ಬೆಂಗಳೂರು : ಮೇಕೆದಾಟು ಜಲಾಶಯ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಗೆ ಕಾನೂನು ಕ್ರಮದ ಮೂಲಕ ಉತ್ತರ ನೀಡಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ.
ಇಂದು ಕನಕಪುರ ತಾಲೂಕಿನ ಸಂಗಮದಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ(Congress Mekedatu Hiking) ಚಾಲನೆ ದೊರಕಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಾರೆ ಇದಕ್ಕೆ ಸೂಕ್ತ ಕಾನೂನು ಕ್ರಮದ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇದನ್ನೂ ಓದಿ : ಮ್ಯಾಟ್ರಿಮೋನಿಯಲ್ ವೆಬ್ ಸೈಟ್ ನಲ್ಲಿ ಯುವತಿಯರಿಗೆ ವಂಚನೆ.. ಆರೋಪಿ ಬಂಧನ
ಸಚಿವರ ಸಭೆ: ಕಾನೂನು ಕ್ರಮ ಸೂಕ್ತ; ಪೊಲೀಸ್ ಶಕ್ತಿ ಪ್ರದರ್ಶನದಿಂದ ರಾಜಕೀಯ ಲಾಭ
ಇಂದು ಬೆಳಿಗ್ಗೆ ರೇಸ್ ಕೋರ್ಸ್ ಮುಖ್ಯಮಂತ್ರಿ ಸರ್ಕಾರಿ ನಿವಾಸದಲ್ಲಿ ಬಿಜೆಪಿ ನಾಯಕರು(BJP Leaders) ಹಾಗೂ ಸಚಿವರು ಸಭೆ ನಡೆಸಿ ಪ್ರಸ್ತುತ ಪಾದಯಾತ್ರೆಯಿಂದ ಕಾಂಗ್ರೆಸ್ ಕೇವಲ ರಾಜಕೀಯ ಲಾಭ ನೋಡುತ್ತಿದೆ. ಸರ್ಕಾರ ಪೊಲೀಸ್ ಶಕ್ತಿ ಪ್ರದರ್ಶನ ಮಾಡಿದ್ದಲ್ಲಿ ಕಾಂಗ್ರೆಸ್ ಗೆ ಹೆಚ್ಚು ಪ್ರಚಾರ ಸಿಗಲಿದೆ. ಹೀಗಾಗಿ ಕಾನೂನು ಕ್ರಮ ಸೂಕ್ತವಾಗಿದೆ ಎಂದು ತೀರ್ಮಾನ ಕೈಗೊಂಡಿದ್ದಾರೆ.
ಈ ಸಭೆಯಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ, ಜಲ ಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ, ಗೃಹ ಸಚಿವ ಆರಗ ಜ್ಞಾನೇಂದ್ರ, ಆರೋಗ್ಯ ಸಚಿವ ಸುಧಾಕರ್ ಬಿಜೆಪಿ ಪಕ್ಷದಿಂದ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
ಕಾನೂನು ಕ್ರಮ :
ಕೋವಿಡ್-19 ಮೂರನೇ ಅಲೆ(Covid-19 3rd wave) ತಡೆಗೆ ಈಗ ಸರ್ಕಾರ ಕೆಲ ನಿರ್ಬಂಧನೆಗಳನ್ನ ವಿದಿಸಿದೆ. ಇಂತ ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಜನ ಸೇರುವುದು ಸೂಕ್ತವಲ್ಲ. ಇಂತ ಸಂದರ್ಭದಲ್ಲಿ ಕಾಂಗ್ರೆಸ್ ಜನರ ಜೀವಗಳ ಜತೆ ಆಟವಾಡುತ್ತಿದೆ. ಇದು ಜವಾಬ್ದಾರಿಯುತ ನಡೆಯಲ್ಲ ಎಂದು ಪರಿಗಣಿಸಿ ಕಾನೂನು ಕ್ರಮಕ್ಕೆ ಸರ್ಕಾರ ಮುಂದಾಗಲಿದೆ.
ಸದ್ಯ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ್ದಲ್ಲಿ, National Disaster Management Act (NDMA), Epidemic Act ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಇದರ ಜೊತೆ ರಾಮನಗರ ಜಿಲ್ಲೆಯಲ್ಲಿ 144 section ವಿದಿಸಿದರೂ ಸಾವಿರಾರು ಜನರನ್ನ ಸೇರಿಸಿದ ನಾಯಕರ ವಿರುದ್ಧ ಕಾನೂನು ಉಲ್ಲಂಘನೆ ಕೇಸ್ ಹಾಕಲು ಸರ್ಕಾರ ನಿರ್ಧರಿಸಿದೆ.
