Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..!

Kannada flag burnt Case: ಬಂಧಿತ ಆರೋಪಿ ಅಮೃತೇಶ್ ಉತ್ತರ ಪ್ರದೇಶ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. 2019 ರ ಲಾಕ್ ಡೌನ್ ನಲ್ಲಿ ಈತ ಊರಿಗೆ ತೆರಳಬೇಕಾಗಿತ್ತು. ಆದರೆ ಈ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ.

Written by - VISHWANATH HARIHARA | Edited by - Bhavishya Shetty | Last Updated : Dec 7, 2022, 11:14 AM IST
    • ಹೆಚ್ಎಸ್ಆರ್ ಲೇಔಟ್ ನಲ್ಲಿ ಕನ್ನಡ ಬಾವುಟ ಸುಟ್ಟ ಪ್ರಕರಣ
    • ಪೊಲೀಸರ ಮೇಲಿನ ಸೇಡಿನಿಂದ ಕನ್ನಡ ಬಾವುಟ ಸುಟ್ಟ ಟೆಕ್ಕಿ
    • ಸೇಡು ತೀರಿಸಿಕೊಳ್ಳಲು 2 ವರ್ಷದ ಬಳಿಕ ಈ ರೀತಿಯ ಕೃತ್ಯ ಎಸಗಿದ್ದಾನೆ
Kannada flag burnt Case: ಪೊಲೀಸರ ಮೇಲಿನ ಸೇಡು-ಮಿಡೀಯಾ ಕವರೇಜ್ ಗಾಗಿ ಕನ್ನಡ ಬಾವುಟ ಸುಟ್ಟಿದ್ದ ಟೆಕ್ಕಿ..! title=
Kannada flag

Kannada flag burnt Case: ಬೆಂಗಳೂರು: ಹೆಚ್ಎಸ್ಆರ್ ಲೇಔಟ್ ನಲ್ಲಿ ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದೆ. ಬಂಧಿತ ಆರೋಪಿ ಅಮೃತೇಶ್ ಲಾಕ್ ಡೌನ್ ಸಂದರ್ಭದಲ್ಲಿನ ಸೇಡು ತೀರಿಸಿಕೊಳ್ಳಲು ಹೋಗಿ ಕನ್ನಡ ಬಾವುಟ ಸುಟ್ಟು ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಗುಜರಾತ್ ಚುನಾವಣೆ ಕರ್ನಾಟಕ ಚುನಾವಣೆ ಮೇಲೂ ಪ್ರಭಾವ ಬೀರುತ್ತೆ- ಶಾಸಕ ಅರವಿಂದ್ ಬೆಲ್ಲದ್

ಐಐಟಿಯಲ್ಲಿ ಓದಿದ್ದ ಈತ ಪೊಲೀಸರ ಮೇಲಿನ ಸೇಡು ತೀರಿಸಿಕೊಳ್ಳಲು 2 ವರ್ಷದ ಬಳಿಕ ಈ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಗೊತ್ತಾಗಿದೆ.

ಬಾವುಟ ಸುಡಲು ಕಾರಣ..?

ಬಂಧಿತ ಆರೋಪಿ ಅಮೃತೇಶ್ ಉತ್ತರ ಪ್ರದೇಶ ಮೂಲದವನಾಗಿದ್ದು, ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದ. 2019 ರ ಲಾಕ್ ಡೌನ್ ನಲ್ಲಿ ಈತ ಊರಿಗೆ ತೆರಳಬೇಕಾಗಿತ್ತು. ಆದರೆ ಈ ಸಮಯದಲ್ಲಿ ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲಿದ್ದ ಕಾರಣ ಇದು ಸಾಧ್ಯವಾಗಿರಲಿಲ್ಲ. ಈತ ಲಾಕ್ ಡೌನ್ ವೇಳೆ ಊರಿಗೆ ತೆರಳಲು ಯತ್ನಿಸಿದಾಗ  ಪೊಲೀಸರ ಕೈಲಿ ಏಟು ತಿಂದು ರೂಮಿಗೆ ವಾಪಸ್ಸಾಗಿದ್ದ. ಹೀಗಾಗಿ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಅಮೃತೇಶ್ ದ್ವೇಷ ಬೆಳಸಿಕೊಂಡಿದ್ದ.

ಇದನ್ನೂ ಓದಿ: ‘ಪಿಎಫ್ಐ ಮತ್ತು ಅದರ ಅಂಗ ಸಂಸ್ಥೆಗಳಿಗೆ ಸೇರಿದ್ರೆ ಎಚ್ಚರ’: ಪೊಲೀಸರಿಂದ ಬಂತು ವಾರ್ನಿಂಗ್

ಎರಡೂವರೆ ವರ್ಷದ ಬಳಿಕ ಸೇಡು ತೀರಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದ ಈತ, ಕನ್ನಡ ಬಾವುಟ ಸುಟ್ಟರೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತೆ. ಮಾಧ್ಯಮದವರು ಕವರೇಜ್ ಮಾಡಿ ತನ್ನನ್ನು ಊರಿಗೆ ಹೋಗಲು ಬಿಡದ ಪೊಲೀಸರನ್ನ ಸಸ್ಪೆಂಡ್ ಮಾಡುತ್ತಾರೆ ಎಂದು ಭಾವಿಸಿದ್ದ. ಆದರೆ ಕನ್ನಡದ ಅನ್ನ ತಿಂದು ಬಾವುಟ ಸುಟ್ಟಿದ್ದಕ್ಕಾಗಿ ಲಕ್ಷ ಲಕ್ಷ ದುಡಿಬೇಕಾದವನು ಸದ್ಯ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾನೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News