ಬೆಂಗಳೂರು : ಅಲ್ಲಾ, ನಮ್ಮ ದೇಶ ಎಷ್ಟೊಂದು ಅಭಿವೃದ್ದಿ ಯಾಗಿದೆ. ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಸನಾತನಿಗಳ ಶ್ರೀರಕ್ಷೆಯಲ್ಲಿ ಸುಖವಾಗಿದೆ. ಆದರೂ ಹಸಿವಿನ ಸೂಚ್ಯಂಕದಲ್ಲಿ ಕೆಳಗಿದೆ ಎಂದು ಸಮೀಕ್ಷೆಯ ವರದಿ ಪ್ರಕಟಿಸಲಾಗಿದೆಯಲ್ಲಾ, ಇದು ಅಪಚಾರ. ಘನಘೋರ ಅಪಪ್ರಚಾರ.
ಕಳೆದ ವರ್ಷ 127 ದೇಶಗಳ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನದಲ್ಲಿತ್ತು. ಆದರೆ ವಿಶ್ವಗುರುಗಳ ಪರಿಶ್ರಮ ಹಾಗೂ ದೂರದೃಷ್ಟಿಯಿಂದಾಗಿ ಈ ವರ್ಷ 105 ನೇ ಸ್ಥಾನಕ್ಕೆ ಇಳಿದಿದೆ. ಇದು ಸಾಧನೆ ಅಲ್ವಾ? ಇದರ ಬಗ್ಗೆ ಯಾಕೆ ಪ್ರಧಾನಿಗಳಿಗೆ ಯಾರೂ ಶಹಬ್ಬಾಸ್ ಹೇಳುತ್ತಿಲ್ಲಾ. ಹಸಿವಿನ ಸಮಸ್ಯೆ ಗಂಭೀರವಾಗಿರುವ 42 ದೇಶಗಳಲ್ಲಿ ಭಾರತವೂ ಇದೆಯಂತೆ. ಇದ್ದರೇನಾಯ್ತು? ಇರಲಿ ಬಿಡಿ. ಇವರ ಕಣ್ಣಿಗೆ ಬರೀ ಇಂತಹುದೇ ಯಾಕೆ ಬೀಳುತ್ತವೆ. ಮೋದಿ ಆಡಳಿತದಲ್ಲಿ ಶತಕೋಟಿ ಶ್ರೀಮಂತರ ಸಂಖ್ಯೆ ಹೆಚ್ಚುತ್ತಲೇ ಇದೆಯಲ್ವಾ?, ಜಗತ್ತಿನಲ್ಲಿಯೇ ಟಾಪೆಸ್ಟ್ ಕುಬೇರರ ಪಟ್ಟಿಯಲ್ಲಿ ನಮ್ಮ ಅಂಬಾನಿ ಆದಾನಿಗಳೇ ವಿರಾಜಮಾನರಾಗಿದ್ದಾರಲ್ವಾ? ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡುವ ಬದಲು ಹಸಿವಿನಿಂದ ಬಳಲುವ ಯಕಶ್ಚಿತ್ ವೇಸ್ಟ್ ಬಾಡಿ ಜನರ ಬಗ್ಗೆ ಹೀಗೆಲ್ಲಾ ಸಮೀಕ್ಷೆ ಮಾಡುವುದೇ ಮಹಾತಪ್ಪು.
