Shivaram Hebbar: 'ನಮ್ಮ ಸೇಫ್ಟಿಗೋಸ್ಕರ, ನಿಮ್ಮ ಭಯಕ್ಕಾಗಿ ಕೋರ್ಟ್ ಗೆ ಹೋಗುವಂತಾಯ್ತು'

ನಮ್ಮ ತೇಜೋವಧೆ ಮಾಡಿದ್ರೆ ನಮಗೆ ಗತಿಯಾರು? ಇದೇ ಕಾರಣದಿಂದಾಗಿ ಸುದ್ದಿ ನಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ.

Last Updated : Mar 6, 2021, 03:48 PM IST
  • ನೀವು ಗಂಟೆಗಟ್ಟಲೆ ಹಾಕಿ, ಪಂಚ್ ಮಾಡ್ತೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಮೊರೆ ಹೋಗಿದ್ದೇವೆ.
  • ನಮ್ಮ ತೇಜೋವಧೆ ಮಾಡಿದ್ರೆ ನಮಗೆ ಗತಿಯಾರು? ಇದೇ ಕಾರಣದಿಂದಾಗಿ ಸುದ್ದಿ ನಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ.
  • ಜನ ನಮ್ಮ ಬಗ್ಗೆ ಪ್ರಶ್ನೆ ಮಾಡ್ತಿಲ್ಲ. ಮಾಧ್ಯಮದವರು ಮಾತ್ರ ಮಾಡ್ತಾ ಇದ್ದೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಗೆ ಹೋಗಿದ್ದೇವೆ.
Shivaram Hebbar: 'ನಮ್ಮ ಸೇಫ್ಟಿಗೋಸ್ಕರ, ನಿಮ್ಮ ಭಯಕ್ಕಾಗಿ ಕೋರ್ಟ್ ಗೆ ಹೋಗುವಂತಾಯ್ತು' title=

ಕಾರವಾರ: ನೀವು ಗಂಟೆಗಟ್ಟಲೆ ಹಾಕಿ, ಪಂಚ್ ಮಾಡ್ತೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ತೇಜೋವಧೆ ಮಾಡಿದ್ರೆ ನಮಗೆ ಗತಿಯಾರು? ಇದೇ ಕಾರಣದಿಂದಾಗಿ ಸುದ್ದಿ ನಮ್ಮ ವಿರುದ್ಧದ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವುದಾಗಿ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.

ಸುದ್ದಿ ಪ್ರಸಾರ ತಡೆ ಕೋರಿ ನ್ಯಾಯಾಲಯದ ಮೊರೆ ಹೋಗಿರುವ ಸಂಬಂಧ ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್(Shivaram Hebbar), ಜನ ನಮ್ಮ ಬಗ್ಗೆ ಪ್ರಶ್ನೆ ಮಾಡ್ತಿಲ್ಲ. ಮಾಧ್ಯಮದವರು ಮಾತ್ರ ಮಾಡ್ತಾ ಇದ್ದೀರಿ. ನಮ್ಮ ಸೇಫ್ಟಿಗೋಸ್ಕರ ಕೋರ್ಟ್ ಗೆ ಹೋಗಿದ್ದೇವೆ. ನಾಳೆ ತಪ್ಪಿತಸ್ಥ ಅಲ್ಲ ಅಂತ ಬಂದ್ರೇ ಆ ಸುದ್ದಿಯನ್ನು ಒಂದೇ ಲೈನ್ ನಲ್ಲಿ ಬರೆದು ಮುಗಿಸಿ ಬಿಡ್ತೀರಿ.. ಅದೇ ಈಗ ಗಂಟೆಗಟ್ಟಲೇ ಹಾಕಿ ಹಾಕಿ ಪಂಚ್ ಮಾಡ್ತೀರಿ. ಇದರಿಂದಾಗಿ ನಿಮ್ಮ ಭಯಕ್ಕೆ ಕೋರ್ಟ್ ಗೆ ಹೋಗಬೇಕಾಯ್ತು ಎಂದರು.

ಹಿರಿಯ ಸಾಹಿತಿ ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ ಇನ್ನಿಲ್ಲ

ನಮಗೆ ಇರುವಂತ ಸಂದೇಹವನ್ನು ಕೋರ್ಟ್ ಗೆ ಹೇಳಿದ್ದೇವೆ. ಪ್ರಜಾಪ್ರಭುತ್ವದಲ್ಲಿ ನಮಗಿರುವ ಮಾರ್ಗ ಉಪಯೋಗಿಸಿಕೊಂಡು ನ್ಯಾಯಾಲ(Court)ಯದ ಮೊರೆ ಹೋಗಿದ್ದೇವೆ. ಬ್ಲಾಕ್ ಮೇಲ್ ಮಾಡೋರಿಗಾಗಿ ಇಂತಹ ಮಾರ್ಗವನ್ನು ಹಿಡಿಯಬೇಕಾಯಿತು. ನಾವು ಕೋರ್ಟ್ ಗೆ ಹೋಗಿ ನಮ್ಮ ಸೇಫ್ಟಿಯನ್ನು ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಕೃಷಿ ರಾಯಭಾರಿಯಾಗಿ ನಟ ದರ್ಶನ್ ಅಧಿಕಾರ ಸ್ವೀಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News