ನೊಂದು ವರ್ಷದಲ್ಲಿ ಲೋಕಸಭೆ ಸೇರಿ 8 ವಿಧಾನಸಭೆಗೆ ಚುನಾವಣೆ : ಕರ್ನಾಟಕ ಫಲಿತಾಂಶದ ನಂತರ ಬದಲಾಗುತ್ತಿದೆ ಲೆಕ್ಕಾಚಾರ

2023ರ ಕೊನೆಯಲ್ಲಿ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2024 ರ ಲೋಕಸಭೆ ಚುನಾವಣೆಯ ಜೊತೆಗೆ, ಕನಿಷ್ಠ 3 ರಾಜ್ಯಗಳು ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ. ಕರ್ನಾಟಕ ಚುನಾವಣೆಯ ಕಹಿಯನ್ನು ಮರೆತು ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಗಳಿಗೆ ತಯಾರಿ ಆರಂಭಿಸಿದೆ. ತನ್ನ ಲೆಕ್ಕಾಚಾರವನ್ನು ಈ ಬಾರಿ ಪಕ್ಷ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. 

Written by - Ranjitha R K | Last Updated : May 15, 2023, 10:45 AM IST
  • ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ.
  • 12 ತಿಂಗಳಲ್ಲಿ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ
  • ಮತ್ತೆ ಸದ್ದು ಮಾಡಲಿದೆ ಚುನಾವಣೆ
ಇನ್ನೊಂದು ವರ್ಷದಲ್ಲಿ ಲೋಕಸಭೆ ಸೇರಿ 8 ವಿಧಾನಸಭೆಗೆ ಚುನಾವಣೆ : ಕರ್ನಾಟಕ ಫಲಿತಾಂಶದ ನಂತರ ಬದಲಾಗುತ್ತಿದೆ ಲೆಕ್ಕಾಚಾರ  title=

ನವದೆಹಲಿ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಈಗ ರಾಜ್ಯದಲ್ಲಿ ಸರ್ಕಾರ ರಚನೆಯದ್ದೇ ಕಸರತ್ತು. ಆದರೆ ಇನ್ನು 12 ತಿಂಗಳಲ್ಲಿ 8 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆ ನಡೆಯಲಿದೆ. ಈ ಸಾಲು ಸಾಲು ಚುನಾವಣೆಗಳಿಂದಾಗಿ ದೇಶದ ರಾಜಕೀಯ ವಾತಾವರಣ 2024ರ ಸಾರ್ವತ್ರಿಕ ಚುನಾವಣೆವರೆಗೂ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಪಕ್ಷದ  ಹುಮ್ಮಸ್ಸು ಹೆಚ್ಚಿದೆ. ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಮತ್ತು ಮುಖಂಡರ ಉತ್ಸಾಹವನ್ನು ಮುಂದಿನ 12 ತಿಂಗಳ ಕಾಲ ಹೀಗೆಯೇ ಕಾಪಾಡಿಕೊಳ್ಳಲು ಪಕ್ಷ ಪ್ರಯತ್ನಿಸಲಿದೆ. ಇನ್ನು ಕರ್ನಾಟಕ ಚುನಾವಣೆಯ ಕಹಿಯನ್ನು ಮರೆತು ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಗಳಿಗೆ ತಯಾರಿ ಆರಂಭಿಸಿದೆ. ತನ್ನ ಲೆಕ್ಕಾಚಾರವನ್ನು ಈ ಬಾರಿ ಪಕ್ಷ ಬದಲಿಸಲಿದೆ ಎಂದು ಹೇಳಲಾಗುತ್ತಿದೆ. 

ನಡೆಯಲಿದೆ ಸಾಲು ಸಾಲು ಚುನಾವಣೆ :
2023ರ ಕೊನೆಯಲ್ಲಿ 5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 2024 ರ ಲೋಕಸಭೆ ಚುನಾವಣೆಯ ಜೊತೆಗೆ, ಕನಿಷ್ಠ 3 ರಾಜ್ಯಗಳು ವಿಧಾನಸಭಾ ಚುನಾವಣೆಗಳನ್ನು ಎದುರಿಸಲಿದೆ.  ಕರ್ನಾಟಕದ ನಂತರ, ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮಿಜೋರಾಂನಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮತದಾನ ನಡೆಯಲಿದೆ.

ಇದನ್ನೂ ಓದಿ :Karnataka Elections 2023: ಸಿದ್ದರಾಮಯ್ಯ vs ಡಿಕೆ ಶಿವಕುಮಾರ್, ಯಾರಿಗೆ ಸಿಎಂ ಪಟ್ಟ?

2023 ರಲ್ಲಿ ಇದುವರೆಗೆ ನಡೆದ 4 ರಾಜ್ಯಗಳಲ್ಲಿ ಚುನಾವಣೆ:
ಈ ವರ್ಷ ಇಲ್ಲಿಯವರೆಗೆ 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆದಿವೆ. ಇವುಗಳಲ್ಲಿ ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ತ್ರಿಪುರಾ ಮತ್ತು ಮೇಘಾಲಯದಲ್ಲಿ ವಿಧಾನಸಭಾ ಚುನಾವಣೆಗಳು ನಡೆದಿವೆ. ಅದೇ ಸಮಯದಲ್ಲಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ಚುನಾವಣೆ ಮುಗಿದಿದೆ. ಈ ಚುನಾವಣೆಗಳ ನಂತರ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ-ಬಿಜೆಪಿ ಮೈತ್ರಿ ಮತ್ತು ತ್ರಿಪುರಾದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ. ಅದೇ ಸಮಯದಲ್ಲಿ, ಮೇಘಾಲಯದಲ್ಲಿಯೂ ಬಿಜೆಪಿ ಸಮ್ಮಿಶ್ರ ಸರ್ಕಾರವಿದೆ.

