Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ... ಪರಿಷ್ಕೃತ ಬೆಲೆ ಇಲ್ಲಿದೆ ನೋಡಿ

Milk Price Hike: ಕೆಎಂಎಫ್ ನಂದಿನಿ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ನಾಳೆಯಿಂದಲೇ ನಂದಿನಿ ಹಾಲಿನ ದರ ಹೆಚ್ಚಳವಾಗಲಿದೆ.

Written by - Chetana Devarmani | Last Updated : Jun 25, 2024, 12:26 PM IST
    • ನಂದಿನಿ ಹಾಲಿನ ದರ ಹೆಚ್ಚಳ
    • ನಾಳೆಯಿಂದಲೇ ಹಾಲಿನ ದರ ಏರಿಕೆ
    • ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ
Nandini Milk Price Hike: ನಂದಿನಿ ಹಾಲಿನ ದರ ಹೆಚ್ಚಳ... ಪರಿಷ್ಕೃತ ಬೆಲೆ ಇಲ್ಲಿದೆ ನೋಡಿ  title=

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಮಾಡಿದೆ. ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಸುದ್ದಿಗೋಷ್ಠಿ ನಡೆಸಿ ಈ ವಿಚಾರ ತಿಳಿಸಿದ್ದಾರೆ. ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‌ ನಲ್ಲಿ ಇನ್ನೂ ಮುಂದೆ 50 ಎಂಎಲ್​​ ಹಾಲು ಹೆಚ್ಚು ಬರಲಿದೆ. ಸದ್ಯ ಲೀಟರ್ ಹಾಲಿಗೆ 42 ರೂಪಾಯಿ ಇದ್ದು, 2 ರೂಪಾಯಿ ಹೆಚ್ಚಳ ಮಾಡಲಾಗಿದೆ. ನಾಳೆಯಿಂದಲೇ ಪರಿಷ್ಕೃತ ದರ ಅನ್ವಯವಾಗಲಿದೆ ಎಂದು ಭೀಮಾನಾಯ್ಕ್ ತಿಳಿಸಿದರು. 

ನಂದಿನಿಯ ಅರ್ಧ ಲೀಟರ್ ಹಾಲಿನ ಪ್ಯಾಕೆಟ್​ ದರ 22 ರೂಪಾಯಿ ಇತ್ತು. ಇಷ್ಟುದಿನ ಅರ್ಧ ಲೀ ಪ್ಯಾಕೇಟ್ ನಲ್ಲಿ 500 ಎಂಎಲ್ ಹಾಳು ಇರುತ್ತಿತ್ತು. ಇನ್ಮುಂದೆ 50 ಎಂಎಲ್ ಹಾಲು‌ ಹೆಚ್ಚುವರಿಯಾಗಿ ಪ್ಯಾಕೇಟ್ ನಲ್ಲಿ ಸಿಗಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಇದರಿಂದಾಗಿ ಅರ್ಧ ಈಟರ್‌ ಹಾಲಿನ ಬೆಲೆ 24 ರೂ.ಗೆ ಏರಿಕೆಯಾಗಲಿದೆ.

ಇದನ್ನೂ ಓದಿ: ಜಾತಿ ವ್ಯವಸ್ಥೆ ಕಾರಣದಿಂದ ಸಮಾಜದಲ್ಲಿ ಅಸಮಾನತೆ ಸೃಷ್ಟಿಯಾಗಿದೆ: ಸಿಎಂ‌ ಸಿದ್ದರಾಮಯ್ಯ

ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನ ಮೇಲೆ ಏರಿಕೆ ಮಾಡಿಲ್ಲ. ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ, ಗುಜರಾತ್‌ನಲ್ಲಿ ಅಮುಲ್ ಒಂದು ಲೀಟರ್‌ಗೆ 56 ರೂ. ಮಹಾರಾಷ್ಟ್ರದಲ್ಲಿಯೂ 56 ರೂ. ಮತ್ತು ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ಭೀಮಾನಾಯ್ಕ್ ಮಾಹಿತಿ ನೀಡಿದರು. 

ಪರಿಷ್ಕೃತ ಹಾಲಿನ‌ ದರ ಈ ಕೆಳಗಿನಂತಿದೆ : 

ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ

ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ

ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ

ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ

ಶುಭಂ ಹಾಲು 48ರಿಂದ 50 ರೂ

ಸಮೃದ್ದಿ ಹಾಲು 51ರಿಂದ 53ರೂ

ಶುಭಂ (ಟೋನ್ಡ್ ಹಾಲು) 49ರಿಂದ 51ರೂ

ಸಂತೃಪ್ತಿ ಹಾಲು 55 ರಿಂದ 57 ರೂ

ಶುಭಂ ಗೋಲ್ಡ್ ಹಾಲು 49ರಿಂದ 51ರೂ

ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

ದರ ಏರಿಕೆಗೆ ಕಾರಣಗಳೇನು

15% ಹಾಲು ಸಂಗ್ರಹ ಹೆಚ್ಚಳ ಆಗಿದೆ. ಇದನ್ನ ಮಾರಾಟ ಮಾಡುವ ದೃಷ್ಟಿಯಿಂದ ಪ್ರತಿ ಪ್ಯಾಕೇಟ್ ಗೆ 50 ಎಂಎಲ್ ಹೆಚ್ಚುವರಿ ಹಾಲನ್ನ ಪ್ಯಾಕೇಟ್ ನಲ್ಲಿ ನೀಡಲಿದ್ದೇವೆ. ಹಾಗಾಗಿ ಹೆಚ್ಚುವರಿ ಹಾಲು ನೀಡಿ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಇದು ದರ ಏರಿಕೆ ಅಲ್ಲ. ಪ್ರತಿ ಪ್ಯಾಕೇಟ್ ಗೆ ಹೆಚ್ಚು ವರಿ ಹಾಲು ಸೇರಿಸಿ ದರ ಏರಿಕೆ ಮಾಡಿದ್ದೇವೆ ಎಂದು  ಭೀಮಾನಾಯ್ಕ್ ಮಾಹಿತಿ ನೀಡಿದರು. 

ಇದನ್ನೂ ಓದಿ: ಪೇಪರ್ ಸೋರಿಕೆ ನಂತರ ಯುಜಿಸಿ-ನೆಟ್ ಪರೀಕ್ಷೆ ರದ್ದುಪಡಿಸಿದ ಶಿಕ್ಷಣ ಸಚಿವಾಲಯ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News