Communal Harmony: ದೇವಸ್ಥಾನವೊಂದರಲ್ಲಿ ಕುರಾನ್ ಪಠಣ, ಮುಂದುವರೆದ ಸಾಂಪ್ರದಾಯಿಕ ಪರಂಪರೆ

Communal Harmony - ಕರ್ನಾಟಕದಲ್ಲಿ ಇತ್ತೀಚಿಗೆ ನಡೆಯುತ್ತಿರುವ ಕೋಮು ಉದ್ವಿಗ್ನತೆಗಳ ಘಟನೆಗಳ ಮಧ್ಯೆಯೇ ದೇವಸ್ಥಾನದಲ್ಲಿ ಕುರಾನ್ ಶ್ಲೋಕಗಳನ್ನು ಪಠಿಸುವ ಮೂಲಕ 'ರಥೋತ್ಸವ' ಆಚರಿಸುವ ಹಳೆ ಸಂಪ್ರದಾಯವನ್ನು ಮುಂದುವರೆಸಲಾಗಿದೆ.  

Written by - Nitin Tabib | Last Updated : Apr 17, 2022, 09:17 PM IST
  • ದೇವಸ್ಥಾನದಲ್ಲಿ ಕುರಾನ್ ಶ್ಲೋಕಗಳ ಪಠಣ
  • ಕುರಾನ್ ಪಠಿಸಿ ರಥೋತ್ಸವಕ್ಕೆ ಚಾಲನೆ ನೀಡಿದ ಬಾಷಾ
  • ಬೇಲೂರು ಚನ್ನಕೇಶವ ದೇವಸ್ಥಾನದಲ್ಲಿ ಮುಂದುವರೆದ ಹಳೆ ಸಂಪ್ರದಾಯ
Communal Harmony: ದೇವಸ್ಥಾನವೊಂದರಲ್ಲಿ ಕುರಾನ್ ಪಠಣ, ಮುಂದುವರೆದ ಸಾಂಪ್ರದಾಯಿಕ ಪರಂಪರೆ title=
Quran In Temple

ಬೆಂಗಳೂರು: Example Of Communal Harmoney - ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಕೋಮುಗಲಭೆಯ ಘಟನೆಗಳ ಮಧ್ಯೆಯೇ ಕೋಮು ಸೌಹಾರ್ದತೆಗೆ ಉದಾಹರಣೆಯಾಗಿ ಹಾಸನ ಜಿಲ್ಲೆಯ ಬೇಲೂರಿನ ಚೆನ್ನಕೇಶವ ದೇವಸ್ಥಾನದಲ್ಲಿ ಕುರಾನ್‌ನ ಶ್ಲೋಕಗಳನ್ನು ಪಠಿಸುವ ಮೂಲಕ ರಥೋತ್ಸವ ಆರಂಭದ ಹಳೆ ಸಂಪ್ರದಾಯವನ್ನು ಮುಂದುವರೆಸಲಾಗಿದೆ. ಹಳೆ ಸಂಪ್ರದಾಯದ ಪ್ರಕಾರ, ಎರಡು ದಿನಗಳ ರಥೋತ್ಸವದ ಮೊದಲ ದಿನ ದೊಡ್ಡ ಮೇದೂರಿನ ಖಾಜಿ ಸೈಯದ್ ಸಜ್ಜದ್ ಬಾಷಾ ಅವರು ಕುರಾನ್ ಆಯತಗಳನ್ನು ಪಠಿಸಿದ ನಂತರ  ರಥವನ್ನು ಎಳೆಯಲಾಗಿದೆ. ಅಲ್ಲಿನ ಅಧಿಕಾರಿಗಳ ಪ್ರಕಾರ, ದೇವಸ್ಥಾನದ ಜಾತ್ರೆಯಲ್ಲಿ ಖುರಾನ್ ಆಯತಗಳನ್ನು ಪಠಿಸುವ ಸಂಪ್ರದಾಯ ಯಾವಾಗ ಆರಂಭವಾಗಿದೆ ಎಂಬುದು ಸ್ಪಸ್ಥವಾಗಿಲ್ಲ. ಆದರೆ, 1932 ಕ್ಕಿಂತ ಹಳೆಯದಾದ ದೇವಸ್ಥಾನದ ಕೈಪಿಡಿಯಲ್ಲಿ ಇಂದಿಗೂ ನಡೆದುಕೊಂಡು ಬರುತ್ತಿರುವ ಈ ಸಂಪ್ರದಾಯದ ಬಗ್ಗೆ ಉಲ್ಲೇಖವಿದೆ ಎಂದಿದ್ದಾರೆ.

