ಭೀಮನ ಆರೋಗ್ಯ ಸ್ಥಿತಿ ಗಂಭೀರ!..ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಸ್ಥಳೀಯರ ಒತ್ತಾಯ..!

Elephant Bhima : ಕಾಡಾನೆಗಳ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ನರಳಾಡುತ್ತಿರುವ ಒಂಟಿ ಸಲಗ ಭೀಮನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಅರಣ್ಯ ಇಲಾಖೆ ನಿಗಾ ವಹಿಸದೇ ನಿರ್ಲಕ್ಷ ತಾಳಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

Written by - Savita M B | Last Updated : Aug 29, 2023, 10:32 AM IST
  • ಭೀಮನ ದೇಹದ ಹಿಂಬದಿಗೆ ತೀವ್ರ ಸ್ವರೂಪದ ಗಾಯವಾಗಿದೆ
  • ಕಾಡಾನೆಯ ಬಾಲ ಹಾಗು ಹಿಂಬದಿಯ ಬಲಗಾಲಿನ ಬಳಿ ಚರ್ಮ ಕೊಳೆಯುತ್ತಿದೆ
  • ಚಿಕಿತ್ಸೆ ನೀಡಿ ನಾಲ್ಕು ದಿನವಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದೆ ಇರುವುದ್ದರಿಂದ ಗ್ರಾಮಸ್ಥರು ಅಂತಕಕ್ಕೆ ಒಳಗಾಗಿದ್ದಾರೆ.
ಭೀಮನ ಆರೋಗ್ಯ ಸ್ಥಿತಿ ಗಂಭೀರ!..ಸ್ಥಳಾಂತರಿಸಿ ಚಿಕಿತ್ಸೆ ನೀಡುವಂತೆ ಸ್ಥಳೀಯರ ಒತ್ತಾಯ..! title=

ಸಕಲೇಶಪುರ: ಸಕಲೇಶಪುರ ತಾಲ್ಲೂಕಿನ ಬೆಳಗೋಡು ಹೋಬಳಿ ಕೆಲವಳ್ಳಿ ಹೆಗ್ಗೋವೆ ಗ್ರಾಮದಲ್ಲಿಯೇ ಉಳಿದ ಭೀಮನ ದೇಹದ ಹಿಂಬದಿ ತೀವ್ರ ಸ್ವರೂಪದ ಗಾಯವಾಗಿದ್ದು ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದೆ. 

ಈ ವರೆಗೆ ಯಾರಿಗೂ ತೊಂದರೆ ಕೊಡದೇ ಆಹಾರ ಅರಸಿ ಮನೆಯ ಬಾಗಿಲಿಗೆ ಬರುತ್ತಿದ್ದ ಭೀಮನಿಗೆ ಜನರು ಹಣ್ಣು, ಕಬ್ಬು ನೀಡುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಹೆಗ್ಗೋವೆ ಗ್ರಾಮದ ಸಮೀಪ ಕಾಡಾನೆಗಳ ಕಾಳದಲ್ಲಿ ದಂತದಿಂದ ತಿವಿತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡಿತ್ತು.

ಕಾಡಾನೆಯ ಬಾಲ ಹಾಗು ಹಿಂಬದಿಯ ಬಲಗಾಲಿನ ಬಳಿ ಚರ್ಮ ಕೊಳೆಯುತ್ತಿದ್ದು ನೋವಿನಿಂದ ಬಸವಳಿದು ಆಹಾರ ತ್ಯಜಿಸಿ, ನೋವು ತಾಳಲಾರದೆ ಪ್ರತಿನಿತ್ಯವೂ ಹೆಗ್ಗಾವೆ ಸಮೀಪದ ಹೊಂಡದ ನೀರಿನಲ್ಲಿ ಮಲಗಿ ನಡೆದಾಡಲಾಗದೆ ಪರದಾಡುತ್ತಿತ್ತು. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

ಆಗಸ್ಟ್. 25ರಂದು ಮೈಸೂರಿನಿಂದ ಆಗಮಿಸಿದ ನುರಿತ ವನ್ಯಜೀವಿ ವೈದ್ಯರು ಕಾಡಾನೆಗೆ ಚಿಕಿತ್ಸೆ ನೀಡಿದ್ದರು. ಆದರೆ, ಚಿಕಿತ್ಸೆ ನೀಡಿ ನಾಲ್ಕು ದಿನವಾದರೂ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದೆ ಇರುವುದ್ದರಿಂದ ಗ್ರಾಮಸ್ಥರು ಅಂತಕಕ್ಕೆ ಒಳಗಾಗಿದ್ದಾರೆ. 

ಇದನ್ನೂ ಓದಿ-Bangude Fish: ಬಲೆಗೆ ಬಿದ್ದ ಕರಾವಳಿಯಲ್ಲೇ ಅತಿದೊಡ್ಡ ಬಂಗುಡೆ ಮೀನು!

ಒಮ್ಮೆ ಚಿಕಿತ್ಸೆ ನೀಡಿ ಹೋದ ಅರಣ್ಯ ಇಲಾಖೆ ಪುನಃ ಇತ್ತ ತಿರುಗಿ ನೋಡದೆ ಇರುವುದರಿಂದ ಕಾಡಾನೆ ದಿನನಿತ್ಯ ಗ್ರಾಮಸ್ಥರು ನೀಡುವ ಆಹಾರ ತಿಂದು ನೋವಿನಲ್ಲಿ ನಡೆದಾಡುತ್ತಿರುವ ದೃಶ್ಯ ಗ್ರಾಮಸ್ಥರ ಮನಕಲಕಿದೆ.

ಅರಣ್ಯ ಇಲಾಖೆ ನೆಪ ಮಾತ್ರಕ್ಕೆ ಚಿಕಿತ್ಸೆ ನೀಡಿ ತೆರಳಿದ್ದಾರೆ. ಗಾಯಗೊಂಡಿರುವ ಆನೆಗೆ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡುವಲ್ಲಿ ಇಲಾಖೆ ನಿರ್ಲಕ್ಷö್ಯ ತೋರುತ್ತಿದ್ದಾರೆ. ಇದೀಗಾ ಆಹಾರ ನೀಡಲು ಗ್ರಾಮಸ್ಥರು ತೆರಳಿದರು ನಮ್ಮ ಮೇಲೆ ಎರಗಿ ಬರುತ್ತಿದೆ. 

ಇತ್ತ ಅರಣ್ಯ ಇಲಾಖೆಯವರು ಆನೆಯ ಆರೋಗ್ಯ ಸ್ಥಿತಿ ಮೇಲೆ ನಿಗಾ ವಹಿಸಿಲ್ಲ ಇದರಿಂದ ಭೀಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ ಇಲಾಖೆ ಶೀಘ್ರವಾಗಿ ಸ್ಥಳಾಂತರ ಮಾಡಿ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಬೇಕು ಸ್ಥಳೀಯರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ-"ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು"

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News