ಹುಬ್ಬಳ್ಳಿ: ನನ್ನ ಅಂದಾಜಿನ ಪ್ರಕಾರ ಪ್ರತಿ ವರ್ಷ ಈ ಯೋಜನೆಗಳಿಗೆ 85 ಸಾವಿರ ಕೋಟಿ ಬೇಕಾಗುತ್ತೆ ಇದಕ್ಕೆ ಹಣವನ್ನು ಎಲ್ಲಿಂದ ತರ್ತೀರಿ? ಅಂತ ಇದಕ್ಕೆ ಉತ್ತರ ಕೊಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.
ಇದೆ ವೇಳೆ ಒಡಿಶಾ ದುರಂತದ ಬಗ್ಗೆ ಮಾತನಾಡಿದ ಅವರು 'ಒಡಿಶಾ ರೈಲು ದುರಂತ ಅತ್ಯಂತ ನೋವು, ದುಃಖ ತಂದಿದೆ ಕಳೆದ 3 ವರ್ಷ ದಿಂದ ಯಾವುದೇ ರೈಲು ಅಪಘಾತ ಆಗಿರಲಿಲ್ಲ, ಈಗ ದೊಡ್ಡ ದುರಂತ ಆಗಿ 300 ಕ್ಕೂ ಹೆಚ್ಚು ಜನ ಮೃತ ಪಟ್ಟಿದ್ದಾರೆ ಎನ್ನುವ ವರದಿ ನೋವು ತಂದಿದೆ. ಪ್ರಧಾನ ಮಂತ್ರಿ ಹಾಗೂ ರೈಲ್ವೆ ಮಂತ್ರಿ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯ ನಡಿತಾ ಇದೆ, ಇಂತಹ ಘಟನೆ ಮುಂದೆ ನಡೆಯದಂತೆ ಸಂಪೂರ್ಣ ವಿಚಾರಣೆ ಮಾಡಲಾಗುತ್ತಿದೆ. ಮುಂದೆ ಈ ರೀತಿ ಆಗದಂತೆ ಸಾಕಷ್ಟು ಎಚ್ಚರ ವಹಿಸಿ ಜೀರೋ ಆಕ್ಸಿಡೆಂಟ್ ಮಾಡುವಂತೆ ಪ್ರಯತ್ನ ಮಾಡ್ತೇವೆ. ಮೃತರಿಗೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ, ಚಿಕಿತ್ಸೆಯನ್ನು ಮಾಡಿಸ್ತೀವಿ. ಮೃತರ ಬಂಧುಗಳಿಗೆ ದುಃಖ ಭರಿಸುವ ಶಕ್ತಿ ಕೊಡಲಿ ಎಂದು ಅವರು ಸಂತಾಪ ವ್ಯಕ್ತಪಡಿಸಿದರು.
ಇದೇ ವೇಳೆ ಕರ್ನಾಟಕದವರಿದ್ದಾರಾ? ಎಂಬುದರ ಬಗ್ಗೆ ವರದಿ ತೆಗೆದುಕೊಳ್ಳುತ್ತಾ ಇದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರು ಹೇಳಿದರು.
ಇದೇ ವೇಳೆ ರಾಜ್ಯ ಸರ್ಕಾರದ ಗ್ಯಾರೆಂಟಿ ವಿಚಾರವಾಗಿ ಮಾತನಾಡಿದ ಅವರು 'ರಾಜ್ಯ ಸರ್ಕಾರ ಹೇಳಿದೊಂದು ಮಾಡಿದೊಂದು ಎಲ್ಲರಿಗೂ 200 ಯುನಿಟ್ ನೀವು ಕೊಡ್ತಿಲ್ಲ.