ಬೆಂಗಳೂರು, ಏ, 6; ಕೊರಟಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್. ಅನಿಲ್ ಕುಮಾರ್ ಅವರ ಬಗ್ಗೆ ಚುನಾವಣಾ ಹೊಸ್ತಿಲಲ್ಲಿ ರಾಜಕೀಯ ಸಂಸ್ಕೃತಿ ಮೀರಿ, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯ ಎಂದು ಕರ್ನಾಟಕ ಅಹಿಂದ ಹೋರಾಟ ಸಮಿತಿ ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೋರಾಟ ಸಮಿತಿ ರಾಜ್ಯಾದ್ಯಕ್ಷ ಎಂ.ಮುತ್ತುರಾಜ್, ಬಿ.ಎಚ್. ಅನಿಲ್ ಕುಮಾರ್ ಬಗ್ಗೆ ವಕೀಲರೂ ಆದ ಆಮ್ ಆದ್ಮಿ ಪಕ್ಷದ ಮುಖಂಡ ಬ್ರಿಜೇಶ್ ಕಾಳಪ್ಪ, ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅವರು 2016 ರಿಂದ 2019 ರ ವರೆಗೆ ಬಿಬಿಎಂಪಿ ಆಯುಕ್ತರಾಗಿರಲಿಲ್ಲ. ಹೀಗಿದ್ದರೂ ಈ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿದ್ದಾಗಿ ಸತ್ಯಕ್ಕೆ ದೂರವಾದ ಟೀಕೆಗಳನ್ನು ಮಾಡಿದ್ದಾರೆ. ವಾಸ್ತವವಾಗಿ ಬಿ.ಎಚ್. ಅನಿಲ್ ಕುಮಾರ್ 2019 ರ ಆಗಸ್ಟ್ ನಲ್ಲಿ ಬಿಬಿಎಂಪಿ ಗೆ ನಿಯೋಜನೆಗೊಂಡರು. ಹೀಗಿರುವಾಗ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ಮುಖಂಡರ ಅಣತಿಯಂತೆ ಟೀಕೆ ಟಿಪ್ಪಣಿ ಮಾಡಿ ಟಿಕೆಟ್ ಕೊರಟಗೆರೆ ತಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರ್ಯಾಗರ್ ಹಿಡಿದು ರಸ್ತೆಯಲ್ಲೇ ಬೆದರಿಕೆ ಒಡ್ಡಿದ ಟಾಟಾ ಏಸ್ ಚಾಲಕ
ಕೋವಿಡ್ ಸಂಕಷ್ಟದಲ್ಲಿ ಜೀವ ಲೆಕ್ಕಿಸದೇ ಬಿ.ಎಚ್. ಅನಿಲ್ ಕುಮಾರ್ ಕಾರ್ಯನಿರ್ವಹಿಸಿದ್ದಾರೆ. ಕೊರೋನ ಸೋಂಕಿತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿದ್ದಲ್ಲದೇ ಮೃತಪಟ್ಟ ರೋಗಿಗಳ ಮನೆಗಳಿಗೆ ತೆರಳಿ ಪರಿಹಾರ ನೀಡಿ ಸ್ಥೈರ್ಯ ತುಂಬಿದ್ದಾರೆ. ಬೆಂಗಳೂರನ್ನು ಸಾಂಕ್ರಾಮಿಕದಿಂದ ಸುರಕ್ಷಿತ ತಾಣವಾಗಿಸಲು ಸಾಕಷ್ಟು ಶ್ರಮಿಸಿದ್ದಾರೆ. ಆಯುಕ್ತರಾಗಿದ್ದಾಗ ಯಾವುದೇ ಸಂಘ ಸಂಸ್ಥೆಗಳು ಇವರ ಬಗ್ಗೆ ಆರೋಪಿಸಿ ದೂರು ಸಲ್ಲಿಸಿಲ್ಲ, ಪ್ರತಿಭಟನೆಗಳು ನಡೆದಿಲ್ಲ. ನಿಷ್ಪಕ್ಷಪಾತ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿದ್ದಾರೆ. ಸಾಮಾಜಿಕ ಕಳಕಳಿಯುಳ್ಳ ಬಿ.ಎಚ್. ಅನಿಲ್ ಕುಮಾರ್ ವಿರುದ್ಧ ಅನಗತ್ಯ ದೋಷಾರೋಪಣೆ ಸರಿಯಲ್ಲ ಎಂದರು.
ಬಿಬಿಎಂಪಿಯಲ್ಲಿ 31 ಪಾರ್ಕಿಂಗ್ ನಿರ್ವಹಣೆಯನ್ನು ಯಾವುದೇ ಸಂಸ್ಥೆಗೆ ವಹಿಸಿಲ್ಲ. ಸ್ವತಃ ಖಾಸಗಿ ಸಂಸ್ಥೆಗಳು ಬಿಬಿಎಂಪಿಗೆ ಪಾರ್ಕಿಂಗ್ ಶುಲ್ಕ ಪಾವತಿಸಿದ್ದು, ಇದರಿಂದ ಬಿಬಿಎಂಪಿ ಆದಾಯ ಹೆಚ್ಚಾಗಿದೆ. ಕೊಳವೆ ಬಾವಿ ಕೊರೆಸಲು 969 ಕೋಟಿ ರೂ ಪೈಕಿ 318 ಕೋಟಿ ರೂ ವೆಚ್ಚವಾಗಿದೆ. ಉಳಿಕೆ ಹಣದ ಬಗ್ಗೆ ಶಂಕೆ ಇರುವವರು ಬಿಬಿಎಂಪಿ ಲೆಕ್ಕಪತ್ರ ಪರಿಶೀಲನೆ ಮಾಡಬಹುದು. ಒಂದು ವರ್ಷದ ಅವಧಿಗೆ ರಾಜಕಾಲುವೆಯಲ್ಲಿ ಹೂಳೆತ್ತಲು 36 ಕೋಟಿ ರೂ ವೆಚ್ಚ ಮಾಡಿದ್ದು, ಇದರಿಂದ ಭಾರೀ ಮಳೆ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಲು ಸಾಧ್ಯವಾಗಿದೆ ಎಂದು ಎಂ. ಮುತ್ತುರಾಜ್ ಹೇಳಿದರು.
ಇದನ್ನೂ ಓದಿ: ಮಾಧ್ಯಮಗಳಲ್ಲಿ ಪ್ರಚಾರದ ಪ್ರಸಾರಕ್ಕೆ ಅನುಮತಿ ಕಡ್ಡಾಯ: ಉಲ್ಲಂಘನೆ ಆದ್ರೆ ಕಾನೂನು ಕ್ರಮ
ಸುದ್ದಿಗೋಷ್ಠಿಯಲ್ಲಿ ,ದಲಿತ ಮಹಾಸಭಾ ರಾಜ್ಯಾಧ್ಯಕ್ಷ ಮುನಿರಾಜು ಹೈಕೋರ್ಟ್ ನ್ಯಾಯವಾದಿ ಚೆಲುವರಾಜು ಹಾಜರಿದ್ದರು. ಹೋರಾಟ ಸಮಿತಿ ಪದಾಧಿಕಾರಿಗಳು, ಶ್ರೀನಿವಾಸ್ ಮೂರ್ತಿ,
ಮಾದಿಗ ದಂಡೋರದ ರಾಜ್ಯ ಹಿರಿಯ ಉಪಾಧ್ಯಕ್ಷರು ಉಪಸ್ಥಿತರಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.