ಇದನ್ನೂ ಓದಿ : ಸಚಿವ ಎಸ್.ಟಿ.ಸೋಮಶೇಖರ್ ಪುತ್ರನ ನಕಲಿ ವಿಡಿಯೋ, ₹1 ಕೋಟಿ ಹಣಕ್ಕೆ ಬೇಡಿಕೆ... ಓರ್ವ ವಶಕ್ಕೆ
ಸಭೆಗೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai), ಕೋವಿಡ್ ನಿಯಮ ಉಲ್ಲಂಘಿಸಿ ಪಾದಯಾತ್ರೆ ಕೈಗೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನೋಟೀಸ್ ನೀಡಲಾಗಿದೆ. ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪಾದಯಾತ್ರೆ ಯಾಕೆ ಮಾಡ್ತಿದ್ದಾರೆ ಅನ್ನೊದು ಜನರಿಗೆ ಕಾಡುತ್ತಿರುವ ಪ್ರಶ್ನೆ, ಅವರಿಗೆ ಯಾವುದೇ ಬದ್ದತೆ ಇಲ್ಲ.
ಕಾಂಗ್ರೆಸ್ ಸರ್ಕಾರ(Congress Govt) ಐದು ವರ್ಷ ಇತ್ತು ಸರಿಯಾಗಿ ಡಿಪಿಆರ್ ಸಬ್ಮಿಟ್ ಮಾಡಿಲ್ಲ. ಸಮ್ಮಿಶ್ರ ಸರ್ಕಾರ ಬಂದಾಗ ಡಿಪಿಆರ್ ಆಗಿರೋದು. ಇದೆಲ್ಲ ಬಯಲಾಗಿದೆ ಎಂದುರು.
ಸಮ್ಮಿಶ್ರ ಸರ್ಕಾರದಲ್ಲಿ ಡಿಕೆಶಿ ನೀರಾವರಿ ಸಚಿವರು ಆಗಿದ್ದರು ಆಗಲು ಏನು ಮಾಡಿಲ್ಲ, ಕಳೆದ ಎರಡು ವರ್ಷದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಈಗ ಚುನಾವಣೆ ಹತ್ತಿರ ಬಂದಿದೆ ಅಂತ ರಾಜಕೀಯ ಪಾದಾಯಾತ್ರೆ ಮಾಡ್ತಿದ್ದಾರೆ. ಕೆಲಸ ಮಾಡಿಲ್ಲ ಎಂಬ ಅಪರಾಧ ಮನೋಭಾವನೆ ಅವರನ್ನ ಕಾಡ್ತಿದೆ. ಅದಕ್ಕೆ ಜನರನ್ನು ಮರಳು ಮಾಡುವ ಕೆಲಸ ಮಾಡ್ತಿದ್ದಾರೆ ಎಂದರು.
ಇದನ್ನೂ ಓದಿ : ಡಿಕೆ ದಾಟಲಿಲ್ಲ, ಮೇಕೆಯಾದರೂ ದಾಟಲಿ!: ನದಿಗೆ ಇಳಿಯುವಾಗ ಜಾರಿಬಿದ್ದ ಡಿಕೆಶಿ ಟ್ರೋಲ್ ಮಾಡಿದ ಬಿಜೆಪಿ
ಅವರು ಎಂದಿಗೂ ನೀರಾವರಿ ಬಗ್ಗೆ ಕಾಳಜಿ ತೋರಿಸಿಲ್ಲ, ಕೃಷ್ಣೆಯ ಬಗ್ಗೆ ಪಾದಾಯಾತ್ರೆ ಮಾಡಿದ್ರು ಏನಾಯ್ರು. ಪ್ರತಿ ವರ್ಷ 10 ಸಾವಿರ ಕೋಟಿ ಕೊಡ್ತೀವಿ ಅಂತ ಕೂಡಲಸಂಗದಲ್ಲಿ ಪ್ರಮಾಣ ಮಾಡಿದ್ರು ಏನಾಯ್ತು
ಜನ ಪದೇ ಪದೇ ಮರಳಾಗಲ್ಲ, ಎಲ್ಲ ಸಮಯದಲ್ಲೂ ಮೋಸ ಮಾಡೋಕೆ ಆಗಲ್ಲ ಎಂದು ಪ್ರಶ್ನಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.