ಹಣ ಪಡೆದು ಸೈಟ್ ಕೊಡದ ಮೈಸೂರಿನ ಬಿಲ್ಡರ್‍ಗೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ

ಧಾರವಾಡದ ಕೆ.ಎಚ್.ಬಿ. ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂಬರ್ ಆಗಿದ್ದರು. ಅವರು 30x40 ಸೈಜಿನ ಪ್ಲಾಟಗೆ ಕಂತುಗಳ ಮೂಖಾಂತರ ಒಟ್ಟು ರೂ.3,16,800/- ತುಂಬಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಬರವಸೆ ಕೊಟ್ಟು ದಿ.07/10/2014 ರಂದು ಕರಾರು ಪತ್ರ ಬರೆದುಕೊಟ್ಟಿದ್ದರು.

Written by - Manjunath N | Last Updated : Nov 15, 2023, 11:26 PM IST
  • ಭೂಮಿ ಅಭಿವೃದ್ಧಿಗೊಳಿಸಿ ನಿಗಧಿತ ಅವಧಿಯಲ್ಲಿ ಎದುರುದಾರರು ಪ್ಲಾಟ್‍ನ್ನು ದೂರುದಾರರಿಗೆ ನೋಂದಣಿ ಮಾಡಿಕೊಡಬೇಕಾಗಿತ್ತು.
  • ಆದರೆ ಫಿರ್ಯಾದಿದಾರರಿಂದ ಎಲ್ಲ ಹಣ ಪಡೆದಿದ್ದರು ಎದುರುದಾರರು ಪ್ಲಾಟ್‍ನ್ನು ನೋಂದಣಿ ಮಾಡಿ ಕೊಟ್ಟಿರಲಿಲ್ಲ್ಲ
  • ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:25/11/2022 ರಂದು ದೂರನ್ನು ಸಲ್ಲಿಸಿದ್ದರು.
ಹಣ ಪಡೆದು ಸೈಟ್ ಕೊಡದ ಮೈಸೂರಿನ ಬಿಲ್ಡರ್‍ಗೆ ದಂಡ ವಿಧಿಸಿ, ದೂರುದಾರರಿಗೆ ಪರಿಹಾರ ನೀಡಲು ಆದೇಶ title=

ಧಾರವಾಡ: ಧಾರವಾಡದ ಕೆ.ಎಚ್.ಬಿ. ಕಾಲೋನಿಯ ಹನುಮಂತಪ್ಪ ನಾಯಕರವರು ಮೈಸೂರಿನ ಶ್ರೀಗುರು ಮಲ್ಲೇಶರಿಯಲ್ ವ್ಯಾಲ್ಯು ಕಾರ್ಪೊರೇಟನ ಮೆಂಬರ್ ಆಗಿದ್ದರು. ಅವರು 30x40 ಸೈಜಿನ ಪ್ಲಾಟಗೆ ಕಂತುಗಳ ಮೂಖಾಂತರ ಒಟ್ಟು ರೂ.3,16,800/- ತುಂಬಿದ್ದರು. ಈ ಬಗ್ಗೆ ಎದುರುದಾರರು ಸೈಟ್ ಕೊಡುವ ಬಗ್ಗೆ ಬರವಸೆ ಕೊಟ್ಟು ದಿ.07/10/2014 ರಂದು ಕರಾರು ಪತ್ರ ಬರೆದುಕೊಟ್ಟಿದ್ದರು.

ಇದನ್ನೂ ಓದಿ: ಮಗಳು ಹುಟ್ಟಿದ ನಂತರ ಶುರುವಾಯ್ತಾ ರಣಬೀರ್ - ಆಲಿಯಾ ಜಗಳ! ಸ್ವತಃ ನಟಿಯೇ ಬಹಿರಂಗಪಡಿಸಿದ್ರು ಈ ವಿಚಾರ!

ಭೂಮಿ ಅಭಿವೃದ್ಧಿಗೊಳಿಸಿ ನಿಗಧಿತ ಅವಧಿಯಲ್ಲಿ ಎದುರುದಾರರು ಪ್ಲಾಟ್‍ನ್ನು ದೂರುದಾರರಿಗೆ ನೋಂದಣಿ ಮಾಡಿಕೊಡಬೇಕಾಗಿತ್ತು. ಆದರೆ ಫಿರ್ಯಾದಿದಾರರಿಂದ ಎಲ್ಲ ಹಣ ಪಡೆದಿದ್ದರು ಎದುರುದಾರರು ಪ್ಲಾಟ್‍ನ್ನು ನೋಂದಣಿ ಮಾಡಿ ಕೊಟ್ಟಿರಲಿಲ್ಲ್ಲ. ಎದುರುದಾರ ಈ ರೀತಿಯ ನಡಾವಳಿಕೆ ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ:25/11/2022 ರಂದು ದೂರನ್ನು ಸಲ್ಲಿಸಿದ್ದರು.

ಇದನ್ನೂ ಓದಿ: ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗ ದೂರುದಾರರಿಂದ ರೂ.3,16,800/- ಹಣ ಪಡೆದುಕೊಂಡು ಒಪ್ಪಂದದಂತೆ ಅವರಿಗೆ ಪ್ಲಾಟ್‍ನ್ನು ನೋಂದ ಮಾಡಿಕೊಡವುದು ಎದುರುದಾರರ ಕರ್ತವ್ಯವಾಗಿದೆ. 7-8 ವóರ್ಷ ಕಳೆದರು ಎದುರುದಾರರು ದೂರುದಾರರಿಗೆ ಪ್ಲಾಟ್ ನೋಂದ ಮಾಡಿಕೊಟ್ಟಿಲ್ಲ. ಅವರ ಹಣವನ್ನು ಎದುರುದಾರರು ವಾಪಸ್ಸು ಕೊಟ್ಟಿಲ್ಲ. ಅಂತಹ ಅವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ. ದೂರುದಾರರಿಂದ ಹಣ ಪಡೆದು ವ್ಯವಹರಣೆ ನಡೆಸಿರುವುದರಿಂದ ದೂರುದಾರ ಗ್ರಾಹಕರ ಅರ್ಥವಿವರಣೆಯೊಳಗೆ ಬರುತ್ತಾನೆ ಅಂತಾ ಆಯೋಗ ತನ್ನ ತೀರ್ಪಿನಲ್ಲಿ ಹೇಳಿದೆ. ದೂರುದಾರರು ಸಂದಾಯ ಮಾಡಿದ ರೂ.3,16,800/- ಹಾಗೂ ಅದರ ಮೇಲೆ ಶೇ.8 ರಂತೆ 31/10/2023ರ ವರೆಗಿನ ಬಡ್ಡಿ ರೂ.1,47,840/- ಸೇರಿ ಒಟ್ಟು ರೂ.4,64,640/- ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ನೀಡುವಂತೆ ಆಯೋಗ ಎದುರುದಾರರಿಗೆ ನಿರ್ದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50 ಸಾವಿರ ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ ಎದುರುದಾರರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News