ಇದನ್ನೂ ಓದಿ:ಸಿ.ಪಿ.ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ: ಡಿ.ಕೆ.ಶಿವಕುಮಾರ್
ಶೇಕಡಾ 18.7 ರಷ್ಟು ಮಕ್ಕಳು ಕೃಷಕಾಯರಾಗಿದ್ದಾರಂತೆ. ದೇಶದ ಜನಸಂಖ್ಯೆಯ ಶೇ. 13.7 ರಷ್ಟು ಜನತೆ ಪೌಷ್ಟಿಕತೆಯ ಕೊರತೆ ಹೊಂದಿದ್ದಾರಂತೆ. ಎಲ್ಲಾ ಅಂತೆ ಕಂತೆ. ಈ ಎಲ್ಲದರ ಹಿಂದೆಯೂ ಮೋದಿಯವರ ಲೆಕ್ಕಾಚಾರ ಇದ್ದೇ ಇರುತ್ತೆ ಅನ್ನೋದು ಈ ಹೊಟ್ಟೆಯುರಿ ಹೆಚ್ಚಾದವರಿಗೆ ಹೇಗೆ ಗೊತ್ತಾಗೋದು?
ಅದೇನೆಂದರೆ ಜನಸಂಖ್ಯೆ ಸರ್ ಜನಸಂಖ್ಯೆ. ಈ ದೇಶದ ಜನಸಂಖ್ಯೆ ವಿಪರೀತ ಆಗಿದೆ. ದೇಶದ ಅಭಿವೃದ್ದಿಗೆ ಮಾರಕವಾಗಿದೆ. ಅದರಲ್ಲೂ ಈ ಸಾಬರಿದ್ದಾರಲ್ಲಾ ಭಯೋತ್ಪಾದಕ ದೇಶದ್ರೋಹಿಗಳು, ಅವರಂತೂ ಮಕ್ಕಳನ್ನು ಹುಟ್ಟಿಸೋ ಪ್ಯಾಕ್ಟರಿಗಳಾಗಿದ್ದಾರೆ. ಒಂದಿಷ್ಟಾದರೂ ಜನಸಂಖ್ಯೆ ಕಡಿಮೆ ಮಾಡದೇ ಹೋದರೆ ಈ ದೇಶ ಅಭಿವೃದ್ದಿಯಾಗಲು ಸಾಧ್ಯವೇ ಇಲ್ಲ. ಬುಲೆಟ್ ಟ್ರೇನು, ಬೃಹತ್ ಟೋಲ್ ರಸ್ತೆಗಳು, ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ದೇಶಾದ್ಯಂತ ನಿರ್ಮಿಸಲು ಆಗೋದೇ ಇಲ್ಲ. ಅದಕ್ಕೇ ಜನಸಂಖ್ಯಾ ನಿರ್ಮೂಲನಾ ಯೋಜನೆಯ ಭಾಗವಾಗಿ ದೇಶದ ಜನಸಂಖ್ಯೆ ಕಡಿಮೆ ಮಾಡಲೇಬೇಕಿದೆ. ಎಲ್ಲರಿಗೂ ಪೊಗದಸ್ತಾದ ಆಹಾರ ಕೊಟ್ಟರೆ ಇನ್ನೂ ಮಕ್ಕಳೋತ್ಪಾದನೆ ಹೆಚ್ಚಾಗುತ್ತದೆ. ಅದಕ್ಕೆ ನಮ್ಮ ಪ್ರದಾನಿಗಳು ಒಂದಿಷ್ಟು ಜನರು ಹಸಿವೆಯಿಂದ, ಅಪೌಷ್ಟಿಕತೆಯಿಂದ ಬಳಲಿ ನಶಿಸಲಿ ಎಂದೇ ಸುಮ್ಮನಿದ್ದಾರೆ. ಈ ಹಸಿದವರ ಬಗ್ಗೆ ಕಾಳಜಿ ಮಾಡ್ತಾ ಇದ್ರೆ ಈ ದೇಶವನ್ನು ಹಾಗೂ ದೇಶವಾಳುವವರನ್ನು ಸಾಕಿ ಸಲಹುತ್ತಿರುವ ಕಾರ್ಪೋರೇಟ್ ದಿಗ್ಗಜರ ಹಿತಾಸಕ್ತಿ ಕಾಪಾಡುವವರು ಯಾರು?