ಈಗ ನೀವು ಕಂಡೀಷನ್ ಹಾಕಿದ್ದೀರಿ ಕಡಿಮೆ ಬಳಸುವವರಿಗೆ ಏನು ಉಪಯೋಗವೆ ಇಲ್ಲದ ಸ್ಥಿತಿ ಮಾಡಿತ್ತಿದ್ದೀರಿ, ಇದಕ್ಕೆ ನೀವು ಸ್ಪಷ್ಟ ಉತ್ತರ ನೀಡಬೇಕು. ಇದರಲ್ಲಿ ಗೊಂದಲಗಳಿವೆ ಹೆಚ್ಚು ಬಳಸುವರ ಬಗ್ಗೆ ಗೊಂದಲ ಇದೆ. ಜನಕ್ಕೆ ಕಾಂಗ್ರೆಸ್ ಪಕ್ಷ ಮೋಸ ಮಾಡಿದೆ ಎಂಬುದು ಸ್ಪಷ್ಟವಾಗಿದೆ. 10 ಕೆಜಿ ಅಕ್ಕಿ ಅಂತ ಭಾಷಣ ಮಾಡಿದ್ರಿ, 5 ಕೆಜಿ ಭಾರತ ಸರ್ಕಾರದ ಅಕ್ಕಿ ಸೇರಿ 10 ಕೊಡ್ತೀರಾ? ಅಥವಾ ನಿಮ್ಮದೇ 10 ಕೆಜಿ ಕೊಡ್ತೀರಾ? ಮೊದಲು ಸ್ಪಷ್ಟಪಡಿಸಿ, ಮುಖ್ಯಮಂತ್ರಿಗಳು ಇದಕ್ಕೆ ಉತ್ತರ ನೀಡಬೇಕು, ಉಡಾಫೆ ಉತ್ತರ ನಡೆಯುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಗೃಹಲಕ್ಷ್ಮಿಯೋಜನೆಗೆ ದಾಖಲಾತಿ ಕಡ್ಡಾಯ ಸಿಎಂ ಸಿದ್ದರಾಮಯ್ಯ
ಯುವನಿಧಿಯಲ್ಲಿ ಎಲ್ಲಾ ಪದವೀಧರರಿಗೆ ಕೊಡ್ತಿವಿ ಅಂದಿದ್ರಿ ಎಲ್ಲಾ ಪದವೀಧರ ಯುವಕರಿಗೆ 2-3 ಸಾವಿರ 2022-23 ರಲ್ಲಿ ಪಾಸಾದವರಿಗೆ ಕೊಡ್ತೀನಿ ಅಂತಿದ್ದೀರಿ, ಮೊದಲು ಓದಿದವರು ನಿರುದ್ಯೋಗಿಗಳಿಲ್ವಾ? ಮೊದಲೇ 2022-23 ರಲ್ಲಿ ಪಾಸಾದವರಿಗೆ ಅಷ್ಟೇ ಕೊಡ್ತೀವಿ ಅಂತ ಪದವೀಧರರಾದ ನಂತರ 180 ದಿನ ಉದ್ಯೋಗ ಇಲ್ಲದಂತೆ ಇರಬೇಕು ಅಂತಿದ್ದೀರಾ? ಕಾಂಗ್ರೆಸ್ ಪಾರ್ಟಿ ಶುದ್ಧ ಮೋಸ ಮಾಡಿದೆ ಎಂದು ಅವರು ದೂರಿದರು.
ಗೃಹ ಲಕ್ಷ್ಮಿ ಯೋಜನೆಯಲ್ಲಿ ಬಂದ ತಕ್ಷಣ 2 ಸಾವಿರ ಅಂದಿದ್ರಿ ಇನ್ನೂ ಪ್ರಿನ್ಸಿಪಾಲ್ ಅಪ್ರುವಲ್ ಅಂತ ಮೊದಲು ಡ್ರಾಮಾ ಮಾಡಿದ್ರು, ಈಗ ಜುಲೈ 15 ರ ವರೆಗೆ ಅಪ್ಲಿಕೇಶನ್ ಆಗಸ್ಟ್ 15 ರ ವರೆಗೆ ಪರಿಶೀಲನೆ ಅಂತೀರಾ? ಒಂದೇ ಮನೇಲಿ ಎರಡು ಹಾಕಿದ್ರೆ ಯಾರಿಗೆ ಕೊಡ್ತೀರಿ ಬೇಕಂತಲೇ ಗೊಂದಲ ಸೃಷ್ಟಿಸುವುದು ಕಾಡು ದೇವರ ಕಾಟ ಕಳೆಯುವ ಅಂತ ನಮ್ಮ ಉತ್ತರ ಕರ್ನಾಟಕದಲ್ಲಿ ಗಾದೆ ಇದೆ, ಅದರಂತೆ ಕಾಂಗ್ರೆಸ್ ಪಕ್ಷ ಮಾಡುತ್ತಿದೆ ಆಮಿಷ ಒಡ್ಡಿ ಮತ ತೆಗೆದುಕೊಂಡು ಮೋಸ ಮಾಡಿದ್ದಾರೆ ಎಂದು ಟೀಕಿಸಿದರು.
