Newborn Found In Circle: ನವಜಾತ ಹೆಣ್ಣು ಶಿಶುವನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದ ರಾಮಪಟ್ಟಣ ಸರ್ಕಲ್ನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಪಟ್ಟಣದ ರಾಮಪಟ್ಟಣ ಸರ್ಕಲ್ ನಲ್ಲಿ ಪಟ್ಟಣ ಪಂಚಾಯತಿ ಪೌರ ಕಾರ್ಮಿಕರು ಪಟ್ಟಣದಲ್ಲಿ ಕಸ ಗುಡಿಸಲು ಹೋದಾಗ ದೂರದಲ್ಲಿ ಪುಟ್ಟ ಮಗು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕೋತಿ ಇರಬಹುದು ಎಂದುಕೊಂಡಿದ್ದರಂತೆ. ನಂತರ ಹತ್ತಿರ ಹೋಗಿ ನೋಡಿದಾಗ ಅದು ನವಜಾತ ಹೆಣ್ಣು ಶಿಶು ಎಂದು ತಿಳಿದುಬಂದಿದೆ.
ಇದನ್ನೂ ಓದಿ- "ಬೊಮ್ಮಾಯಿ ಅವರು ಸಾಲ ಮಾಡಿ ಹೋಳಿಗೆ ತಿನ್ನಲು ಶುರು ಮಾಡಿದ್ದಾರೆ"
ನವಜಾತ ಹೆಣ್ಣು ಶಿಶುವನ್ನು ಕಂಡ ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಾರೋ ಗರ್ಭಿಣಿ ಮಹಿಳೆ ಸ್ಥಳದಲ್ಲಿ ಮಗುವನ್ನು ಹೆತ್ತು ತನಗೆ ಬೆಡದ ನವಜಾತ ಹೆಣ್ಣು ಶಿಶುವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ- Railway Department: ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್: ಮೊಬೈಲ್ ಆಪ್ ಸೇವೆ ಈಗ ಕನ್ನಡದಲ್ಲೂ ಲಭ್ಯ
ಸ್ಥಳದಲ್ಲಿ ತೀವ್ರ ಚಳಿಯಿಂದ ಹಾಗೂ ಆರೈಕೆ ಇಲ್ಲದೆ ನವಜಾತ ಶಿಶು ಮೃತಪಟ್ಟಿದೆ. ಇನ್ನು ಘಟನಾ ಸ್ಥಳಕ್ಕೆ ಗುಡಿಬಂಡೆ ಪಟ್ಟಣ ಪಂಚಾಯತಿ ಆರೋಗ್ಯ ನಿರೀಕ್ಷರು, ಗುಡಿಬಂಡೆ ಠಾಣೆಯ ಪೊಲೀಸ್ ಭೇಟಿ ನೀಡಿ ಮೃತ ನವಜಾತ ಶಿಶುವನ್ನು ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.