ವಿಷ್ಣುವಿನ ಅವತಾರಗಳಲ್ಲಿ ಒಂದಾದ ಚೆನ್ನಕೇಶವನನ್ನು ರಥದಲ್ಲಿ ಕೂರಿಸಿ ನೆರವೇರುವ ರಥೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಜಮಾಯಿಸಿದ್ದರು. ದೇವಸ್ಥಾನದ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಜನರ ಸಮ್ಮುಖದಲ್ಲಿ ಬಾಷಾ ಅವರು ಕುರಾನ್‌ನ ಶ್ಲೋಕಗಳನ್ನು ಪಠಿಸಿದ್ದಾರೆ. ಸಂಪ್ರದಾಯದ ಕುರಿತು ಮಾತನಾಡಿರುವ ಬಾಷಾ, “ನಾನು ಕಳೆದ 50 ವರ್ಷಗಳಿಂದ ಈ ಹಬ್ಬದಂದು ಕುರಾನ್‌ನ ಆಯತಗಳನ್ನು ಪಠಿಸುತ್ತಿದ್ದೇನೆ. ಚೆನ್ನಕೇಶವ ಸ್ವಾಮಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸಲು ಇದನ್ನು ಮಾಡಲಾಗುತ್ತದೆ. ನಾವೆಲ್ಲರೂ ಹಿಂದೂ ಅಥವಾ ಕ್ರಿಶ್ಚಿಯನ್ ಅಥವಾ ಮುಸ್ಲಿಮರು ಶಾಂತಿಯಿಂದ ಒಟ್ಟಿಗೆ ಬಾಳಬೇಕು ಮತ್ತು ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರಬಾರದು" ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಹಾಗೂ ಜನತಾದಳ (ಜಾತ್ಯತೀತ) ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಶತಮಾನಗಳಿಂದ ಈ ಸಂಪ್ರದಾಯ ನಡೆದುಕೊಂಡು ಬರುತ್ತಿದ್ದು, ಇದನ್ನು ಮುಂದುವರಿಸಿಕೊಂಡು ಹೋಗಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲ ಸಮುದಾಯದ ಜನರು ಶಾಂತಿಯಿಂದ ಬಾಳಬೇಕು ಎಂದಿದ್ದಾರೆ. ಬಹುಶಃ ಈ ಸಂಪ್ರದಾಯ ಆರಂಭಿಸುವ ಉದ್ದೇಶವೂ ಇದಾಗಿರಬಹುದು. ನಮ್ಮನ್ನು ವಿಭಜಿಸಲು ಯಾವುದೇ ಶಕ್ತಿಗೆ ಅವಕಾಶ ನಾವು ಅವಕಾಶ ನೀಡಬಾರದು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Hubli : ಪೊಲೀಸರ ಮೇಲೆ ಕಲ್ಲು ತೂರಾಟ : ಹುಬ್ಬಳ್ಳಿಯಲ್ಲಿ ಸೆಕ್ಷನ್ 144 ಜಾರಿ

ಕೊರೊನಾ ವೈರಸ್‌ನಿಂದಾಗಿ ಕಳೆದ ಎರಡು ವರ್ಷಗಳಿಂದ ರಥೋತ್ಸವ ಆಯೋಜನೆಗೊಂಡಿರಲಿಲ್ಲ. ಆದರೆ ಈ ಬಾರಿ ಎಲ್ಲಾ ಸಂಪ್ರದಾಯಗಳನ್ನು ಅನುಸರಿಸಿ ಅದ್ದೂರಿಯಾಗಿ ಉತ್ಸವವನ್ನು ಆಚರಿಸಲಾಗಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದಾರೆ. ಆದಾಗ್ಯೂ, ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ದತ್ತಿ (ಮುಜರಾಯಿ) ಇಲಾಖೆಯು ಸಂಬಂಧಪಟ್ಟ ಮಧ್ಯಸ್ಥಗಾರರು ಮತ್ತು ಪುರೋಹಿತರಿಂದ ಸಲಹೆಗಳನ್ನು ಸ್ವೀಕರಿಸಿದೆ ಮತ್ತು ನಂತರ ಸಂಪ್ರದಾಯದೊಂದಿಗೆ ಮುಂದುವರಿಯಲು ನಿರ್ಧರಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಿಂದೂಯೇತರ ವರ್ತಕರಿಗೂ ಮಳಿಗೆಗಳನ್ನು ಹಾಕಲು ಹಾಗೂ ಹಬ್ಬ ಹರಿದಿನಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. ವಿವಾದದ ನಡುವೆಯೇ ಈ ವರ್ಷ ಸುಮಾರು 15 ಮುಸ್ಲಿಂ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಸ್ಥಾಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-Hanuman Viral Video: ಏನಿದು ಅಚ್ಚರಿ! ಆಂಜನೇಯನ ಕಣ್ಣಲ್ಲಿ ನೀರು, ಭಾರಿ ವೈರಲ್ ಆಗುತ್ತಿರುವ ವಿಡಿಯೋ

ಕಳೆದ ಕೆಲವು ತಿಂಗಳುಗಳಲ್ಲಿ, ಕೋಮು ಉದ್ವಿಗ್ನತೆಯ ಕೆಲವು ಘಟನೆಗಳು ಮುನ್ನೆಲೆಗೆ ಬಂದಿವೆ. ಇವು ಹಿಜಾಬ್ ವಿವಾದದಿಂದ ಆರಂಭವಾಗಿವೆ. ಇದರ ನಂತರ ಹಿಂದೂ ಧಾರ್ಮಿಕ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಿಗಳನ್ನು ನಿಷೇಧಿಸಲು ಕರೆ ನೀಡಲಾಯಿತು ಮತ್ತು ನಂತರ ಹಲಾಲ್ ಮಾಂಸವನ್ನು ಬಹಿಷ್ಕರಿಸುವ ಅಭಿಯಾನ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಸ್ವಿಚ್ ಆಫ್ ಮಾಡಲು ಒತ್ತಾಯಗಳು ಕೂಡ ಕೇಳಿಬಂದಿವೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News