ಯುವನಿಧಿ ಯೋಜನೆಯಲ್ಲಿ ಭಜರಂಗದಳದ ನಿರುದ್ಯೋಗಿಗಳಿಗೂ ಕೊಡ್ತೀವಿ ಎಂದ ವಿಚಾರ ಅಹಂಕಾರದ ಮಾತಿದು, ಕಾಂಗ್ರೆಸ್ ಪಾರ್ಟಿ ನೆನಪಿಟ್ಟುಕೊಳ್ಳಬೇಕು.2014 ರಿಂದ ಲೋಕಸಭಾ ಯಲ್ಲಿ ವಿರೋಧ ಪಾರ್ಟಿ ನು ಆಗಿಲ್ಲ,ಬಿಜೆಪಿ ಮಾಜಿ ಮುಖ್ಯಮಂತ್ರಿ ಹಾಗೂ ಭಜರಂಗದಳದ ಬಗ್ಗೆ ಅಸಭ್ಯವಾಗಿ ಮಾತನಾಡುತ್ತಿದ್ದಾರೆ. ನಿಮ್ಮ ಯೋಗ್ಯತೆ ಏನಿತ್ತು? 125 ವರ್ಷದ ಹಳೆಯ ಪಕ್ಷ ಅಂತೀರಿ ಅನೇಕ ರಾಜ್ಯದಲ್ಲಿ ನೀವು ಅಸ್ತಿತ್ವದಲ್ಲೇ ಇಲ್ಲಾ ಎಂದು ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಜೀರೋ ಇದ್ದೀರಿ ನೀವು ಬೊಮ್ಮಾಯಿ, ಶೋಭಾ, ಕಟೀಲ್ ನಿಮಗೂ ಕೊಡ್ತೀವಿ ಅಂದಿದ್ದು ಅಹಂಕಾರದ ಮಾತು ಸಿದ್ದರಾಮಯ್ಯ ಅವರ ಪಕ್ಷದವರಿಗೆ ರಾಜಕೀಯ ಸೌಜನ್ಯ ಇದ್ದರೆ ಗುಜರಾತ್, ಉತ್ತರಪ್ರದೇಶ ಶೂನ್ಯ ಮಹಾರಾಷ್ಟದಲ್ಲಿ ನಿಮ್ಮ ಪಕ್ಷದ ಒಂದು ಎಂಪಿ ಇಲ್ಲ, ನೀವು ರಾಜ್ಯದಲ್ಲಿ ಬಂದ ನಂತರ ಅಹಂಕಾರ ಮಾತನಾಡಿದ್ದು, ಜನ ನಿಮಗೆ ಉತ್ತರ ನೀಡ್ತಾರೆ ಎಂದು ಹೇಳಿದರು.
ಧಾರವಾಡ ಬೆಳಗಾವಿ ರೈಲ್ವೆ ಕಾಮಗಾರಿ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ರು ದುಡ್ಡು ಇಟ್ಟಿದ್ದೇವೆ ಅಂತ ದುಡ್ಡನ್ನು ತಕ್ಷಣ ಖರ್ಚು ಮಾಡಿ ಆ ದುಡ್ಡನ್ನು ಇವರು ಗ್ಯಾರೆಂಟಿ ಯೋಜನೆಗೆ ಹಾಕ್ತಾರೆ ಅಂತ ಅನುಮಾನ ಇದೆ. ಸಿದ್ದರಾಮಯ್ಯ ಅವರು ಈ ಗ್ಯಾರೆಂಟಿಗಳಿಗೆ ದುಡ್ಡು ಎಲ್ಲಿಂದ ತರ್ತೀರಿ ಅಂತನೂ ಸ್ಪಷ್ಟ ಪಡಿಸಿಲ್ಲ, ಆಮೇಲೆ ಹೇಳ್ತಿನಿ ಅಂತಾರೆ.ಯಾಕೆ ಆಮೇಲೆ ಹೇಳ್ತಿರಿ ? 11-12 ಸಲ ಬಜೆಟ್ ಮಂಡಿಸಿದವರಿಗೆ ದುಡ್ಡು ತರೋದು ಎಲ್ಲಿಂದ ಅಂತ ಹೇಳ್ಬೇಕು ಎಂದು ಹೇಳಿದರು.
ಇದನ್ನೂ ಓದಿ: ಬಾಲಸೋರ್‌ನ ಬಹನಾಗ ನಿಲ್ದಾಣದ ಬಳಿ 3 ರೈಲು ಡಿಕ್ಕಿ
ಈಗಾಗಲೇ 5 ಲಕ್ಷ 65 ಸಾವಿರ ಕೋಟಿ ಕರ್ನಾಟಕದ ಸಾಲ ಇದೆ, ವರ್ಕ್ ಆರ್ಡರ್ ಕೊಟ್ಟಂತ ಎಲ್ಲಾ ಕಾಮಗಾರಿಗಳನ್ನು ತಡೆ ಹಿಡಿದಿದ್ದಾರೆ ಅಂದ್ರೆ ಕಮಿಷನ್ ಹೊಡೆಯೋಕೆ ತಡೆ ಹಿಡಿದಿದ್ದಾರೆ ಹೇಗೆ? ಅದಕ್ಕೆ ಆನ್ಲೈನ್ ಅಪ್ಲಿಕೇಶನ್ ಮಾಡಿದ್ದಾರೆ, ಒಂದು ಮನೆಯಿಂದ ಇಬ್ಬರೂ ಹಾಕಿದ್ರೆ ಎರಡು ರಿಜೆಕ್ಟ್ ಆಗ್ತವೆ ಎಂದು ಅವರು ಹೇಳಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.