Karnataka Election : 200 ಕೋಟಿಗೂ ಮೀರಿದ ಚುನಾವಣಾ ಅಕ್ರಮ ವಸ್ತುಗಳ ವಶ

Karnataka Election :ಚುನಾವಣಾ ದಿನ ಸಮೀಪಿಸುತ್ತಿದೆ. ದಿನೇ ದಿನೇ  ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಇದೇ ವೇಳೆ ಚುನಾವಣಾ ಅಕ್ರಮಗಳ ಪಟ್ಟಿಯೂ ಬೆಳೆಯುತ್ತಿದೆ.    

Written by - Ranjitha R K | Last Updated : Apr 20, 2023, 09:54 AM IST
  • ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ತೀವ್ರಗೊಂಡಿದೆ.
  • ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
  • ಚುನಾವಣಾ ಅಕ್ರಮ ಕೂಡಾ ಬಿರುಸಿನಿಂದಲೇ ನಡೆಯುತ್ತಿದೆ.
Karnataka Election : 200 ಕೋಟಿಗೂ ಮೀರಿದ ಚುನಾವಣಾ ಅಕ್ರಮ  ವಸ್ತುಗಳ ವಶ  title=

Karnataka Election : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ತೀವ್ರಗೊಂಡಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಈ ಮದ್ಯೆ ಚುನಾವಣಾ ಅಕ್ರಮ ಕೂಡಾ ಬಿರುಸಿನಿಂದಲೇ ನಡೆಯುತ್ತಿದೆ. ಎಲ್ಲಿ ನೋಡಿದರೂ ನಗದು, ಚುನಾವಣಾ ಅಕ್ರಮಕ್ಕೆ ಬಳಸಲು ತಂದಿರುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಇದೀಗ  
200 ಕೋಟಿಗೂ ಮೀರಿದ  ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಚುನಾವಣಾ ದಿನ ಸಮೀಪಿಸುತ್ತಿದೆ. ದಿನೇ ದಿನೇ  ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಇದೇ ವೇಳೆ ಚುನಾವಣಾ ಅಕ್ರಮಗಳ ಪಟ್ಟಿಯೂ ಬೆಳೆಯುತ್ತಿದೆ. ರಾಜ್ಯಾದ್ಯಂತ ಚುನಾವಣಾ ಅಕ್ರಮಗಳ ಮೇಲೆ ಏಜೆನ್ಸಿಗಳು ಹದ್ದಿನ ಕಣ್ಣಿಟ್ಟಿವೆ. ಇಲ್ಲಿಯವರೆಗೆ  ಚುನಾವಣಾ ಅಕ್ರಮವಾಗಿ ಬಳಸುತ್ತಿದ್ದ  200 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.    

ಇದನ್ನೂ ಓದಿ : ಬಿಜೆಪಿ ಮುಖಂಡ ಚಾಮರಾಜನಗರ ಜೆಡಿಎಸ್ ಅಭ್ಯರ್ಥಿ: ಸೋಮಣ್ಣಗೆ ಒಳೇಟು!? 

ಇಲ್ಲಿಯವರೆಗೆ ವಶಪಡಿಸಿಕೊಂಡಿರುವ  ವಸ್ತುಗಳು : 

ನಗದು ಹಣ : 
ಈವರೆಗೆ ರಾಜ್ಯಾದ್ಯಂತ 76.70 ಕೋಟಿ ನಗದು  ವಶಪಡಿಸಿಕೊಳ್ಳಲಾಗಿದೆ. ದಿನವೊಂದಕ್ಕೆ ಸುಮಾರು ಒಂದೂವರೆ ಕೋಟಿಗೂ ಅಧಿಕ ನಗದು ಸೀಜ್ ಮಾಡಲಾಗುತ್ತಿದೆ. ಪೊಲೀಸ್, ಎಫ್ಎಸ್ ಮತ್ತು ಎಸ್ಎಸ್  ಟಿ ತಂಡದಿಂದ ಇಲ್ಲಿಯವರೆಗೆ 60 ಕೋಟಿ ನಗದು  ವಶ ಪಡಿಸಿಕೊಳ್ಳಲಾಗಿದ್ದು, ಐಟಿ ಇಲಾಖೆಯಿಂದ 16.36 ಕೋಟಿ ನಗದು ಸೀಜ್ ಮಾಡಲಾಗಿದೆ. 

ಮದ್ಯ ಮತ್ತು ಡ್ರಗ್ಸ್ : 
ಅದೇ ರೀತಿ ಏಜೆನ್ಸಿಗಳು 42.82 ಕೋಟಿ ಮೌಲ್ಯದ ಮದ್ಯ ವಶಪಡಿಸಿಕೊಂಡಿವೆ. ನಿನ್ನೆ ಒಂದೇ ದಿನ 1.89 ಕೋಟಿ ಮೌಲ್ಯದ 90 ಲಕ್ಷ ಲೀಟರ್‌ ಮದ್ಯ ಜಪ್ತಿ ಮಾಡಲಾಗಿದೆ. ಇದೇ  ವೇಳೆ, 15 ಕೋಟಿ ಮೌಲ್ಯದ 915 ಕೆಜಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.  

ಇದನ್ನೂ ಓದಿ : "ಆಶೀರ್ವಾದ ನೀಡಲು ನರೇಂದ್ರ ಮೋದಿ‌ ಅವರು ದೇವರಲ್ಲ"- ನಡ್ದಾ ಹೇಳಿಕೆಗೆ ಸಿದ್ದುಕಿಡಿ 

ಚಿನ್ನ ಬೆಳ್ಳಿ : 
ರಾಜ್ಯಾದ್ಯಂತ ಕೋಟ್ಯಂತರ ಮೌಲ್ಯದ ಚಿನ್ನ ಬೆಳ್ಳಿ ಉಡುಗೊರೆಗಳನ್ನು ಕೂಡಾ ಸೀಜ್ ಮಾಡಲಾಗಿದೆ. ಬರೋಬ್ಬರಿ 49.71 ಕೋಟಿ ಮೌಲ್ಯದ ಚಿನ್ನ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.  ಇದರಲ್ಲಿ 45 ಕೋಟಿ ಮೌಲ್ಯದ 95 ಕೆಜಿ ಚಿನ್ನ, 3.89 ಕೋಟಿ ಮೌಲ್ಯದ 561 ಕೆಜಿ ಬೆಳ್ಳಿ ಸೀಜ್ ಮಾಡಲಾಗಿದೆ. 

ಇವೆಲ್ಲವನ್ನೂ ಸೇರಿ ಮಾರ್ಚ್ 29 ರಿಂದ ಈವರೆಗೆ ಬರೋಬ್ಬರಿ 204 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News