ಮೈಸೂರು: ಸಿದ್ದರಾಮಯ್ಯ ಅವರು ಕೋಪಗೊಂಡ ಬಗ್ಗೆ ಮಾಧ್ಯಮಗಳಲ್ಲಿ ವಿವಾದಪೂರಿತ ವರದಿಗಳು ಬಿತ್ತರವಾಗುತ್ತಿದ್ದಂತೆ, ಅಲ್ಲಿ ನಿಜಕ್ಕೂ ನಡೆದದ್ದೇನು ಎಂಬುದನ್ನು ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ಹಾಗು ಕಾಂಗ್ರೆಸ್ ಕಾರ್ಯಕರ್ತೆ ಜಮಲಾರ್ ವಿವರಿಸಿದ್ದಾರೆ.
"ಸಿದ್ದರಾಮಯ್ಯ ಅವರು ಕೋಪಗೊಂಡಿದ್ದರ ಬಗ್ಗೆ ನನಗೇನೂ ಸಮಸ್ಯೆಯಿಲ್ಲ. ಅವರು ನಿಜಕ್ಕೂ ಉತ್ತಮ ಸಿಎಂ. ಸಾರ್ವಜನಿಕ ಸಮಸ್ಯೆಗಳನ್ನು ಹೇಳಿಕೊಳ್ಳುವಾಗ ನಾನೇ ಸ್ವಲ್ಪ ಒರಟಾಗಿ ವರ್ತಿಸಿದೆ. ನಾನು ಟೇಬಲ್ ಕುಟ್ಟಿ ಮಾತನಾಡಿದ್ದೇ ಅವರ ಕೋಪಕ್ಕೆ ಕಾರಣವಾಯಿತು. ಒಬ್ಬ ಮಾಜಿ ಮುಖ್ಯಮಂತ್ರಿ ಮುಂದೆ ನಾನು ಹಾಗೆ ಮಾತನಾಡಬಾರದಿತ್ತು" ಎಂದು ಮಹಿಳೆ ಜಮಲಾರ್ ಹೇಳಿದ್ದಾರೆ.
Jamala, the woman who asked a question to Siddaramaiah in Mysuru: I've no issues, he was the best CM. I only told him about some grievances and spoke roughly. I shouldn't have spoken like that to a former a CM. He got angry because I slammed the table. pic.twitter.com/TsIUV05Qxk
— ANI (@ANI) January 28, 2019
ಮೈಸೂರಿನ ವರುಣಾ ಕ್ಷೇತ್ರದಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡು ಅಳಲು ತೋಡಿಕೊಂಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಮಲಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿ ವರ್ತಿಸಿದ್ದರು.