ನವದೆಹಲಿ: ನಮ್ಮ ಸಮಾಜದಿಂದ (ಕುರುಬ) ಮೂರ್ನಾಲ್ಕು ಶಾಸಕರಿದ್ದಾರೆ. ಆದರೆ ಅವರಲ್ಲಿ ನಾನೇ ಹಿರಿಯನಾಗಿದ್ದೇನೆ. ಆದ್ದರಿಂದ ನನ್ನನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಕಾಂಗ್ರೆಸ್ ನಾಯಕ ಎಚ್.ಎಂ. ರೇವಣ್ಣ ತಿಳಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಜೆಡಿಎಎಸ್ನಲ್ಲಿ ಘಟಾನುಘಟಿಗಳು ಸಚಿವರಾಗುತ್ತಾರೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ನಿಂದ ಕಿರಿಯರಿಗೆ ಸಚಿವ ಸ್ಥಾನ ನೀಡಿದರೆ ಸರಿಯಾಗಲಾರದು. ಕಾಂಗ್ರೆಸ್ ಕೂಡ ಕೆಲ ಹಿರಿಯರಿಗೆ ಮಣೆ ಹಾಕಬೇಕು ಎಂದು ಹೇಳಿದರು.