ಇದನ್ನೂ ಓದಿ:ದೀಪಾವಳಿ ದಿನ ನಿಮ್ಮ ಮನೆಯಲ್ಲಿ ಈ ಒಂದು ಗಿಡ ನೆಡಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ..!
ನಮ್ಮ ದೇಶದ ಜಿಡಿಪಿ ಅಂದರೆ ಆಂತರಿಕ ಉತ್ಪನ್ನ ನೋಡಿ ಹೇಗೆ ಹೆಚ್ಚಾಗಿದೆ. ಚಿನ್ನದ ಬೆಲೆ ಅತಿಯಾಗಿ ಏರಿದೆ ಆದರೂ ಖರೀದಿ ಕಡಿಮೆಯಾಗಿಲ್ಲ, ಯಾಕಂದ್ರೆ ಜನರಲ್ಲಿ ಖರೀದಿಸುವ ತಾಕತ್ತು ಹೆಚ್ಚಾಗಿದೆ. ಇಂಧನಗಳ ಬೆಲೆ ಗಗನಕ್ಕೇರಿದೆ, ಆದರೂ ಯಾರೂ ಬಳಸೋದನ್ನ ನಿಲ್ಲಿಸಿಲ್ಲವಾದ್ದರಿಂದ ಜನರ ಸಂಪಾದನೆ ಹೆಚ್ಚಾಗಿದೆ. ಹೌದು ಎಲ್ಲದರ ಬೆಲೆ ಏರಿದ್ರೂ ಜನರೇನೂ ಕೇಳ್ತಿಲ್ಲವಲ್ಲಾ. ಮತ್ಯಾಕೆ ಈ ಸಮೀಕ್ಷೆ ಮಾಡೋರು ಹಸಿವು ಹಸಿವು ಅಂತಾ ಬಾಯಿಬಡ್ಕೋತಿದ್ದಾರೆ. ಇದೆಲ್ಲಾ ವಿದೇಶಿಗರ ಶಡ್ಯಂತ್ರ. ಕಾಂಗ್ರೆಸ್ಸಿಗರ ಕುತಂತ್ರ. ಕಮ್ಯುನಿಸ್ಟರ ಒಳಸಂಚು. ಸಾಬರ ಮಹಾಸಂಚು.
ಹಸಿವು ಮುಖ್ಯವಲ್ಲಾ ವಿಶ್ವಗುರು ಎನ್ನುವ ಹೆಸರು ಮುಖ್ಯ. ಬಡತನ ಇಂಪಾರ್ಟೆಂಟ್ ಅಲ್ಲವೇ ಅಲ್ಲಾ, ರಾಮಮಂದಿರ ಕಟ್ಟೋದು ಇಂಪಾರ್ಟಂಟ್. ಶಾಲೆ ಆಸ್ಪತ್ರೆಗಳಿಗಿಂತಲೂ ಹೈವೇ, ಏರ್ಪೋರ್ಟ್, ಐಶಾರಾಮಿ ರೈಲುಗಳೇ ಈ ದೇಶದ ಹೆಮ್ಮೆ. ಹಸಿವು ಇರಲಿ, ಅಪೌಷ್ಟಿಕತೆ ಬರಲಿ, ಬಡತನ ನಿವಾರಣೆ ಅಸಾಧ್ಯವಾದ್ದರಿಂದ ಬಡವರ ನಿವಾರಣೆ ದೇಶವಾಳುವವರ ಧ್ಯೇಯವಾಗಲಿ. ಆಗ ಮಾತ್ರ ಈ ದೇಶ ಬ್ರಹ್ಮಾಂಡಕ್ಕೆ ಗುರುವಾಗಬಲ್ಲುದು. ಪ್ರಪಂಚಕ್ಕೆ ಮೋದಿಯೊಬ್ಬರೇ ವಿಶ್ವಗುರು ಆಗಬಲ್ಲರು.
ಅಂಕಣಕಾರರು : ಶಶಿಕಾಂತ ಯಡಹಳ್ಳಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