ಬೆಂಗಳೂರು: ಯುಪಿಎಸ್ಸಿ ಹಾಗೂ ಕೆಪಿಎಸ್ಸಿ ಪರೀಕ್ಷಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬಡ ಕುಟುಂಬದ ವಿದ್ಯಾರ್ಥಿಗಳನ್ನು ಸಹ ಅತೀ ಕಡಿಮೆ ವೆಚ್ಚದಲ್ಲಿ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರನ್ನಾಗಿ ಮಾಡುವ ಸದುದ್ದೇಶದಿಂದ ಸ್ಥಾಪಿಸಲಾದ ಸರ್ದಾರ್ ವಲ್ಲಭಭಾಯಿ ಅಕಾಡೆಮಿಯನ್ನು (Sardar Vallabhbhai Academy) ಇಂದು ಲೋಕಾರ್ಪಣೆಗೊಳಿಸಲಾಗಿದೆ.
ಈಗ ಲೋಕಾರ್ಪಣೆಗೊಂಡಿರುವ ಈ ಅಕಾಡೆಮಿಯಲ್ಲಿ ಕಚೇರಿ,ಕೋಚಿಂಗ್ ಹಾಲ್,ವೀಡಿಯೋ ಕಾನ್ಸರೆನ್ಸ್ ಹಾಲ್ ಮತ್ತು ಇ-ಲೈಬ್ರರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.ಅಷ್ಟೇ ಅಲ್ಲದೆ ಸುಸಜ್ಜಿತ ಗ್ರಂಥಾಲಯವನ್ನು ಒಳಗೊಂಡಿರುವ ಈ ಅಕಾಡೆಮಿ ಅತಿ ಹೆಚ್ಚು ಪುಸ್ತಕ ಸೌಲಭ್ಯಗಳನ್ನು ಒಳಗೊಂಡಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ ಹಾಗೂ ಬಿಬಿಎಂಪಿಯ ಅನುದಾನದ ಅಡಿಯಲ್ಲಿ ಯಡಿಯೂರು ವಾರ್ಡ್ ನಲ್ಲಿ ನಿರ್ಮಿಸಿರುವ ' ಸರ್ದಾರ್ ವಲ್ಲಭಭಾಯಿ ಅಕಾಡೆಮಿ' ಮತ್ತು 'ಸಾವಯವ ಗೊಬ್ಬರ ಘಟಕ' ಲೋಕಾರ್ಪಣೆಯನ್ನು ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು ಮಾಡಿದ್ದಾರೆ.