ಮತ್ತೆ ಸದ್ದು ಮಾಡಲಿದೆ ಚುನಾವಣೆ :
ಇನ್ನು ಕೆಲವೇ ದಿನಗಳಲ್ಲಿ ಅಂದರೆ 2023ರ ಕೊನೆಯಲ್ಲಿ ನಡೆಯಲಿರುವ ಮಿಜೋರಾಂ, ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆ ಸದ್ದು ಮಾಡಲಿದೆ. ಚುನಾವಣಾ ಆಯೋಗದ ಪ್ರಕಾರ, ಈ ಎಲ್ಲಾ 5 ರಾಜ್ಯಗಳ ವಿಧಾನಸಭೆಗಳ ಅವಧಿ ಡಿಸೆಂಬರ್-ಜನವರಿಯಲ್ಲಿ ಕೊನೆಗೊಳ್ಳಲಿದೆ.

ಇದನ್ನೂ ಓದಿ : ಭಾವನಾತ್ಮಕ ಮತಯಾಚನೆ ಮತ್ತು ಧ್ರುವೀಕರಣ: ಕರ್ನಾಟಕದಲ್ಲಿ ತಿರುಮಂತ್ರವಾಯಿತೇ ಬಿಜೆಪಿಯ ಗೆಲುವಿನ ತಂತ್ರ?

ಅಧಿಕಾರಾವಧಿ ಎಲ್ಲಿ ಮತ್ತು ಯಾವಾಗ ಕೊನೆಗೊಳ್ಳುತ್ತದೆ?
40 ಸದಸ್ಯ ಬಲದ ಮಿಜೋರಾಂ ವಿಧಾನಸಭೆಯ ಅವಧಿ ಡಿಸೆಂಬರ್ 17ಕ್ಕೆ ಕೊನೆಗೊಳ್ಳಲಿದೆ. ಅದೇ ಸಮಯದಲ್ಲಿ, ಛತ್ತೀಸ್‌ಗಢ ವಿಧಾನಸಭೆಯ ಅಧಿಕಾರಾವಧಿಯು ಜನವರಿ 3 ರಂದು ಕೊನೆಗೊಳ್ಳಲಿದೆ. ಮಧ್ಯಪ್ರದೇಶ ವಿಧಾನಸಭೆಯು ಜನವರಿ 6, 2024 ರಂದು ಕೊನೆಗೊಳ್ಳಲಿದೆ. ಇವುಗಳಲ್ಲದೆ, ರಾಜಸ್ಥಾನ ವಿಧಾನಸಭೆಯ ಅಧಿಕಾರಾವಧಿಯು ಜನವರಿ 14 ರಂದು ಮತ್ತು ತೆಲಂಗಾಣ ವಿಧಾನಸಭೆಯು ಜನವರಿ 16, 2024 ರಂದು ಕೊನೆಗೊಳ್ಳಲಿದೆ.

ಈ 5 ರಾಜ್ಯಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗವು ಏಕಕಾಲದಲ್ಲಿ ಘೋಷಿಸಬಹುದು ಎಂದು ಊಹಿಸಲಾಗಿದೆ. ಎಲ್ಲಾ 5 ರಾಜ್ಯಗಳ ಫಲಿತಾಂಶಗಳು ಒಟ್ಟಿಗೆ ಬರಬಹುದು. ಇದಲ್ಲದೇ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ವರ್ಷ ವಿಧಾನಸಭೆ ಚುನಾವಣೆಯೂ ನಡೆಯುವ ಸಾಧ್ಯತೆ ಇದೆ. ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ 2023ರ ಬೇಸಿಗೆಯಲ್ಲಿ ಚುನಾವಣೆ ನಡೆಯಬಹುದು.

ಇದನ್ನೂ ಓದಿ Karnataka Elections 2023: ಸಿದ್ದು vs ಡಿಕೆಶಿ, ಯಾರಿಗೆ ಒಲಿಯಲಿದೆ ಸಿಎಂ ಪಟ್ಟ?

ವಾಸ್ತವವಾಗಿ ಅಮರನಾಥ ಯಾತ್ರೆಯು ಜುಲೈ 1 ರಿಂದ ಆಗಸ್ಟ್ 31 ರವರೆಗೆ 62 ದಿನಗಳ ಕಾಲ ಇಲ್ಲಿ ನಡೆಯಲಿದೆ. ಈ ಯಾತ್ರೆಯ ಬಳಿಕ  ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಬಹುದು. ಅಷ್ಟೇ ಅಲ್ಲ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆಗಳ ಅವಧಿಯೂ 2024ರ ಜೂನ್‌ನಲ್ಲಿ ಕೊನೆಗೊಳ್ಳಲಿದೆ. ಹೀಗಿರುವಾಗ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆ ಜೊತೆಗೆ ಈ ಮೂರೂ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News